Breaking News

ಸಚಿವ ಕತ್ತಿ ನಿಧನದಿಂದ ಬೆಳಗಾವಿಗೆ ತುಂಬಲಾರದ ನಷ್ಟವಾಗಿದೆ.-ಸತೀಶ ಜಾರಕಿಹೊಳಿ.!

Spread the love

ಸಚಿವ ಕತ್ತಿ ನಿಧನದಿಂದ ಬೆಳಗಾವಿಗೆ ತುಂಬಲಾರದ ನಷ್ಟವಾಗಿದೆ.-ಸತೀಶ ಜಾರಕಿಹೊಳಿ.!


ಗೋಕಾಕ: ಹಿರಿಯ ರಾಜಕಾರಣಿ ಮತ್ತು ಆತ್ಮೀಯರಾಗಿದ್ದ ಸಚಿವ ಉಮೇಶ ಕತ್ತಿ ಅವರ ನಿಧನ ಸುದ್ದಿ ತಿಳಿದು ತೀವ್ರ ನೋವಾಗಿದೆ. ಅವರಿಗೆ ನನ್ನ ಅಂತಿಮ ಗೌರವ ನಮನಗಳನ್ನು ಸಲ್ಲಿಸುತ್ತ ಅವರ ಕುಟುಂಬ ಮತ್ತು ಅಭಿಮಾನಿ ಬಳಗಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಉಮೇಶ ಕತ್ತಿ ಅವರು ಉತ್ತಮ ಹೃದಯವಂತಿಕೆಯ ವ್ಯಕ್ತಿತ್ವ. ನೇರ ಮಾತುಗಳು. ನಿಷ್ಠೂರತನವೂ ಅವರಲ್ಲಿತ್ತು. ಇವರ ಅಕಾಲಿಕ ನಿಧನದ ಸುದ್ದಿ ತಿಳಿದು ನನಗೆ ದಿಗ್ಭ್ರಮೆಯಾಯಿತು. ರಾಜ್ಯದಲ್ಲಿಯೇ ಅತೀ ಹಿರಿಯ ಶಾಸಕರಾಗಿದ್ದರು. ಅಭಿವೃದ್ಧಿಪರ ಚಿಂತನೆಗಳು ಮನೆ ಮಾತಾಗಿದ್ದವು. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸಹಕಾರಿ ಕ್ಷೇತ್ರಕ್ಕೂ ಇವರ ಕೊಡುಗೆ ಅನನ್ಯವಾಗಿದೆ. ಕತ್ತಿಯವರ ನಿಧನದಿಂದ ಬೆಳಗಾವಿ ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿದೆ. ಉತ್ತಮ ಗೆಳೆಯ, ಆಪ್ತ ಒಡನಾಡಿಯನ್ನು ಕಳೆದುಕೊಂಡು ದು:ಖಿತನಾಗಿದ್ದೇನೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.
ಉಮೇಶ್ ಕತ್ತಿಯವರ ಅಗಲಿಕೆಯ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ, ಅವರ ಅಭಿಮಾನಿಗಳಿಗೆ ನೀಡಲೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಪ್ರಾರ್ಥಿಸಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

two × three =