Breaking News

ರೈತರ ಏಳ್ಗೆಗಾಗಿ ಕೃಷಿ ಕ್ಷೇತ್ರದಲ್ಲಿ ಕೆಲವು ತಿದ್ದುಪಡಿಯನ್ನು ತರಲಾಗಿದೆ-ಬಸವರಾಜ ಹಿರೇಮಠ.!

Spread the love


ಯುವ ಭಾರತ ಸುದ್ದಿ, ಗೋಕಾಕ್: ರೈತರ ಆದಾಯವನ್ನು ೨೦೨೨ರ ಒಳಗಾಗಿ ದ್ವಿಗುಣಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತ್ರತ್ವದ ಸರಕಾರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ದೂರದೃಷ್ಟಿಯ ಅನೇಕ ಅನೇಕ ಯೋಜನೆಗಳನ್ನು ರೂಪಿಸಿದೆ. ಅಲ್ಲದೇ ರೈತರ ಏಳ್ಗೆಗಾಗಿ ಕೃಷಿ ಕ್ಷೇತ್ರದಲ್ಲಿ ಕೆಲವು ತಿದ್ದುಪಡಿಯನ್ನು ತರಲಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಹಿರೇಮಠ ಹೇಳಿದರು.
ಅವರು, ನಗರದ ಸಚಿವ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಕರೇದ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿ, ೨೦೧೧ರಲ್ಲಿ ಶರದ್ ಪವಾರ ಅವರು ಕೃಷಿ ಮಂತ್ರಿಯಾಗಿದ್ದಾಗ ಇದೇ ಮಾದರಿಯ ಪ್ರಸ್ತಾವವನ್ನು ಮುಂದಿಟ್ಟಿದ್ದು, ೨೦೧೪ ಮತ್ತು ೧೯ರ ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ಈ ತಿದ್ದುಪಡಿ ಅಂಶಗಳನ್ನು ಸೇರಿಸಲಾಗಿದ್ದು, ವಿರೋಧ ಪಕ್ಷಗಳು ಕೇಂದ್ರ ಸರಕಾರದ ಮೇಲೆ ರೈತರನ್ನು ಎತ್ತಿಕಟ್ಟಿ ರಾಜಕೀಯ ಷಡ್ಯಂತ್ರ ಮಾಡುತ್ತಿವೆ ಎಂದು ಆರೋಪಿಸಿದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಕೃಷಿ ಕ್ಷೇತ್ರದ ಕಾಯ್ದೆಯ ತಿದ್ದುಪಡಿ ರೈತರಿಗೆ ಮುಂಬರುವ ದಿನಗಳಲ್ಲಿ ಆರ್ಥಿಕವಾಗಿ ಸಬಲರಾಗಲು ಅನುಕೂಲಕರವಾಗಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಚ್ಯಾಳಿ, ರೈತ ಮೋರ್ಚಾ ಅಧ್ಯಕ್ಷ ಸುರೇಶ ಪತ್ತಾರ, ಮಂಜುನಾಥ ಮಾವರಕರ, ಬಾಬು ಮುಳಗುಂದ, ಮಂಜು ಪ್ರಭುನಟ್ಟಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

20 − 8 =