Breaking News

ಬದುಕಿಗೆ ವಿವೇಕಾನಂದ ತತ್ವಗಳು ದಾರಿದೀಪ : ವಿವೇಕಾನಂದರ ಜಯಂತಿಯಲ್ಲಿ ಲಕ್ಷ್ಮೀ ಕುಲಕರ್ಣಿ ಅಭಿಪ್ರಾಯ

Spread the love

ಬದುಕಿಗೆ ವಿವೇಕಾನಂದ ತತ್ವಗಳು ದಾರಿದೀಪ : ವಿವೇಕಾನಂದರ ಜಯಂತಿಯಲ್ಲಿ ಲಕ್ಷ್ಮೀ ಕುಲಕರ್ಣಿ ಅಭಿಪ್ರಾಯ

ಯುವ ಭಾರತ ಸುದ್ದಿ  ಚನ್ನಮ್ಮ ಕಿತ್ತೂರು :
ಸ್ವಾಮಿ ವಿವೇಕಾನಂದ ತತ್ವಗಳು ಯುವ ಪೀಳಿಗೆಯ ಬದುಕಿಗೆ ದಾರಿದೀಪವಾಗಿವೆ. ವಿವೇಕಾನಂದ ಏಕಾಗ್ರತೆ, ಶ್ರದ್ಧೆ, ಪ್ರಾಮಾಣಿಕತೆಯನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಮಹಿಳಾ ಮಂಡಳ ಸದಸ್ಯೆ ಲಕ್ಷ್ಮೀ ಕುಲಕರ್ಣಿ ಹೇಳಿದರು.

ಪಟ್ಟಣದ ಸಂಕಲ್ಪ ಕಲಾ ಸಾಂಸ್ಕೃತಿಕ ಫೌಂಡೇಶನ್, ಪ್ರಣವ ಯೋಗ ಸಂಘಟನೆಯ ವತಿಯಿಂದ ಈಚೆಗೆ ಆಚರಿಸಲಾದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿದ ಅವರು, ವಿವೇಕಾನಂದರ ವಾಣಿಯಂತೆ ಗುರಿ ಮುಟ್ಟುವರೆಗೂ ಯುವಕರು ಪ್ರಯತ್ನ ನಿಲ್ಲಿಸದೇ, ಮುನ್ನಗ್ಗಬೇಕು. ಗೆದ್ದರೇ ಗುರಿ ಸಾಧನೆಯ ಖುಷಿ, ಸೋತರೇ ಅನುಭವಿಯಾಗಿ ಬೇರೆಯವರಿಗೆ ಮಾರ್ಗದರ್ಶನ ಮಾಡಬಹುದು ಎಂದರು.

ಶಿಕ್ಷಕಿ ಪ್ರಭಾ ಲದ್ದಿಮಠ ಮಾತನಾಡಿ, ವಿವೇಕಾನಂದರು ಭಾರತದ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಗುರುಗಳ ಮಾರ್ಗದರ್ಶನದಿಂದ ಸತತ ಪ್ರಯತ್ನದಿಂದ ಅಭ್ಯಸಿಸಿದರೇ ಗುರಿ ಸಾಧನೆ ಸುಲಭವಾಗುತ್ತದೆ. ವಿವೇಕಾನಂದರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಂಡರೇ ಭವ್ಯ ಭಾರತದ ನಿರ್ಮಾಣವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಗುರುಗಳನ್ನು ಶ್ರದ್ಧಾಭಕ್ತಿಯಿಂದ ಕಾಣಬೇಕು ಎಂದರು.

ಶಿಕ್ಷಕಿ ಸವಿತಾ ಕುಲಕರ್ಣಿ ಮಾತನಾಡಿ, ಪ್ರಸ್ತುತವಾಗಿ ಮಕ್ಕಳ ಮನಸ್ಸಿನ ಮೇಲೆ ಟಿವಿ, ಮೊಬೈಲ್‌ಗಳು ವ್ಯತರಿಕ್ತವಾಗಿ ಪರಿಣಾಮ ಬೀರುತ್ತಿವೆ. ಆದ್ದರಿಂದ ಇಂತಹ ಸಮೂಹ ಸಂವಹನ ಮಾಧ್ಯಮಗಳಿಂದ ವಿದ್ಯಾರ್ಥಿಗಳು ದೂರವಿದ್ದು, ಗುರಿಯಡೆಗೆ ಸಾಗಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಕಲೆ, ಸಾಹಿತ್ಯಕ್ಕೆ ಯುವಕರು ಕೊಡುಗೆ ನೀಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಸಂಕಲ್ಪ ನೃತ್ಯಾಲಯದ ನೃತ್ಯ ನಿರ್ದೇಶಕಿ ಸವಿತಾ ಹಿರೇಮಠ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರವಂತರಾಗಬೇಕು. ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ಶಿಕ್ಷಣದಲ್ಲಿ ಸಾಧಿಸುವುದು ಸುಲಭವಾಗುತ್ತದೆ. ನಮ್ಮಿಂದ ಎಲ್ಲವೂ ಸಾಧ್ಯ, ಎಲ್ಲವನ್ನೂ ನಾನು ಮಾಡಬಲ್ಲೇ ಎಂಬ ಮನೋಭಾವನೆ ಹೊಂದಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯಡೆಗೆ ಮುನ್ನುಗ್ಗಿದ್ದರೇ ಯಶಸ್ಸು ಸುಲಭವಾಗುತ್ತದೆ. ಮಕ್ಕಳು ಎಲ್ಲ ಕೆಲಸಗಳನ್ನು ಮಾಡಲು ಸದಾ ಸಿದ್ಧರಿರಬೇಕು ಎಂದರು.

ಬಳಿಕ ಮಕ್ಕಳಿಂದ ಸ್ವಾಮಿ ವಿವೇಕಾನಂದರ ವೇಷಭೂಷಣಗಳನ್ನು ಧರಿಸಿಗಳು, ಹಾಡು, ಘೋಷವಾಕ್ಯಗಳು, ಭಾಷಣಗಳನ್ನು ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಸಂಕಲ್ಪ ನೃತ್ಯಾಲಯದ ಸದಸ್ಯರಾದ ಸ್ಮಿತಾ ಲಂಗೋಟಿ, ಪ್ರೇಮಾ ಶೆಟ್ಟರ್, ನಾಗರತ್ನಾಮ ಲಾವಣ್ಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪ್ರಣವ ಯೋಗ ಕೇಂದ್ರದ ಯೋಗ ಶಿಕ್ಷಕಿ ಸೌಮ್ಯ ರಾಘವೇಂದ್ರ ವಂದಿಸಿದರು.

ಕೋಟ್…
ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೇ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರಪಂಚವು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ವಿವೇಕಾನಂದರಂತೆ ಯುವಕರು ಸಾಧನೆಗೈಯಬೇಕು. ಪ್ರಸ್ತುತವಾಗಿ ಭಾರತವು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಯುವಕರು ತಮ್ಮ ಕನಸಿಗೆ ಪೂರಕವಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿರ್ದಿಷ್ಟ ಗುರಿ, ಪ್ರಾಮಾಣಿಕ ಪರಿಶ್ರಮ, ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಿದರೇ ಗುರಿಯನ್ನು ಸುಲಭವಾಗಿ ತಲುಪಬಹುದು.
*ಸೌಮ್ಯ ರಾಘವೇಂದ್ರ, ಪ್ರಣವ ಯೋಗ ಕೇಂದ್ರದ ಯೋಗ ಶಿಕ್ಷಕಿ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

5 × 4 =