ಮೋದಿ ಭೇಟಿಯಾದ ಯಶ್, ರಿಷಬ್ !

Spread the love

ಮೋದಿ ಭೇಟಿಯಾದ ಯಶ್, ರಿಷಬ್ !

ಯುವ ಭಾರತ ಸುದ್ದಿ ಬೆಂಗಳೂರು: ಏರೋ ಇಂಡಿಯಾ ಏರ್ ಶೊ ಉದ್ಘಾಟನೆಗೆ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟರಾದ ಯಶ್, ರಿಷಭ್ ಶೆಟ್ಟಿ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಿರ್ಮಾಪಕ ವಿಜಯ್ ಕಿರಂಗದೂರು ಹಾಗೂ ಡಿಜಿಟಲ್ ಕ್ರಿಯೇಟರ್ ಶ್ರದ್ಧಾ ಜೈನ್ ಭೇಟಿಯಾದರು.
ಭಾನುವಾರ ರಾತ್ರಿ ರಾಜಭವನದಲ್ಲಿ ಮೋದಿ ಅವರು ತಂಗಿದ್ದ ವೇಳೆ ಪ್ರಧಾನಿ ಕಚೇರಿ ಅಧಿಕಾರಿಗಳು ಈ ಭೇಟಿಗೆ ವ್ಯವಸ್ಥೆ ಮಾಡಿದ್ದರು.

ಮೋದಿ ಜೊತೆಗಿನ ಔತಣಕೂಟದಲ್ಲಿ ಯಶ್, ರಿಷಭ್ ಶೆಟ್ಟಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿಯೂ ಹರಡಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಕರ್ನಾಟಕ ಚಿತ್ರರಂಗದ ಪ್ರಮುಖರನ್ನು ಭೇಟಿಯಾದರು. ಸಂಸ್ಕೃತಿ, ನವ ಭಾರತ ಮತ್ತು ಕರ್ನಾಟಕದ ಪ್ರಗತಿಗೆ ಅವರು ನೀಡಬಹುದಾದ ಕೊಡುಗೆಗಳ ಕುರಿತು ಚರ್ಚಿಸಿದರು ಎಂದು ಹೇಳಿದೆ.


Spread the love

About Yuva Bharatha

Check Also

ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಡಂಗುರ ಸಾರಿದ ವ್ಯಕ್ತಿ !

Spread the loveವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಡಂಗುರ ಸಾರಿದ ವ್ಯಕ್ತಿ ! ದಾವಣಗೆರೆ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ …

Leave a Reply

Your email address will not be published. Required fields are marked *

one × 1 =