Breaking News

ಸರಕಾರ ಬರುತ್ತದೆ ಸರಕಾರ ಹೋಗುತ್ತವೆ ಆದರೆ ದೇಶ ಸದಾ ನಡೆಯುತ್ತಿರುತ್ತದೆ ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪಿಳಿಗೆಯ ಮುಂದೆ ಬರಬೇಕು- ಡಾ.ತನು ಜೈನ!

Spread the love

ಸರಕಾರ ಬರುತ್ತದೆ ಸರಕಾರ ಹೋಗುತ್ತವೆ ಆದರೆ ದೇಶ ಸದಾ ನಡೆಯುತ್ತಿರುತ್ತದೆ ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪಿಳಿಗೆಯ ಮುಂದೆ ಬರಬೇಕು- ಡಾ.ತನು ಜೈನ!

ಗೋಕಾಕ: ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲರೂ ಐಎಎಸ್ ಅಧಿಕಾರಿಗಳು ಆಗಬೇಕು ಎಂಬ ಕನಸನ್ನು ಕಂಡಿರುತ್ತಾರೆ. ಆದರೆ ದೇಶ ದೊಡ್ಡದು ಅದನ್ನು ಬದಲಾಯಿಸುವ ಸಂಧರ್ಭದಲ್ಲಿ ಅಧಿಕಾರಿಗಳು ಸಹ ಸ್ವಲ್ಪ ತೊಂದರೆ ಅನುಭವಿಸುತ್ತಾರೆ ಎಂದು ಮಾಜಿ ಐಎಎಸ್ ಅಧಿಕಾರಿ, ತಥಾಸ್ತು ಸಂಸ್ಥೆಯ ಮುಖ್ಯಸ್ಥೆ ಡಾ.ತನು ಜೈನ ಹೇಳಿದರು.

ಗೋಕಾಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಡಾ.ತನು ಜೈನ್.

ರವಿವಾರದಂದು ೧೯ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ಬಿಸಿಇ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರ ನೀಡಿ ಅವರು ಮಾತನಾಡಿದರು.
ದೇಶದ ಪರಿಸ್ಥಿತಿಯನ್ನು ಆಧರಿಸಿ ಆಯಾ ಸರಕಾರಗಳು ಕಾರ್ಯಮಾಡಿವೆ. ಮುಂದೆಯು ಮಾಡುತ್ತವೆ. ಒಬ್ಬ ಅಧಿಕಾರಯ ಭಲವಾದ ನಿರ್ಧಾರ ಕೈಗೊಳ್ಳುವ ಶಕ್ತಿ ಇರಬೇಕು ಇದನ್ನು ಐಎಎಸ್ ತರಬೇತಿಯನ್ನು ತಿಳಿಸಲಾಗುತ್ತದೆ. ಅಧಿಕಾರಗಳ ಆಯ್ಕೆ ಮೊದಲು ಸಂದರ್ಶನ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲಿ ಅಂಜದೆ, ಹೆದರದೆ ಎದುರಿಸಬೇಕು. ಜೀವನದಲ್ಲಿ ಯಾವುದು ಸುಲಭವಲ್ಲ ಅದನ್ನು ಪರಿಸ್ಥಿತಿ ಆಧಾರದ ಮೇಲೆ ಎಲ್ಲರೂ ನಿಭಾಯಿಸಬೇಕು ಎಂದ ಅವರು ಸರಕಾರ ಬರುತ್ತದೆ ಸರಕಾರ ಹೋಗುತ್ತವೆ ಆದರೆ ದೇಶ ಸದಾ ನಡೆಯುತ್ತಿರುತ್ತದೆ ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪಿಳಿಗೆಯ ಮುಂದೆ ಬರಬೇಕು .
ಇವಿಎಂ, ಬ್ಯಾಲೆಟ ಪೇಪರ ವಿಷಯದ ಬಗ್ಗೆ ಗಂಭೀರ ವಿಚಾರಕ್ಕೆ ಸಂಬAಧಿಸಿದAತೆ ಕೇಳಿದ ಪ್ರಶ್ನೆಗೆ ಇವಿಎಂ ಯಂತ್ರಗಳ ಎಲ್ಲಾ ರಾಜಕೀಯ ಪಕ್ಷಗಳ ಮುಂದೆ ಪರಿಶೀಲಿಸಲು ಕರೇದ ಸಂದರ್ಭದಲ್ಲಿ ಯಾವ ಪಕ್ಷಗಳು ಮುಂದೆ ಬರಲಿಲ್ಲ ಎಂದ ಅವರು ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣ ತಪ್ಪುಗಳು ನಡೆಯುವುದು ವಿರಳ ಎಂದು ಹೇಳಿದ ಅವರು ಯು.ಪಿ.ಎಸ್.ಸಿ ಪರೀಕ್ಷೆ ತಯಾರಿಯನ್ನು ತಾನು ಬೇರೆ ಕೆಲಸದಲ್ಲಿ ಇದ್ದುಕೊಂಡು ತಯಾರಿ ಮಾಡಿಕೊಳ್ಳಬಹುದು. ವಿದ್ಯಾರ್ಥಿ ಜೀವನದಲ್ಲಿ ತ್ಯಾಗ ಬಹಳ ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಡಿವೇಶ ಗವಿಮಠ ಉಪಸ್ಥಿತರಿದ್ದರು.

 

 


Spread the love

About Yuva Bharatha

Check Also

ಗೋಕಾಕ ಮತಕ್ಷೇತ್ರದಲ್ಲಿ ಝಣಝಣ ಕಾಂಚಾಣ ಸದ್ದು, ಕಾಂಗ್ರೇಸ್ ಅಭ್ಯರ್ಥಿಯಿಂದ ಮತದಾರರಿಗೆ ಹಣದ ಆಮಿಷ.!

Spread the loveಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.! ಗೋಕಾಕ: ಲೋಕಸಭಾ ಚುನಾವಣೆ ಇನ್ನು …

Leave a Reply

Your email address will not be published. Required fields are marked *

two × three =