Breaking News

6 ಪ್ರೌಢಶಾಲೆಗಳು ಸರಕಾರಿ ಸಂಯುಕ್ತ ಪದವಿ ಪೂರ್ವ ಉನ್ನತೀಕರಣಗೊಂಡು ಕಾಲೇಜುಗಳಾಗಿ ಮಂಜೂರು.!

Spread the love

6 ಪ್ರೌಢಶಾಲೆಗಳು ಸರಕಾರಿ ಸಂಯುಕ್ತ ಪದವಿ ಪೂರ್ವ ಉನ್ನತೀಕರಣಗೊಂಡು ಕಾಲೇಜುಗಳಾಗಿ ಮಂಜೂರು.!

ಯುವ ಭಾರತ ಸುದ್ದಿ ಗೋಕಾಕ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗೋಕಾಕ ಮತಕ್ಷೇತ್ರದ ಆರು ಪ್ರೌಢಶಾಲೆಗಳು ಸರಕಾರಿ ಸಂಯುಕ್ತ ಪದವಿ ಪೂರ್ವ ಉನ್ನತೀಕರಣಗೊಂಡು ಕಾಲೇಜುಗಳಾಗಿ ಮಂಜೂರಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಶಾಸಕ ರಮೇಶ ಜಾರಕಿಹೊಳಿ ಅವರು, ತಾಲೂಕಿನ ಸರಕಾರಿ ಪ್ರೌಢಶಾಲೆ ಮಾಲದಿನ್ನಿ, ಕೊಳವಿ, ಹೀರೇನಂದಿ, ಬೆನಚಿನಮರಡಿ(ಕೊ), ಮಲಾಪೂರ ಪಿ.ಜಿ. ಹಾಗೂ ಪಾಮಲದಿನ್ನಿ ಸರಕಾರಿ ಪ್ರೌಢಶಾಲೆಗಳು ಸಂಯುಕ್ತ ಪದವಿ ಪೂರ್ವ ಕಾಲೇಜುಗಳಾಗಿ ಮಂಜೂರಾಗಿದ್ದು ಅತೀ ಶೀಘ್ರದಲ್ಲೇ ಕಾಲೇಜುಗಳಾಗಿ ಕಾರ್ಯಾರಂಭ ಮಾಡಲಿವೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣಕ್ಕಾಗಿ ಗೋಕಾಕ ನಗರವನ್ನು ಅವಲಂಭಿಸಿದ್ದು, ಗ್ರಾಮೀಣ ಭಾಗದಲ್ಲೆ ಶಿಕ್ಷಣ ನೀಡುವ ಉದ್ಧೇಶದಿಂದಾಗಿ ಶಾಸಕರ ಪ್ರಯತ್ನದಿಂದ ಆರು ಪ್ರೌಢಶಾಲೆಗಳು ಸರಕಾರಿ ಸಂಯುಕ್ತ ಪದವಿ ಪೂರ್ವ ಉನ್ನತೀಕರಣಗೊಂಡು ಕಾಲೇಜುಗಳಾಗಿ ಮಂಜೂರಾಗಿವೆ. ಇನ್ನುಳಿದ ಆಯ್ದ ಪ್ರೌಢಶಾಲೆಗಳನ್ನು ಸಹ ಪದವಿ ಪೂರ್ವ ಕಾಲೇಜುಗಳನ್ನಾಗಿ ಮಂಜೂರ ಹೊಂದುವ ಹಂತದಲ್ಲಿವೆ.
ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಇದರಿಂದ ಹೆಚ್ಚು ಉಪಯೋಗವಾಗಲಿದ್ದು, ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕೆಂಬ ಮಹತ್ತರ ಉದ್ದೇಶದಿಂದ ಸಂಯುಕ್ತ ಪದವಿ ಪೂರ್ವ ಕಾಲೇಜು ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಗೋಕಾಕ ಮತಕ್ಷೇತ್ರದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ಶಾಸಕರ ಆಶಯವಾಗಿದೆ ಎಂದು ಭೀಮಗೌಡ ಪೋಲಿಸಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

eight + fourteen =