ಸಕಲ ಸರಕಾರಿ ಗೌರವದೊಂದಿಗೆ ಯೋಧ ಶಂಕರ ಯಲಿಗಾರ ಅಂತ್ಯಕ್ರೀಯೆ.!
ಗೋಕಾಕ: ಕಳೆದ ೧೩ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಮೇಲ್ಮಟ್ಟಿ ಗ್ರಾಮದ ಯೋಧ ಶಂಕರ ಯಲಿಗಾರ ಕರ್ತವ್ಯದಲ್ಲಿದ್ದಗಲೇ ಮೃತ ಪಟ್ಟಿದ್ದು, ಬುಧವಾರದಂದು ಅವರ ಅಂತ್ಯಕ್ರೀಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೆರಿತು.
ಮೃತ ಯೋಧ ಶಂಕರ ಅವರು ಮಹಾರಾಷ್ಟçದ ಔರಂಗಾಬಾದನಲ್ಲಿ ಸೇವೆಸಲ್ಲಿಸುತ್ತಿದ್ದರು, ಇತ್ತಿಚೇಗೆ ಮದುವೆಯಾಗಿದ್ದ ಅವರು, ಮೇ ತಿಂಗಳಲ್ಲಿ ತಮ್ಮ ರಜಾ ದಿನಗಳನ್ನು ಮುಗಿಸು ಸೇವೆಗೆ ತೆರಳಿದ್ದರು. ಮಂಗಳವಾರ ಎದೆ ನೋವು ಕಾಣಿಸಿಕೊಂಡ ಹಿನ್ನಲೆ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಂಕರ ಮೃತಪಟ್ಟಿದ್ದಾರೆ.
ಬುಧವಾರದಂದು ಬೆಳಿಗ್ಗೆ ಯೋಧ ಶಂಕರ ಪಾರ್ಥಿವ ಶರೀರ ತರಲಾಯಿತು. ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿತ್ತು. ಗ್ರಾಮದ ಸರಕಾರಿ ಶಾಲೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು, ಯೋಧನ ಪಾರ್ಥಿವ ಶರೀರ ದರ್ಶನ ಪಡೆಯಲು ತಾಲೂಕಿನ ಸಾವಿರಾರು ಜನ ಭಾಗವಹಿಸಿದ್ದರು.
ತಾಲೂಕಾಡಳಿತ ನೇತ್ರತ್ವದಲ್ಲಿ ಗ್ರಾಮಸ್ಥರು ಮತ್ತು ಕುಟುಂಬದವರು ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್‌ಪಿ ಮಹಾಲಿಂಗ ನಂದಗಾAವಿ, ಪಿಎಸ್‌ಐ ನಾಗರಾಜ ಖಿಲಾರೆ, ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ನೂರಾರು ಜನ ದೇಶ ಭಕ್ತರು ಇದ್ದರು.