Breaking News

ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭದ ಪೂರ್ವಭಾವಿ ಸಭೆ.!

Spread the love

ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭದ ಪೂರ್ವಭಾವಿ ಸಭೆ.!


ಗೋಕಾಕ: ಕೆಎಲ್‌ಇ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿ ಜಗತ್ತಿಗೆ ಪರಿಚಯಿಸಿದ ಡಾ. ಪ್ರಭಾಕರ ಕೋರೆ ಅವರ ೭೫ನೇ ಜನ್ಮದಿನದ ಅಮೃತ ಮಹೋತ್ಸವ ಆಚರಣೆ ಸಮಾರಂಭ ಇದೇ ದಿ. ೧೫ರಂದು ಬೆಳಗಾವಿಯ ಜೆ.ಎನ್.ಎಂ.ಸಿ. ವೈದ್ಯಕೀಯ ಮಹಾವಿದ್ಯಾಲಯದ ಮೈದಾನದಲ್ಲಿ ಜರುಗಲಿದ್ದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಶೀರ್ವದಿಸುವಂತೆ ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ಕರೆ ನೀಡಿದರು.
ಗುರುವಾರ ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಸಭಾಂಗಣದಲ್ಲಿ ಸಂಜೆ ಕರೆಯಲಾಗಿದ್ದ ಡಾ. ಪ್ರಭಾಕರ ಕೋರೆ ಅವರ ೭೫ನೇ ಜನ್ಮದಿನದ ಅಮೃತ ಮಹೋತ್ಸವ ಆಚರಣೆ ಸಮಾರಂಭದ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು, ಸಂಸ್ಥೆಯನ್ನು ೪೫ ವರ್ಷಗಳಿಂದ ನಿಸ್ವಾರ್ಥವಾಗಿ ಮುನ್ನಡೆಸಿ ದೇಶ ವಿದೇಶಗಳಲ್ಲಿ ವಿವಿಧ ಅಂಗ-ಸAಸ್ಥೆಗಳನ್ನು ಸ್ಥಾಪಿಸಿ ಕೀರ್ತಿಯನ್ನು ಪಸರಿಸಿದ್ದಾರೆ.
ಆರೋಗ್ಯ, ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಸೇವೆ ಅನನ್ಯ ಎಂದು ಕೊಂಡಾಡಿದರು. ಗಡಿ ಭಾಗದಲ್ಲಿ ಕನ್ನಡ ಬಲಿಷ್ಠಗೊಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಯಶಸ್ಸಿನ ರೂವಾರಿಗಳಾಗಿದ್ದ ಡಾ. ಪ್ರಭಾಕರ ಕೋರೆ ಅವರು ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯಲ್ಲೂ ವಹಿಸಿರುವ ಪಾತ್ರ ಅವಿಸ್ಮರಣೀಯ ಎಂದು ಬಣ್ಣಿಸಿದರು. ಮಹಾನ್ ವ್ಯಕ್ತಿ ಮತ್ತು ಶಕ್ತಿ ಆಗಿರುವ ಡಾ. ಕೋರೆ ಅವರ ಜನ್ಮದಿನವನ್ನು ದಾಖಲೆ ಪ್ರಮಾಣದಲ್ಲಿ ನಾವೆಲ್ಲ ಆಚರಿಸಿ ಅವರ ಭವಿಷ್ಯಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ನೆರೆದವರಲ್ಲಿ ಮನವಿ ಮಾಡಿದರು.
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ನಗರಸಭೆ ಮಾಜಿ ಅಧ್ಯಕ್ಷ ಸಿದ್ಲಿಂಗಪ್ಪ ದಳವಾಯಿ, ವರ್ತಕ ಮೊಹಶೀನ್ ಖೋಜಾ, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಕಲ್ಲೋಳಿಯ ಬಾಳಪ್ಪ ಬೆಳಕೂಡ, ವಕೀಲ ಎಸ್.ಎಂ.ಹತ್ತಿಕಟಗಿ, ಘಟಪ್ರಭಾದ ರಾಮಣ್ಣ ಹುಕ್ಕೇರಿ ಮೊದಲಾದ ಪ್ರಮುಖರು ಮಾತನಾಡಿ, ಡಾ. ಪ್ರಭಾಕರ ಕೋರೆ ಅವರು ಕೇವಲ ವ್ಯಕ್ತಿ ಅಲ್ಲ ಅವರೊಬ್ಬ ಶಕ್ತಿ ಎಂದು ಬಣ್ಣಿಸಿ ಉದ್ದೇಶಿತ ಅವರ ೭೫ನೇ ಜನ್ಮದಿನದ ಅಮೃತ ಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿ ಜನಮಾನಸದಲ್ಲಿ ಅಚ್ಚರಿಯಾಗಿ ಉಳಿಯುವಂತೆ ಆಚರಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ನಮ್ಮೆಲ್ಲರ ಸಂಘಟಿತದ ಯತ್ನದಿಂದ ಡಾ. ಪ್ರಭಾಕರ ಕೋರೆ ಅವರ ೭೫ ಜನ್ಮದಿನದ ಅಮೃತ ಮಹೋತ್ಸವವವನ್ನು ಮಾದರಿಯಾಗಿಸೋಣ ಎಂದರು.
ಪೂರ್ವಭಾವಿ ಸಭೆಯಲ್ಲಿ ಮಹಾಂತೇಶ ತಾಂವಶಿ, ಜಿ.ಎಂ.ಅAದಾನಿ, ದುಂಡು ಬಿದರಿ, ಮಲ್ಲಿಕಾರ್ಜುನ ಈಟಿ, ಪ್ರಭಾ ಶುರ‍್ಸ್ ಚೇರಮನ್ ಅಶೋಕ ಪಾಟೀಲ, ಹಿರಿಯ ವಕೀಲ ಈಶ್ವರ ಎಂ. ಪಾಟೀಲ, ನಿವೃತ್ತ ಶಿಕ್ಷಕ ಎಸ್.ವಿ.ಮಿರ್ಜಿ, ಸಾಹಿತಿಗಳಾದ ಪ್ರೊ. ಚಂದ್ರಶೇಖರ ಅಕ್ಕಿ ಮತ್ತು ಈಶ್ವರ ಮಮದಾಪೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸೋಮಶೇಖರ ಮಗದುಮ್ ನಿರೂಪಿಸಿದರು.

 


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

one × four =