Breaking News

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು ಸ್ಥಳೀಯರಿಂದ ದಂಪತಿಗಳ ರಕ್ಷಣೆ.!

Spread the love

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು ಸ್ಥಳೀಯರಿಂದ ದಂಪತಿಗಳ ರಕ್ಷಣೆ.!


ಗೋಕಾಕ: ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದಿದ್ದು, ಕಾರನಲ್ಲಿದ್ದ ದಂಪತಿಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ತಾಲೂಕಿನ ಅಂಕಲಗಿ ಗ್ರಾಮದ ಹೊರವಲಯದಲ್ಲಿ ಗುರುವಾರದಂದು ಜರುಗಿದೆ.
ಬೆಳಗಾವಿಯಿಂದ ಸ್ವಗ್ರಾಮ ಧೂಪದಾಳಕ್ಕೆ ಕಾರನಲ್ಲಿ ಆಗಮಿಸುತ್ತಿದ್ದ ದಂಪತಿ ಸಿದ್ದಪ್ಪ ಕೊಣ್ಣೂರ, ಹಾಗೂ ಅವರ ಪತ್ನಿ ಸೀಮಾ ಕೊಣ್ಣೂರ ಅವರನ್ನು ಸ್ಥಳೀಯರು ಕಾರನಿಂದ ಬಿಳುತ್ತಿದ್ದಂತೆ ರಕ್ಷಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಕಲಗಿ ಗ್ರಾಮದ ಹೊರವಲಯದಲ್ಲಿರುವ ಹಳ್ಳಕ್ಕೆ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ.
ಸ್ಥಳಕ್ಕೆ ಅಂಕಲಗಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕಲಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

thirteen + 7 =