Breaking News

ಡಾ. ವಿಲಾಸ ನಾಯಿಕ ವಾಡಿ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ.!

Spread the love

ಡಾ. ವಿಲಾಸ ನಾಯಿಕ ವಾಡಿ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ.!

ಗೋಕಾಕ: ಗೋಕಾಕ್ ಘಟಪ್ರಭೆ ಪರಿಸರದ ಖ್ಯಾತ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ವಿಲಾಸ ನಾಯಿಕವಾಡಿ ಅವರ ವೈದ್ಯಕೀಯ ಕ್ಷೇತ್ರದ
ಸಾಧನೆಯನ್ನು ಅನುಲಕ್ಷಿಸಿ, ನಗರದ ಶಂಕರಲಿಂಗ ಸಂಸ್ಥೆಯವರು ಶಂಕರಲಿಂಗ ಜಾತ್ರೆಯಲ್ಲಿ, 67ನೇ ರಾಜ್ಯೋತ್ಸವದ
ನಿಮಿತ್ತ ರವಿವಾರದಂದು ಬಣಗಾರ ಓಣಿಯ ಬಯಲು ರಂಗ ಮಂಟಪದಲ್ಲಿ ಅವರಿಗೆ ವೈದ್ಯರತ್ನ ಪ್ರಶಸ್ತಿ ನೀಡಿ
ಗೌರವಿಸಿದರು.
ಈವರೆಗೆ 80 ವರ್ಷದ ಡಾ. ನಾಯಿಕವಾಡಿ 6 ಲಕ್ಷ ರೋಗಿಗಳನ್ನು ಗುಣಪಡಿಸಿದ್ದು, 50 ಸಾವಿರ ಯಶಸ್ವಿ ಶಸ್ತ್ರ ಚಿಕಿತ್ಸೆ
ನಡೆಸಿದ್ದು,20 ಸಾವಿರ ಗ್ಯಾಸ್ಟ್ರೋ ಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿದ್ದು, ಅವರ ವೈದ್ಯಕೀಯ ಸಾಧನೆಯ ಅಮೂಲ್ಯ
ದಾಖಲೆ, ಇತಿಹಾಸ. ಆದರೂ ಇವರು ಎಲೆಮರೆಯ ಹೂವಾಗಿಯೇ ಉಳಿದಿದ್ದರು. ಇಂಥವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ
ಸಂಸ್ಥೆ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂದು ಸಂಸ್ಥೆಯ ಚೇರ್ಮನ್ ಆರ್ ಹೆಚ್ ಗುಣಕಿ ಪ್ರಶಸ್ತಿ ಪ್ರದಾನ ಮಾಡಿ
ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಯಿಕವಾಡಿ ಘಟಪ್ರಭಾಯಲ್ಲಿರುವ ಅಂತರಾಷ್ಟ್ರ ಖ್ಯಾತಿಯ ನಿಸರ್ಗ ಚಿಕಿತ್ಸಾ
ಕೇಂದ್ರವನ್ನು ಪ್ರತಿಯೊಬ್ಬರೂ ನೋಡಲೇಬೇಕೆಂದು ಎಲ್ಲರನ್ನೂ ಆಹ್ವಾನಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಡಾ ಜಿ ಎಮ್ ಕಾಮೋಜಿ ಬೆಳ್ಳಿ ಖಡಗ ತೊಡಿಸಿ ಸಹೋದ್ಯೋಗಿಮಿತ್ರರನ್ನು ಅಭಿನಂದಿಸಿದರು.
ಡಾ. ಸಿ ಕೆ ನಾವಲಗಿ ಅವರ ಜೀವಮಾನದ ಸಿದ್ದಿ ಸಾಧನೆ ಭಿನ್ನ ವತ್ತಲಿಕೆಯನ್ನು ವಾಚಿಸಿದರು.
ಜಿಎಂ ಅಂದಾನಿ, ಬಾಲಚಂದ್ರ ಕುಬಸದ, ಡಾಕ್ಟರ್ ಶಶಿಕಲಾ ಕಾಮಾಜಿ, ಶಶಿಕಲಾ ಕೌತನಳಿ, ವಿನುತಾ ನಾವಲಗಿ, ಸಾತಯ್ಯ
ಸ್ವಾಮಿಗಳು, ವಿರುಪಾಕ್ಷಿ ಅಂದಾನಿ, ಪ್ರಕಾಶ್ ಆಲತಗಿ, ಮಲ್ಲಿಕಾರ್ಜುನ ವಂಟ ಮುರಿಮಠ, ಮಹಾಂತೇಶ್ ತಾಂವಶಿ,
ದಯಾನಂದ ಆಲತಗಿ, ವಿಶ್ವನಾಥ ಬಿಳ್ಳೂರ, ಮಹಾಂತೇಶ ಹತಪಾಕಿ, ಉಪಸ್ಥಿತರಿದ್ದರು. ಆರ್ ಎಲ್ ಮಿರ್ಜಿ ನಿರೂಪಿಸಿ
ವಂದಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

two + five =