Breaking News

ಡಿ.14 ರಂದು ದತ್ತಿನಿಧಿ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

Spread the love

ಡಿ.14 ರಂದು ದತ್ತಿನಿಧಿ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಪಟ್ಟಣದ ಬಸವೇಶ್ವರ ಯಾತ್ರಿ ನಿವಾಸದ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಮಹಿಳಾ ಸ್ನೇಹ ಸಾಹಿತ್ಯ ಸಂಗಮದ ಸಹಯೋಗದಲ್ಲಿ ದಿ.ಶಂಕರ ಲಮಾಣಿ ಇವರ ಸ್ಮರಣಾರ್ಥ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಇಂದುಮತಿ ಲಮಾಣಿ ಅವರ ವಚನ ವಿಹಾರ ಪುಸ್ತಕ ಬಿಡುಗಡೆ ಸಮಾರಂಭ ಡಿ.14 ರಂದು ಬೆಳಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಸಮ್ಮುಖವನ್ನು ವಿಜಯಪುರದ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಶಿರೂರದ ಕುಮಾರ ಮಹಾರಾಜರು ವಹಿಸುವರು. ಅಧ್ಯಕ್ಷತೆಯನ್ನು ಸಾಹಿತಿ ಜಂಬುನಾಥ ಕಂಚ್ಯಾಣಿ ವಹಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಎಚ್.ಟಿ.ಪೋತೆ ಉದ್ಘಾಟಿಸುವರು. ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಪುಸ್ತಕ ಬಿಡುಗಡೆ ಮಾಡುವರು. ಡಾ.ಸುಜಾತಾ ಚಲವಾದಿ ಪುಸ್ತಕ ಪರಿಚಯಿಸುವರು. ಡಾ.ಮೈತ್ರೈಯಿಣಿ ಗದಿಗೆಪ್ಪಗೌಡರ ಅವರು 12 ನೇ ಶತಮಾನದ ವಚನಕಾರ್ತಿಯರು ಕುರಿತು ಉಪನ್ಯಾಸ ನೀಡುವರು. ಡಾ.ಅರ್ಜುನ ಗೊಳಸಂಗಿ ಅವರಿಗೆ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿಯನ್ನು ಡಿ.ಬಿ.ಚವ್ಹಾಣ ಪ್ರದಾನ ಮಾಡುವರು. ಮುಖ್ಯಅತಿಥಿಗಳಾಗಿ ವಿ.ಸಿ.ನಾಗಠಾಣ, ಬಿ.ಎಸ್.ಬಸವರಾಜ, ಡಾ.ನಾರಾಯಣ ಪವಾರ, ಡಾ.ಬಾಬುರಾಜೇಂದ್ರ, ಶಿವನಗೌಡ ಬಿರಾದಾರ, ಬಿ.ಕೆ.ಕಲ್ಲೂರ, ಬಾಲಚಂದ್ರ ಮುಂಜಾನೆ, ಎಫ್.ಡಿ.ಮೇಟಿ, ಎಸ್.ಎಸ್.ಝಳಕಿ, ಸಂಗನಗೌಡ ಚಿಕ್ಕೊಂಡ, ಸುರೇಶ ಹಾರಿವಾಳ, ಸಿ.ಎಸ್.ಆನಂದ, ಶೇಖರ ಲಮಾಣಿ, ಸಂತೋಷಕುಮಾರ ನಿಗಡಿ ಆಗಮಿಸುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

six − 6 =