Breaking News

ಬಿಡಿಸಿಸಿ ಬ್ಯಾಂಕಿನಿಂದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪತ್ತು ಮಂಜೂರು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಬಿಡಿಸಿಸಿ ಬ್ಯಾಂಕಿನಿಂದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪತ್ತು ಮಂಜೂರು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕಳ್ಳಿಗುದ್ದಿ ಪಿಕೆಪಿಎಸ್ ಸಂಘದ ಎರಡನೇ ಮಹಡಿಯ ಉದ್ಘಾಟನೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಯುವ ಭಾರತ ಸುದ್ದಿ ಗೋಕಾಕ :
ಬಿಡಿಸಿಸಿ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತಗಳನ್ನು ಮಂಜೂರು ಮಾಡಿಸಲಾಗುತ್ತಿದ್ದು, ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕಿನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು
ಇತ್ತಿಚೇಗೆ ತಾಲೂಕಿನ ಕಳ್ಳಿಗುದ್ದಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನವಾಗಿ ನಿರ್ಮಿಸಿದ ಎರಡನೇ ಮಹಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಅಭಿವೃದ್ಧಿಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ರೈತರಿಗಾಗಿಯೇ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಕತ್ತಿಯವರು ಶ್ರಮಿಸುತ್ತಿದ್ದಾರೆ, ಬ್ಯಾಂಕಿನ ಅಧ್ಯಕ್ಷರಾದ ನಂತರ ಜಿಲ್ಲೆಯ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಪತ್ತನ್ನು ಹೆಚ್ಚಿಸುವ ಮೂಲಕ ರೈತರ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಬಿಡಿಸಿಸಿ ಬ್ಯಾಂಕು ನಮ್ಮ ಆಡಳಿತಕ್ಕೆ ಬಂದ ನಂತರ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಎಲ್ಲ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತನ್ನು ನೀಡಲಾಗುತ್ತಿದೆ.
ಕಳ್ಳಿಗುದ್ದಿ ಸಹಕಾರ ಸಂಘಕ್ಕೆ ಈ ಮೊದಲು 80 ಲಕ್ಷ ರೂಪಾಯಿ ಪತ್ತು ಬರುತ್ತಿತ್ತು. ನಾವೀಗ ಸಂಘಕ್ಕೆ 4.25 ಕೋಟಿ ರೂಪಾಯಿ ಪತ್ತನ್ನು ಮಂಜೂರು ಮಾಡಿದ್ದೇವೆ. ಇದರಲ್ಲಿ 426 ಸಾಲಗಾರ ಸದಸ್ಯರಿಗೆ 3.43 ಕೋಟಿ ರೂಪಾಯಿ ಪತ್ತನ್ನು ಹಂಚಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ತೊಂಡಿಕಟ್ಟಿಯ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಸಾನ್ನಿಧ್ಯವಹಿಸಿದ್ದರು.

ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಹಾಗೂ ಪ್ರಭಾ ಶುಗರ್ಸ್ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ ವಹಿಸಿದ್ದರು.

ರಡ್ಡೇರಹಟ್ಟಿಯ ಬಸವರಾಜ ಹಿರೇಮಠ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಪ್ರದೇಶ ಕುರುಬರ ಸಂಘದ ನಿರ್ದೇಶಕ ರಾಜೆಂದ್ರ ಸಣ್ಣಕ್ಕಿ, ಕಳ್ಳಿಗುದ್ದಿ ಗ್ರಾ.ಪಂ ಅಧ್ಯಕ್ಷ ಬಾಳಪ್ಪ ಗೌಡರ, ರವಿ ಪರುಶೆಟ್ಟಿ, ಅಡಿವೆಪ್ಪ ಅಳಗೋಡಿ, ಲಕ್ಷ್ಮಣ ಸಂಕ್ರಿ, ಲಕ್ಷ್ಮಣ ಚನ್ನಾಳ, ಪಿಕೆಪಿಎಸ್ ಉಪಾಧ್ಯಕ್ಷ ಹನಮಂತ ಮಾವಿನಗಿಡದ, ಬಿಡಿಸಿಸಿ ಬ್ಯಾಂಕಿನ ತಾಲೂಕಾ ನಿಯಂತ್ರಣಾಧಿಕಾರಿ ಮಹಾಂತೇಶ ಕುರಬೇಟ, ಬ್ಯಾಂಕ ನಿರೀಕ್ಷಕ ಬಿ.ಆರ್.ರೆಬ್ಬನವರ, ನಿರ್ದೇಶಕರಾದ ಭೀಮಪ್ಪ ಅಳಗೋಡಿ, ಅಶೋಕ ಚನ್ನಾಳ, ಹನಮಂತ ಗೌಡರ, ಬಾಲಪ್ಪ ದಳವಾಯಿ, ಅಶೋಕ ಹೊರಟ್ಟಿ, ಬಸವ್ವ ಜೋತಾನಿ, ಸುನಂದಾ ಸಂಕ್ರಿ, ಗೋಪಾಲ ಹರಿಜನ, ರಮೇಶ ಮೇಟ್ಟಿನ, ಮುದಕಪ್ಪ ಗೋಡಿ, ಶಿವಾನಂದ ಬಡಿಗೇರ, ಕಾರ್ಯದರ್ಶಿ ರಮೇಶ ದಳವಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

seven + 13 =