Breaking News

ಸತತ ಪ್ರಯತ್ನ ನಿರಂತರ ಸಾಧನೆಯ ಕಡೆ ಪ್ರಯತ್ನ ಪಟ್ಟಾಗ ಮಾತ್ರ ಯಶಸ್ಸಿನ ಕೀರ್ತಿ ದೊರೆಯತ್ತದೆ

Spread the love

 

ಮೂಡಲಗಿ: ಸತತ ಪ್ರಯತ್ನ ನಿರಂತರ ಸಾಧನೆಯ ಕಡೆ ಪ್ರಯತ್ನ ಪಟ್ಟಾಗ ಮಾತ್ರ ಯಶಸ್ಸಿನ ಕೀರ್ತಿ ದೊರೆಯತ್ತದೆ. ದೊರೆತ ಕೀರ್ತಿಯ ಪಟ್ಟವನ್ನು ಉಳಿಸಿ ಬೆಳೆಯಿಯಕೊಂಡು ಇನನೂಬ್ಬರಿಗಿ ಸ್ಪೋರ್ತಿಯ ಸೆಲೆಯಾಗಿರಬೇಕು ಎಂದು ಸಾಹಿತಿ ಡಾ. ಮಹದೇವ ಜಿಡ್ಡಿಮನಿ ಹೇಳಿದರು.

ಅವರು ಪಟ್ಟಣದ ಲಕ್ಷ್ಮೀನಗರದಲ್ಲಿ ತಾಲೂಕಾ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಜರುಗಿದ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕಿರುವ ನಾವೇಲ್ಲರು ಸಂಘ ಜೀವಿಗಳು. ಪರಸ್ಪರ ಸಹಕಾರದಿಂದ ಸಾಗಬೇಕಾದರೆ ಸುಗಮ ಸ್ಥಳೀಯ ಆಡಳಿಯ ಆಡಳಿತ ವ್ಯವಸ್ಥೆಯು ಬೇಕಾಗುವದು. ಸ್ಥಳೀಯ ಸಂಸ್ಥೆ ಮೂಡಲಗಿ ಪುರಸಭೆಗೆ ಅತೀ ಕಿರಿಯ ವಯಸ್ಸಿನಲ್ಲಿ ಅಧ್ಯಕ್ಷ ಸ್ಥಾನ ಪಡೆದಿರುವದು ಹೆಮ್ಮೆಯ ವಿಷಯ. ಚುನಾಯಿತ ಪ್ರತಿನಿಧಿಗಳು ನೌಕರಸ್ಥರಿಗೆ ಅಗತ್ಯ ಸಹಕಾರ ನೀಡಿದಾಗ ಮಾತ್ರ ಅಭಿವೃದ್ಧಿ ಕೆಲಸಗಳು ಆಗಲು ಸಾಧ್ಯ. ಹಿರಿಯರ ಹಾಗೂ ಅನುಭವಿಗಳ ಮಾರ್ಗದರ್ಶನದಲ್ಲಿ ತಮ್ಮ ಅಧಿಕಾರವಧಿಯನ್ನು ಪೂರೈಸಿ ಎಂದರು.

ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ, ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದ ಮೆರೆಗೆ ಯಶಸ್ವಿಯಾಗಿ ನಡೆಯುತ್ತಿವೆ. ಕ್ಷೇತ್ರದಲ್ಲಿರುವ ಗ್ರಾಪಂ, ಪಪಂ, ಪುರಸಭೆಗಳನ್ನು ಗ್ಟಿಗೊಳಿಸುವ ನಿಟ್ಟಿನಲ್ಲಿ ಸರಕಾರದಿಂದ ವಿಶೇಷ ಅನುದಾನವನ್ನು ತರಲು ಹಗಳಿರುಳು ಶ್ರಮಿಸುತ್ತಿದ್ದಾರೆ. ಮೂಡಲಗಿ ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಜನತೆಯ ಹಿತ ಕಾಪಾಡಲು ಅನೇಕ ಯೋಜನೆಗಳು ಪ್ರಸಕ್ತ ವರ್ಷದಿಂದ ಪ್ರಾರಂಭವಾಗುವದು. ಮೂಡಲಗಿ ಪುರಸಭೆ ಅಧ್ಯಕ್ಷ ಪಟ್ಟ ಪ್ರಥಮವಾಗಿ ಕುರುಬ ಸಮಾಜಕ್ಕೆ ದೊರೆತಿರುವದು ಹೆಮ್ಮೆಯ ವಿಷಯವಾಗಿದೆ. ಪಟ್ಟಣದ ಸರ್ವ ಪುರಸಭೆ ಸದಸ್ಯರು ಒಗ್ಗಟ್ಟಾಗಿ ಶ್ರಮೀಸಿದಾಗ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಸತ್ಕಾರ ಸ್ವಿಕರಿಸಿದ ನೂತನ ಪುರಸಭೆ ಅಧ್ಯಕ್ಷ ಹಣಮಮತ ಗುಡ್ಲಮನಿ ಮಾತನಾಡಿ, ನಗರದ ಅಭಿವೃದ್ಧಿಗೋಸ್ಕರ ಎಲ್ಲ ಸದಸ್ಯರ, ಎಲ್ಲ ಸಮುದಾಯದವರ ಪ್ರೀತಿ ವಿಶ್ವಾಸದ ಮೆರೆಗೆ ನಗರಕ್ಕೆ ದೊರಕ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಪಡುವದಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಚಾಲಕ ಮಾಲತೇಶ ಸಣ್ಣಕ್ಕಿ ಮಾತನಾಡಿ, ಶಿಕ್ಷಣ ಇಲಾಖೆಗೆ ಬೇಕಾಗುವ ಅಗತ್ಯ ಸಹಾಯ ಸಹಕಾರಗಳು ಹಾಗೂ ನೌಕರರ ಹಿತ ಕಾಪಾಡುವಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರದ ಕುರಿತು ಮಾತನಾಡಿದರು.
ನೌಕರ ಸಂಘದ ಕಾರ್ಯದರ್ಶಿ ಕೆ.ಆರ್. ಅಜ್ಜಪ್ಪನವರ, ಪ್ರಾಚಾರ್ಯ ವಾಯ್ ಬಿ ಕಳ್ಳಿಗುದ್ದಿ, ಎಲ್ ಎಲ್ ವ್ಯಾಪಾರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನೂತನ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್ ಎಸ್ ಪಾಟೀಲ, ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ, ನಿವೃತ್ತ ಸೈನಿಕ ಸಂತೋಷ ಕಮತಿಯವರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಗುರು ಕೆ.ಆರ್ ಕೊತ್ತಲ, ಆರ್ ಆರ್ ಕಣಕಿಕೋಡಿ, ಎಚ್ ಆರ್ ಕುರಿಹುಲಿ, ಎಲ್ ಬಿ ಬಿರನಗಡ್ಡಿ,ಎಸ್ ಎಸ್ ಮಾವಿನಂಡಿ, ಸಿದ್ದಪ್ಪ ಕಳ್ಳಿಗುದ್ದಿ, ಎಸ್.ಎಮ್ ಮಂಗಿ, ಎಮ್ ಎಲ್ ಅಮನಿ, ಕೊಳ್ಳಾರ, ವಿಠ್ಠಲ ಮುನ್ಯಾಳ, ಕೆ.ಎಲ್.ಮೀಶಿ, ಬಿ.ಎಸ್.ಒಡೆಯರ, ಹನಮಂತ ಕೊಟೊರ, ಎಸ್.ಎಲ್ ಪಾಟೀಲ, ಎಲ್.ಕೆ ಮಾಯನ್ನವರ ಮತ್ತಿತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

5 × one =