Breaking News

ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ : ಕಾನೂನು ಪರಿವರ್ತನೆ ತಂತ್ರಜ್ಞಾನ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ

Spread the love

ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ : ಕಾನೂನು ಪರಿವರ್ತನೆ ತಂತ್ರಜ್ಞಾನ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ

ಜ್ಞಾನ ವೃತ್ತಿಪರರ ಏಕಸ್ವಾಮ್ಯವಲ್ಲ

ದೇಶದ ಕಾನೂನು ವಿದ್ಯಾರ್ಥಿಗಳು ಭಾಗಿ

ಯುವ ಭಾರತ ಸುದ್ದಿ ಬೆಳಗಾವಿ :
ಕಾನೂನು ವಿದ್ಯಾರ್ಥಿಗಳು ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಲು ತಂತ್ರಜ್ಞಾನದ ಮಾಸ್ಟರ್ ಆಗಬೇಕು ಎಂದು ಧಾರವಾಡ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ.ಜೋಶಿ ಹೇಳಿದರು. ನಗರದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಸಂಜೆ ನೆಹರು ನಗರದ ಜೆಎನ್ಎಂಸಿ ಬಿ.ಎನ್. ಕೋಡ್ಕಣಿ ಆಡಿಟೋರಿಯಂದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಪರಿವರ್ತನೆ ತಂತ್ರಜ್ಞಾನ ಕುರಿತ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಜ್ಞಾನ ಇಂದು ವೃತ್ತಿಪರರ ಏಕಸ್ವಾಮ್ಯ ಅಲ್ಲ. ಕಾನೂನು ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದರು.

ಯುಎಸ್ ಎ ಫೆಲ್ಟೆಸ್ ಡೀಪ್ ಟೆಕ್ ಎಕ್ಸಿಕ್ಯುಟಿವ್ ಡಾ.ಇಂಗ್ರಿಡ್ ವಾಸಿಲು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ ಇ ಸಂಸ್ಥೆ ನಿರ್ದೇಶಕ ಎಸ್.ಸಿ.ಮೆಟಗುಡ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು.
ಕೆಎಲ್ ಇ ಸಂಸ್ಥೆಯ ಕಾನೂನು ಅಕಾಡೆಮಿ ಮತ್ತು ಗಾಲ್ಟರ್ ಜಂಟಿಯಾಗಿ ಫೆಬ್ರವರಿ 24-26 ರ ವರೆಗೆ
ಕೃತಕ ಬುದ್ಧಿಮತ್ತೆಯ ಅನುಕೂಲಗಳು ಮತ್ತು ಅನಾನುಕೂಲತೆಗಳ ಬಗ್ಗೆ ಮೂರು ದಿನಗಳ ಈ ಅಂತರಾಷ್ಟ್ರೀಯ ಸಮ್ಮೇಳನ ಚರ್ಚಿಸಲಿದೆ. ಕೃತಕ ಬುದ್ದಿಮತ್ತೆ, ಮೆಟಾ, ಬ್ಲಾಕ್ ಚೈನ್(ಹೈಬ್ರಿಡ್ ಮೋಡ್ ) ಕುರಿತು ಚರ್ಚಿಸಲಿದೆ. ಗಾಲ್ಟರ್ ಸಂಸ್ಥಾಪಕ ಡಾ.ಎಂ.ಕೆ. ಭಂಡಾರಿ ಅವರು ಗಾಲ್ಟರ್ ಕರಪತ್ರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಂಚಾಲಕಿ ಎಲ್ ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ತೇಜಸ್ವಿನಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಬಿ. ಜಯಸಿಂಹ ಸ್ವಾಗತಿಸಿದರು. ಎಲ್‌ಎಲ್‌ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಿಯಾ ಶಹಾಪುರಕರ ನಿರೂಪಿಸಿದರು. ಅಂತರಾಷ್ಟ್ರೀಯ ಸಮ್ಮೇಳನದ ಸಂಚಾಲಕಿ ಹಾಗೂ ಹುಬ್ಬಳ್ಳಿ ಜಿ.ಕೆ.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಶಾರದಾ ಪಾಟೀಲ ವಂದಿಸಿದರು. ದೇಶದ ವಿವಿಧ ಕಾನೂನು ಕಾಲೇಜುಗಳ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೆಎಲ್ ಇ ಕಾನೂನು ಅಕಾಡೆಮಿ ಮತ್ತು ಗಾಲ್ಟರ್ ಜಂಟಿಯಾಗಿ ಮೂರು ದಿನಗಳ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿವೆ.
ಎಲ್ಲಾ 5 ತಾಂತ್ರಿಕ ಅವಧಿಗಳಲ್ಲಿ ಈ ಮೂರು ದಿನಗಳಲ್ಲಿ ನಡೆಸಲಾಗುತ್ತದೆ. ಭಾರತದ 6 ಸಂಪನ್ಮೂಲ ವ್ಯಕ್ತಿಗಳು ಮತ್ತು ಜಗತ್ತಿನಾದ್ಯಂತ 8 ಸಂಪನ್ಮೂಲ ವ್ಯಕ್ತಿಗಳು ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದು, ಸಮ್ಮೇಳನದ ವಿವಿಧ ವಿಷಯಗಳ ಕುರಿತು 25 ಜನ ಪ್ರಬಂಧ ಮಾಡಿಸುತ್ತಿದ್ದಾರೆ.

Knowledge is not a monopoly of the professional today “ these are the words of wisdom of the chief guest of today’s inaugural session
KLE Society’s Law Academy & GALTER have jointly organized three days International conference on 24-26th February 2023 on Transformational Technologies with special reference to Artificial intelligence, Meta verse and Block Chain (In hybrid mode).
In all 5 technical sessions will be conducted on these three days. 6 Resource persons from India and 8 resource persons around the globe will be sharing their knowledge . 25 paper presentors will be presenting on various themes of the conference .
The program began with invocation song by Ms Tejaswini student Final year LLB, Dr. B Jayasimha convenor of the event and principal BV Bellad law college welcomed the gathering and introduced the guests.
Dr M K Bhandari founder GALTER released the brochure of GALTER and briefed the purpose of the event .
Hon’ble Justice Shri C M Joshi – Judge High Court of Karnataka Dharwad Bench inaugurated the international conference by lighting the lamp. Speaking on the occasion Hon’ble Justice Shri C M Joshi – Judge High Court of Karnataka Dharwad bench discussed the advantages and disadvantages of Artificial Intelligence. Hon’ble Justice Enlighted about block chain technology, Meta Verse for virtual problem. The chief guest also encouraged the law student to be the master of technology to excel in the law field .
Dr Ingrid Vasilu – Feltes Deep tech Executive USA virtually delivered the key note address.
Shri S C Methgud Director KLE Society Belagavi in the presidential remarks motivated the students to actively participate in the various activities in the college .

Dr Sharada Patil Co- Convenor of the International Conference & Principal GK Law college hubballi proposed the vote of thanks.
The program was compered by Ms Priya Shahapurkar student Final year LLB .
More than 300 students from different law colleges around the nation were also present .


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

four × 2 =