ಸೇಬುಸಂಕಟ ——————- ಎಂದೂ ತಿನ್ನದ ಒಂದು ಸೇಬು ತಿನ್ನುವ ಆಸೆ, ಹಸಿದ ಮಗುವಿಗೆ; ಕೊಳೆತು ದಂಡವಾಗಿ ಹೋಗುತ್ತಿದ್ದೇನಲ್ಲ ಎಂಬ ಸಂಕಟ, ರಾಜಕಾರಣಿಗೆ ಹಾಕಿದ ಹಾರದಲ್ಲಿ ಬಂಧಿಯಾದ ಸೇಬು ಹಣ್ಣಿಗೆ ಡಾ. ಬಸವರಾಜ ಸಾದರ. — + —
Read More »ಕರುಳರಿಕೆ
ಕರುಳರಿಕೆ ——————- ಎಂಥ ಅಂಟಿನ ನಂಟಿರಬೇಕು ಕರುಳಿನ ಗಂಟಿಗೆ? ಕತ್ತರಿಸಿ ಬೇರ್ಪಟ್ಟರೂ, ಕಾಣದೆ ಹೊಸೆದು ಸೇರಿಸುತ್ತದೆ ಹೃದಯಗಳ, ಕಗ್ಗಂಟಿಗೆ. ———————- ಡಾ. ಬಸವರಾಜ ಸಾದರ. — + —
Read More »ಬೆಪ್ಪುತಕ್ಕಡಿ
ಬೆಪ್ಪುತಕ್ಕಡಿ —————– ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ. — + —
Read More »ಅಹಮಧಿಕಾರ
ಅಹಮಧಿಕಾರ ——————– ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ. ಬಸವರಾಜ ಸಾದರ
Read More »ಕವನ
ಕವನ ಬಾರೋ ಬಾರು! ——————— ಎಲ್ಲೇ ನಿಂತ್ ಒಗದ್ರೂ ಕವಿ ತೆಲಿಗೇ ಬಡೀತಿದ್ದ ಧಾರ್ವಾಡದ ಕಲ್ಲು, ಈಗ ಬಡ್ಯಾಕ್ಹತ್ತೇತಿ ಬಾರೋ ಬಾರಿಗೆ; ಕಥೀ ಹಿಂಗಿರೂವಾಗ ಬೇಂದ್ರೆಯಜ್ಜಾ, ಬಾರೋ ಬಾರೋ ಸಾಧನಕೇರಿಗಂತ ಹೆಂಗ್ ಕರೀಲೋ ನಿನ್ನ ನಮ್ಮೂರಿಗೆ? ಡಾ. ಬಸವರಾಜ ಸಾದರ.
Read More »ಗಟ್ಟಿಗಂಟು
ಕವನ ಗಟ್ಟಿಗಂಟು ————— ಕಟ್ಟಿದರೆ ಕಟ್ಟಬೇಕು ಗಟ್ಟಿಯಾದ ಸಂಬಂಧಗಳ ಗಂಟು; ಸಡಿಲಾಗದ ಅದರ ಬಾಳಿಕೆ ನಾಲ್ಕು ಕಾಲ ಹೆಚ್ಚೇ ಉಂಟು. ಡಾ. ಬಸವರಾಜ ಸಾದರ
Read More »