Breaking News

Uncategorized

ಗ್ರಾಮ ಪಂಚಾಯತನ ಚುನಾವಣೆಯಲ್ಲಿ 39ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆ.!

ಯುವ ಭಾರತ ಸುದ್ದಿ,  ಗೋಕಾಕ: ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮ ಪಂಚಾಯತನ ಚುನಾವಣೆಯಲ್ಲಿ ೩೯ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಪಕ್ಷಗಳಿಗೆ ತಳಮಟ್ಟದಲ್ಲಿ ಭದ್ರ ಬುನಾದಿಯಂತಿರುವ ಈ ಪಂಚಾಯಿತಿ ಚುನಾವಣೆಯಲ್ಲಿ ಮತದಾನಕ್ಕೂ ಮುನ್ನವೇ ಗೋಕಾಕ ತಾಲೂಕಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗೆಲುವಿನ …

Read More »

ಟೇಕ್ವಾಂಡೊ ಅಂತರಾಷ್ಟಿಯ ಪ್ರಶಿಕ್ಷಣ ಸ್ಥಾನಪಡೆದ ಶ್ರೀಪಾದಗೆ ಸಚಿವ ಜಾರಕಿಹೊಳಿಯಿಂದ ಅಭಿನಂದನೆ.!

ಯುವ ಭಾರತ ಸುದ್ದಿ,  ಗೋಕಾಕ: ಟೇಕ್ವಾಂಡೊದಲ್ಲಿ ಅಂತರಾಷ್ಟಿçÃಯ ಪ್ರಶಿಕ್ಷಣ ಸ್ಥಾನಮಾನ ಪಡೆದಿರುವ ಬೆಳಗಾವಿಯ ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಚ್ ಶ್ರೀಪಾದ ಆರ್ ರಾವ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಈಚೆಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ಹಾಗೂ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುನೀಲ ರಾಯಬಾಗಿ ಇದ್ದರು

Read More »

ಶಿಕ್ಷಕರು ಮತ್ತು ಇಲಾಖೆಯ ನಡುವಿನ ಸಂಪರ್ಕ ಸಾಧಿಸುವಲ್ಲಿ ಶಿಕ್ಷಕರ ಸಂಘ ಮಹತ್ವದ್ದಾಗಿದೆ-ಬಾಲಚಂದ್ರ ಜಾರಕಿಹೊಳಿ.!

ಗೋಕಾಕ : ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವಿನ ಸಂಪರ್ಕ ಸಾಧಿಸುವಲ್ಲಿ ಶಿಕ್ಷಕರ ಸಂಘ ಮಹತ್ವದ್ದಾಗಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದ ಆವರಣದಲ್ಲಿ ರವಿವಾರ ಸಂಜೆ ಮೂಡಲಗಿ ತಾಲೂಕು ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸಮನ್ವಯತೆಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗುವಂತೆ ಶುಭ ಕೋರಿದರು. ಮೂಡಲಗಿ ತಾಲೂಕು ಘಟಕಕ್ಕೆ ಶಿಕ್ಷಕರ …

Read More »

ಫೆಬ್ರುವರಿ ೧ರಿಂದ ನಾಲ್ಕು ದಿನಗಳ ಕಾಲ ೧೬ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭ.!

ಗೋಕಾಕ: ಪ್ರತಿ ವರ್ಷ ಶ್ರೀ ಮಠದಿಂದ ಕೊಡಮಾಡುವ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ರವಿಶಂಕರ್ ಗುರೂಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ರವಿವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದಲ್ಲಿ ನಡೆದ ೧೬ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭದ ಪೂರ್ಣಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು. ಈ ಬಾರಿಯು ಲಿಂಗೈಕ್ಯ …

Read More »

ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರನ್ನು ಗೌರವಿಸುತ್ತಿರುವದು ಸಂತಸ ತಂದಿದೆ-ಶಿಕ್ಷಕ ಚಿಪ್ಪಲಕಟ್ಟಿ.!

ಗೋಕಾಕ: ಶಾಲಾ ದಿನಗಳಲ್ಲಿ ತಮಗೆ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಂಡು, ಅಂದಿನ ಶಾಲೆಯ ಎಲ್ಲ ಸಹಪಾಠಿಗಳು ಒಂದೆಡೆ ಸೇರಿ ಶಿಕ್ಷಕರಿಗೆ ಗುರುವಂದನೆಯಾಗಿ ನಮ್ಮನ್ನು ಗೌರವಿಸುತ್ತಿರುವದು ಸಂತಸ ತಂದಿದೆ ಎಂದು ಶಿಕ್ಷಕ ಬಸವರಾಜ ಚಿಪ್ಪಲಕಟ್ಟಿ ಹೇಳಿದರು. ರವಿವಾರದಂದು ನಗರದ ಸಮೀಪದ ಬಸವೇಶ್ವರ ಸಭಾ ಭವನದಲ್ಲಿ ನ್ಯೂ ಇಂಗ್ಲೀಷ ಸ್ಕೂಲ ಗೋಕಾಕ ಇಲ್ಲಿನ ೧೯೯೪-೯೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. …

Read More »

ಗ್ರಾಪಂ ಚುನಾವಣೆ: ಪಕ್ಷದ ಬಾವುಟ, ಚಿಹ್ನೆ ಬಳಸುವಂತಿಲ್ಲ

ಗ್ರಾಪಂ ಚುನಾವಣೆ: ಪಕ್ಷದ ಬಾವುಟ, ಚಿಹ್ನೆ ಬಳಸುವಂತಿಲ್ಲ; ಬಳಸಿದರೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ   ಯುವ ಭಾರತ ಸುದ್ದಿ ಬೆಳಗಾವಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಾಯತ್ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ. ಕಾರಣ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಕಾನೂನು ಉಲ್ಲಂಘನೆಯಾಗದಂತೆ ತಡೆಯಲು ಈ ಕೆಳಕಂಡ ಅಂಶಗಳನ್ನು ಗಮನಕ್ಕೆ ತರಲಾಗಿದೆ. 1) ರಾಜಕೀಯ ಪಕ್ಷಗಳು ಸಭೆ, …

Read More »

ಡಿ.13ರಂದು ಗುರುವಂದನಾ ಸಮಾರಂಭ.!

ಡಿ.13ರಂದು ಗುರುವಂದನಾ ಸಮಾರಂಭ.! ಯುವ ಭಾರತ ಸುದ್ದಿ, ಗೋಕಾಕ್: ನಗರದ ನ್ಯೂ ಇಂಗ್ಲೀಷ ಸ್ಕೂಲ ಗೋಕಾಕ ಇಲ್ಲಿನ 1994-95ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮವನ್ನು ಇದೆ ಡಿ.13ರಂದು ಆಯೋಜಿಸಿದ್ದಾರೆ. 1994-95ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳು 25 ವರ್ಷಗಳು ಕಳೆದಿದ್ದು, ಅಂದಿನ ತರಗತಿಯ ಎ,ಬಿ,ಸಿ,ಡಿ ವಿಭಾಗದ 264 ಜನ ಹಳೆಯ ವಿದ್ಯಾರ್ಥಿಗಳಲ್ಲಿ 168 ಜನ ಹಳೆಯ ವಿದ್ಯಾರ್ಥಿಗಳು ಕೂಡಿದ್ದು, ಇನ್ನುಳಿದ ಹಳೆಯ ವಿದ್ಯಾರ್ಥಿಗಳು ಸಂಪರ್ಕಿಸುವಂತೆ ಮನವಿ ಮಾಡಿದ್ದು, …

Read More »

ಅರಭಾಂವಿ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ರದ್ದು.!

ಯುವ ಭಾರತ ಸುದ್ದಿ, ಗೋಕಾಕ: ತಾಲೂಕಿನ ಅರಭಾಂವಿ ಪಟ್ಟಣದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವವನ್ನು ಕೋವಿಡ್-19 ಕಾರಣದಿಂದ ರದ್ದು ಪಡಿಸಿರುವದಾಗಿ ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ. ಕಾರ್ತಿಕ ಮಾಸದ ದಿ.18, 18, 2020ರಂದು ಜರುಗಲಿದ್ದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವಕ್ಕೆ ರಾಜ್ಯ, ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ ಹೀಗಾಗಿ ಕೋವಿಡ್- 19ಹಿನ್ನಲೆ ಸರಕಾರದ ಆದೇಶದ ಅನುಸಾರ ರದ್ದು ಮಾಡಿ, ಜಾತ್ರಾ ಕಮೀಟಿಯಿಂದ ದೇವಸ್ಥಾನದ ಆವರಣದಲ್ಲಿ ಫಲಕವನ್ನು ಅಳವಡಿಸಲಾಗಿದೆ. …

Read More »

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ.!

ಯುವ ಭಾರತ ಸುದ್ದಿ, ಗೋಕಾಕ್: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕಾ ಘಟಕ, ಗೋಕಾಕ. ಇದರ ೨೦೨೦-೨೫ ರ ಅವಧಿಗಾಗಿ ಕಾರ್ಯಕಾರಿ ಸಮಿತಿಗೆ ೧೫ ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ಎಮ್.ಕಂಬಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕಾ ಘಟಕ, ಗೋಕಾಕ. ಇದರ ೨೦೨೦-೨೫ರ ಅವಧಿಗಾಗಿ ಜರುಗಿದ ಕಾರ್ಯಕಾರಿ ಸಮಿತಿಯ ಚುನಾವಣೆಯ …

Read More »

ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ-ಪ್ರಯಾಣಿಕರ ಪರದಾಟ.!

ಯುವ ಭಾರತ ಸುದ್ದಿ, ಗೋಕಾಕ್: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಘೋಷಿಸಬೇಕೆಂದು ಮುಷ್ಕರ ಹಿನ್ನೆಲೆ ಶುಕ್ರವಾರದಂದು ಬೆಳಿಗ್ಗೆ 9 ಗಂಟೆಯಿಂದ ಕೆಎಸ್‌ಆರ್‌ಟಿಸಿಯ ನಗರ ಘಟಕದ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ನಗರ ಸಾರಿಗೆ ಘಟಕದ ಸುಮಾರು 1೦೦ ಕ್ಕೂ ಹೆಚ್ಚು ಸಾರಿಗೆ ನೌಕರರು ಧರಣಿ ಸತ್ಯಗ್ರಹ ನಡೆಸುತ್ತಿದ್ದು, 25 ಕ್ಕೂ ಹೆಚ್ಚು ಮಾರ್ಗಗಳಿಗೆ ಸಂಚಿರಿಸುತ್ತಿದ್ದ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಪರದಾಡುವಂತಾಯಿತು. ಬೆಳ್ಳಂಬೆಳಿಗ್ಗೆ ಬಸ್ಸು …

Read More »