Breaking News

ಅನಾವಶ್ಯಕ ಒತ್ತಡಕ್ಕೆ ಒಳಗಾಗದಿರಲು ಭಯದಿಂದ ಹೊರಬನ್ನಿ- ಶಿಕ್ಷಕ ಕುರಬೇಟ್

Spread the love

ಅನಾವಶ್ಯಕ ಒತ್ತಡಕ್ಕೆ ಒಳಗಾಗದಿರಲು ಭಯದಿಂದ ಹೊರಬನ್ನಿ- ಶಿಕ್ಷಕ ಕುರಬೇಟ್

ಯುವ ಭಾರತ ಸುದ್ದಿ ಮಮದಾಪುರ :
ಗೋಕಾಕ ತಾಲೂಕಿನ ಮಮದಾಪೂರದ ಶ್ರೀ ಮಾಯಮ್ಮ ದೇವಸ್ಥಾನ ಆವರಣದಲ್ಲಿ (ಡಿ. ಸಿ ಪಾವಟೆ ಯವರ ಮನೆಯ ಹಿಂಭಾಗ) ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 24ನೇ ಮಾಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬೆಟಗೇರಿಯ ಶ್ರೀ ವಿ. ವಿ. ಡಿ ಸರ್ಕಾರಿ ಪ್ರೌಢ ಶಾಲೆ ಸಹಶಿಕ್ಷಕ ಪ್ರಕಾಶ ಮ. ಕುರಬೇಟರು ವಿದ್ಯಾರ್ಥಿ ಹಾಗೂ ಯುವಕರು ತಮ್ಮ ಸುತ್ತಲಿನ ಪರಿಸರದೊಂದಿಗೆ ಅತ್ಯಂತ ಶಿಸ್ತುಬದ್ಧವಾಗಿರಬೇಕು. ಉತ್ತಮ ಹವ್ಯಾಸ, ಸದ್ಗುಣದ ಸಹಪಾಠಿಗಳು, ನೆರೆಹೊರೆಯವರೊಂದಿಗೆ ಉತ್ತಮ ಸಾಮರಸ್ಯದೊಂದಿಗೆ ಸದ್ವನಿಯೋಗದ ಸಮಯ ಪಾಲನೆಯೊಂದಿಗೆ ದಿನಗಳೆಯಬೇಕು. ಭಯದ ವಾತಾವರಣದಲ್ಲಿ ಎಂದಿಗೂ ಜೀವಿಸಬಾರದು. ನಾನೊಬ್ಬ ವಿದ್ಯಾರ್ಥಿ ಎಂಬ ಜವಾಬ್ದಾರಿಯೊಂದಿಗೆ ಎಲ್ಲರೊಂದಿಗೆ ಸಂತೋಷದಿಂದ ಬೆರೆತು ಪ್ರೀತಿ, ಸ್ನೇಹ ಸಂಯಮ ಮುಖ್ಯವಾಗಿರಿಸಿಕೊಂಡು, ತಾಳ್ಮೆ, ಸಹನೆ, ಅಸೂಯೆ, ಸಂಶಯ ಪಡುವಂತಹ ಗುಣಗಳಿಂದ ದೂರವಿದ್ದು ಬದುಕಬೇಕು. ಆಗ ಮಾತ್ರ ಮನುಷ್ಯ ಈ ಮಾನಸಿಕ ಒತ್ತಡದಿಂದ ಪಾರಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಮಾನಸಿಕ ಒತ್ತಡಕ್ಕೆ ಒಳಗಾಗಿ ಸಿಟ್ಟಿನ ಕೈಯಲ್ಲಿ ಬುದ್ದಿಕೊಡದಿರಲು ಶ್ರೀ ರಮಣ ಮಹರ್ಷಿಗಳ ಕಥೆಯೊಂದನ್ನು ಹೇಳಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗುದಗನವರ ತೋಟದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಶೈಲ ಆಯ್ ಕುಂಬಾರ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒತ್ತಡವು ಮುಂದುವರಿದಾಗ, ಅದು ಖಿನ್ನತೆ, ದೈಹಿಕ ನೋವು, ನಿದ್ರೆಯ ತೊಂದರೆ, ಜೀರ್ಣಕಾರಿ ಸಮಸ್ಯೆಗಳು, ಆಹಾರ ಮತ್ತು ತೂಕ ಬದಲಾವಣೆಗಳು ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡ ವಿಶ್ರಾಂತ ಪೋಲಿಸ್ ಅಧಿಕಾರಿಗಳಾದ ಪಿ. ಎಸ್ ಸಬರದ ಈ ಚಿಂತಕರ ಚಾವಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ, ಮನೆ ಕೆಲಸ ಅಥವಾ ಶಾಲೆಯಲ್ಲಿ ಜವಾಬ್ದಾರಿಗಳ ಒತ್ತಡವು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಶಾಂತ ಮನಸ್ಸಿನಿಂದ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ದೂರವಾಣಿ ಕಿರಣ ವಗ್ಗನ್ನವರ ವಿಜ್ಞಾನ ಗೀತೆಯನ್ನು ಹಾಡಿದರು. ವಿಜಯ ಈಟಿ ಸರ್ವರನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯ ಚಿಂತಕರ ಚಾವಡಿ ಸಂಚಾಲಕ ರ. ವೀ ದೇಮಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಗೌರವ ಸಮರ್ಪಿಸಿ ವಂದಿಸಿದರು. ಮಹೇಶ ಗಿಡಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಅಣ್ಣಪೂರ್ಣೇಶ್ವರಿ ಮುರಗೋಡ ಶ್ರೀ ಅಲ್ಲಮಪ್ರಭು ದೇವರರವರ ವಚನವನ್ನು ವಾಚಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

six − six =