Breaking News

ನಗರಸಭೆಯಿಂದ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ವ್ಯಾಪಾರಸ್ಥರು ಸದುಪಯೋಗಪಡಿಸಿಕೊಳ್ಳಿ-ಮಾಜಿ ಸಚಿವ ರಮೇಶ ಜಾರಕಿಹೊಳಿ.!

Spread the love

ನಗರಸಭೆಯಿಂದ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ವ್ಯಾಪಾರಸ್ಥರು ಸದುಪಯೋಗಪಡಿಸಿಕೊಳ್ಳಿ-ಮಾಜಿ ಸಚಿವ ರಮೇಶ ಜಾರಕಿಹೊಳಿ.!


ಗೋಕಾಕ: ಮಾಸ್ಟರ್ ಪ್ಲಾö್ಯನ ಯೋಜನೆಯಿಂದ ಸಣ್ಣ ಪುಟ್ಟ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಸಣ್ಣಪುಟ್ಟ ವ್ಯಾಪಾರಸ್ಥರ ಅನುಕೂಲವಾಗುವ ನಿಟ್ಟಿನಲ್ಲಿ ನಗರಸಭೆಯಿಂದ ಬೃಹತ್ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ವ್ಯಾಪಾರಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ನಗರಸಭೆಯ ನಗರೋತ್ಥಾನ ಯೋಜನೆಯಲ್ಲಿ ೨.೮೫ ಕೋಟಿ ಅನುದಾನದಡಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಎಸ್.ಎಫ್.ಸಿ ವಿಶೇಷ ಅನುದಾನ, ೧೪ನೇ ಹಣಕಾಸು ಮತ್ತು ಐ.ಡಿ.ಎಸ್.ಎಂಟಿ ರಿಜನರೇಟರ ನಿಧಿಯಲ್ಲಿ ೩.೧೪ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಸಂರ್ಕೀಣದ ಶಂಕು ಸ್ಥಾಪನೆ ನೆರವೆರಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗೋಕಾಕ ನಗರಕ್ಕೆ ಮಾಸ್ಟರ್ ಪ್ಲಾö್ಯನ್ ಅವಶ್ಯವಿತ್ತು ಹೀಗಾಗಿ ಮಾಸ್ಟರ್ ಪ್ಲಾö್ಯನ್ ಕೈಗೆತ್ತಕೊಳ್ಳಲಾಯಿತು. ಸದ್ಯ ಮಾರುಕಟ್ಟೆ ಪ್ರದೇಶದಲ್ಲಿ ವಾಹನಗಳ ದಟ್ಟನೆ ಕಡಿಮೆಯಾಗಿ ಸಾರ್ವಜನಿಕರ ಸಂಚಾರಕ್ಕೆ ಸಹಕಾರಿಯಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗಾಗಿ ನಗರಸಭೆಯಿಂದ ವಾಣಿಜ್ಯ ಮಳಿಗೆ ಉದ್ಘಾಟಿಸಲಾಗಿದೆ ಅದರ ಪಕ್ಕದಲ್ಲೆ ಮತ್ತೊಂದು ವಾಣಿಜ್ಯ ಮಳಿಗೆ ಅತಿಶೀಘ್ರದಲ್ಲೆ ಪ್ರಾರಂಭಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗುವದು ಎಂದು ರಮೇಶ ಜಾರಕಿಹೊಳಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಡಾ. ಐ ಎ ಉಳ್ಳಾಗಡ್ಡಿ ಮಾತನಾಡಿ, ನಗರಸಭೆಯಿಂದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲು ಅನುಷ್ಠಾನಗೋಳಿಸುತ್ತಿರುವ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಂಡು ನಗರಸಭೆಗೆ ಸಹಕಾರ ನೀಡಬೇಕು. ನಗರಸಭೆ ಕರಗಳನ್ನು ಸಕಾಲದಲ್ಲಿ ತುಂಬಿ ಅಭಿವೃದ್ಧಿ ಕಾರ್ಯ ಮಾಡಲು ಸಹಕರಿಸಿ.ಪ್ಲಾಸ್ಟಿಕ ಬಳಕೆಯನ್ನು ನಿಷೇಧಿಸಿ, ನಗರಸಭೆಯಿಂದ ತ್ಯಾಜ್ಯಗಳ ವಿಲೇವಾರಿ ವ್ಯವಸ್ಥೆಯ ಉಪಯೋಗ ಪಡೆದುಕೊಂಡು ನಗರದ ಸೌಂದರ್ಯಕರಣಕ್ಕೆ ಮಹತ್ವ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸ್ಥಾಯಿ ಸಮಿತಿ ಚೆರಮನ್ ಕೆ.ಎಂ.ಗೋಕಾಕ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಅಭಿಯಂತ ಎಂ.ಎಲ್.ಗಣಿ, ಪೌರಾಯುಕ್ತ ಶಿವಾನಂದ ಹಿರೇಮಠ, ಸಹಾಯಕ ಕಾರ್ಯಪಾಲಕ ಅಭಿಯಂತ ವ್ಹಿ.ಎಂ.ಸಾಲಿಮಠ, ಎಂ.ಎA.ಸಾಗರೆಕರ, ಎ.ಬಿ.ರಜಪೂತ, ವ್ಹಿ.ವಾಯ್.ಪಾಟೀಲ್, ಗುತ್ತಿಗೆದಾರರಾದ ಬಿ.ಕೆ ಗಂಗರಡ್ಡಿ, ಬಸವಂತ ದಾಸನವರ ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

8 − 5 =