Breaking News

ಗೋಕಾಕ : ಗುರುವಂದನೆ ಕಾರ್ಯಕ್ರಮ ಸಂಪನ್ನ

Spread the love

ಗೋಕಾಕ : ಗುರುವಂದನೆ ಕಾರ್ಯಕ್ರಮ ಸಂಪನ್ನ

ಯುವ ಭಾರತ ಸುದ್ದಿ ಗೋಕಾಕ :
ಸಂಘಟನೆಯಲ್ಲಿ ದೊಡ್ಡ ಶಕ್ತಿ ಇದ್ದು, ಅದನ್ನು ಸತ್ಕಾರ್ಯಗಳಲ್ಲಿ ತೊಡಗಿಸಿ ಕಲ್ಯಾಣ ರಾಜ್ಯ ನಿರ್ಮಿಸುವಂತೆ ಬಸಸಧರ್ಮ ಪೀಠದ ಪೀಠಾಧ್ಯಕ್ಷರಾದ ಡಾ.ಗಂಗಾಮಾತಾಜಿ ಅವರು ಹೇಳಿದರು.
ಶನಿವಾರದಂದು ಸಾಯಂಕಾಲ ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ , ಅಕ್ಕನಾಗಲಾಂಬಿಕೆ ಮಹಿಳಾ ಗಣ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಇವುಗಳ ಸಂಯುಕ್ತಾಶ್ರಯದಲ್ಲಿ ಗುರು ವಂದನೆ ಹಾಗೂ ಅಭಿನಂದನ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಬಸವದಳದ ಸೂತ್ರದಲ್ಲಿ ಸಂಘಟಿತರಾಗಿ ಧರ್ಮ ಜಾಗೃತಿ ಮೂಡಿಸಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಜನ್ಮವನ್ನು ಸಾರ್ಥಕಪಡಿಸಿಕೊಳ್ಳಿ, ಶರಣರ ವಚನಗಳನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ ಕಾಯಕ ಮಾಡುವದರೊಂದಿಗೆ ತತ್ವಜ್ಞಾನಿ ವಿನಾಯಕ ಬಸವಣ್ಣನವರನ್ನು ಪೂಜಿಸುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ಬಸವ ರತ್ನಮಾತಾಜಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ನ್ಯಾಯವಾದಿ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ರಾಷ್ಟ್ರೀಯ ಬಸವದಳ ರಾಜ್ಯಾಧ್ಯಕ್ಷ ಚನ್ನಬಸವ ಬಿಜಲಿ, ನಗರ ಘಟಕದ ಅಧ್ಯಕ್ಷ ಬಸವಂತಪ್ಪ ಉಳ್ಳೇಗಡ್ಡಿ ಇದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಗರದ ಚನ್ನಬಸವ ಬಿಜಲಿ ಅವರನ್ನು ಸತ್ಕರಿಸಲಾಯಿತು.
ಶಿವಾನಂದ ಖಡಕಬಾಂವಿ ಸ್ವಾಗತಿಸಿದರು,ಸಯ್ಯದ ಬಾಸಿತ ಅಲಿ ನಿರೂಪಿಸಿದರು.ರಾಜೇಶ್ ಉಳ್ಳೇಗಡ್ಡಿ ವಂದಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

8 + eight =