Breaking News

ಮಹಾ ನಾಯಕನನ್ನು ಮನೆಗೆ ಕಳಿಸಿಯೇ ನಾನು ರಾಜಕೀಯ ನಿವೃತ್ತಿನಾಗುವೆ -ಮತ್ತೆ ಶಪಥಗೈದ ರಮೇಶ ಜಾರಕಿಹೊಳಿ!

Spread the love

ಮಹಾ ನಾಯಕನನ್ನು ಮನೆಗೆ ಕಳಿಸಿಯೇ ನಾನು ರಾಜಕೀಯ

ನಿವೃತ್ತಿನಾಗುವೆ – ಮತ್ತೆ ಶಪಥಗೈದ ರಮೇಶ ಜಾರಕಿಹೊಳಿ!

 

ಯುವ ಭಾರತ ಸುದ್ದಿ  ಗೋಕಾಕ:  ಶನಿವಾರ ಬೆಳಗಾವಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ ಶಾ ಜಿಲ್ಲೆಯ ಎಲ್ಲ ನಾಯಕರ ಸಭೆ ನಡೆಸಿ, ಬೂಸ್ಟರ್ ಡೋಸ್ ನೀಡಿದ್ದಾರೆ. ಎಲ್ಲ ನಾಯಕರು ವೈಮನಸ್ಸು ಬಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ತಿಳಿಸಿದ್ದು, ಬೆಳಗಾವಿಯಲ್ಲಿ ಕನಿಷ್ಠ ಹದಿನೈದು ಸ್ಥಾನ ತರಲು ಪ್ರಯತ್ನಿಸುವುದಾಗಿ ವರಿಷ್ಠರಿಗೆ ತಿಳಿಸಿರುವದಾಗಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ಸಂಜೆ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿಯ ಎರಡು ಜಿಪಂ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ ಪಕ್ಷದ ವರಿಷ್ಠರ ಕನಸು ನನಸು ಮಾಡಲು ನಾನು ಸಿದ್ಧನಿದ್ದೆನೆ. ನಿನ್ನೆ ನಡೆದ ಸಭೆಯಲ್ಲಿ ಅಮಿತ್ ಶಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತೆನೆ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಆಮಿಷಗಳನ್ನು ಒಡ್ಡಿ ಜನರನ್ನು ದಾರಿ ತಪ್ಪಿಸುವ ಕೆಲಸಮಾಡುತ್ತಿದ್ದು, ಅವರ ಆಮಿಷಗಳಿಗೆ ಒಳಗಾಗದಿರಿ. ನಾನು ಕಾಂಗ್ರೇಸ್ ಪಕ್ಷದಲ್ಲಿ 17 ವರ್ಷ ಶಾಸಕನಾಗಿದ್ದೆ. ಆದರೆ ಬಿಜೆಪಿಗೆ ಬಂದ ಮೂರು ವರ್ಷದಲ್ಲಿ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ಕೇಲಸ ಮಾಡುತ್ತಿದ್ದೆನೆ. 17 ವರ್ಷ ಸಿಗದ ಪ್ರೀತಿ ಬಿಜೆಪಿಯಲ್ಲಿ ಸಿಕ್ಕಿದೆ. ಬಿಜೆಪಿ ಪಕ್ಷ ಸ್ವಲ್ಪ ವಿಳಂಭವಾದರು ನೀಡಿದ ಭರವಸೆ ಈಡೇರಿಸುತ್ತೆ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರುಗಳು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾರೆ. ನಾನು ಪಕ್ಷಾಂತರ ಆಗುವದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರ ಮಾತಿಗೆ ಕಿವಿಗೊಡದಿರಿ. ಪಕ್ಷದ ಎಲ್ಲ ಮುಖಂಡರು ಕಾರ್ಯರ್ಕರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಮುನ್ನಡೆಯೋಣ. ಸಾಮಾನ್ಯ  ಕಾರ್ಯಕರ್ತರಿಂದ ಹಿಡಿದು ಪ್ರಮುಖ ನಾಯಕರ ವರೆಗೂ ಒಳ್ಳೆಯ ಸ್ಥಾನ ಬಿಜೆಪಿ ನೀಡಿದೆ ಎಂದು ತಿಳಿಸಿದರು. ಬೆಂಗಳೂರಿನ ಮಹಾನ್ ನಾಯಕ ಮಾಧ್ಯಮದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡಿಸುತ್ತ ಬಂದಿದ್ದಾನೆ. ಕಳೆದ ಬಾರಿ ಕಾರ್ಯಕ್ರಮದಲ್ಲಿ ನಾನು ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ನಾನು ಮಾತನಾಡಲು ಕಾರಣ ಜಿಲ್ಲೆಯ ವಿರೋಧ ಪಕ್ಷದ ಕೆಲವರು ನಾನು ಸಚಿವ ಸ್ಥಾನ ಪಡೆಯುತ್ತೆನೆ ಎಂಬ
ಭ್ರಮೆಯಲ್ಲಿದ್ದಾರೆ. ಅದು ಅಸಾಧ್ಯ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾಸಕ ರಮೇಶ ಜಾರಕಿಹೊಳಿ ಬರುವ ಚುನಾವಣೆಯಲ್ಲಿ ಸ್ಫರ್ಧಿಸಬಾರದೆಂದಿದ್ದೆ. ಆ ಮಹಾನ್ ನಾಯಕನ ಮಟ್ಟ ಹಾಕುವ ಸಲುವಾಗಿ ಮುಂದಿನ ಚುನಾವಣೆ ಮಾತ್ರ ಸ್ಫರ್ಧೆ ಮಾಡಲಿದ್ದೆನೆ.

ನಂತರ ಕಾರ್ಯಕರ್ತರಿಗೆ ಮತ್ತು ಪಕ್ಷದ ಇನ್ನುಳಿದ ನಾಯಕರಿಗೆ ಅವಕಾಶ ಬಿಟ್ಟುಕೊಡುವದಾಗಿ ತಿಳಿಸಿದರು. ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪಕ್ಷ ಜವಾಬ್ದಾರಿ ನೀಡಿದ್ದು, ಎಲ್ಲ ಮುಖಂಡರು, ಹಿರಿಯರು ಅವರ ಬೆನ್ನ ಹಿಂದೆ ನಿಂತು ಅವರನ್ನು ದಾಖಲೆಯ ಮತಗಳಲ್ಲಿ ಆಯ್ಕೆ ಮಾಡೋಣ. ಕಳೆದ ಇಪ್ಪತ್ತೈದು ವರ್ಷಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರು ಬಸವಣ್ಣನವರ ಅನುಭವ ಮಂಟಪದಂತೆ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ಶೇ.90 ನೀರಾವರಿ, ಶೈಕ್ಷಣಿಕ ಕ್ಷೇತ್ರದಲ್ಲಿ, ಆರೋಗ್ಯ, ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಪಕ್ಷದ ಹೆಚ್ಚಿನ ಕೆಲಸ ಇರುವದರಿಂದ ಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು. ಪಕ್ಷದ ಮುಖಂಡರುಗಳಾದ ರಾಮಣ್ಣ ಹುಕ್ಕೇರಿ, ಸುಭಾಸ ಪಾಟೀಲ ಹಾಗೂ ಸುರೇಶ ಪಾಟೀಲ ಮಾತನಾಡಿ, ಜಾರಕಿಹೊಳಿ ಸಹೋದರರು ಎರಡು ಬಾರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅವರು ಬಿಜೆಪಿ ಪಕ್ಷದ ಬಲ ಹೆಚ್ಚಿಸಿದ್ದಾರೆ. ಕಳೆದ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಮಂಗಲಾ ಅಂಗಡಿ ಆಯ್ಕೆಯಲ್ಲಿ ರಮೇಶ ಜಾರಕಿಹೊಳಿ ಪಾತ್ರ ಮಹತ್ವವಾಗಿದೆ. ಸರ್ವಸಮಾಜವನ್ನು ಒಗ್ಗೂಡಿಸಿ ಮುನ್ನಡೆಸುತ್ತಿದ್ದಾರೆ. ಕೆಲವರು ಇಂತಹ ಬಸವತತ್ವವಾದಿಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕೊಣ್ಣೂರ ಪಪಂ ಅಧ್ಯಕ್ಷೆ
ಮಂಗಲಾ ತೇಲಿ, ಉಪಾಧ್ಯಕ್ಷ ಅಶೋಕ ನಾಯಿಕ, ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಬಿಜೆಪಿ ಪದಾಧಿಕಾರಿಗಳಾದ ಬಸವರಾಜ ಹಿರೇಮಠ, ಗಣುಸಿಂಗ ರಜಪೂತ, ಜಯಾನಂದ ಹುಣಚ್ಯಾಳ, ಪರಶುರಾಮ ಗೊಡಿ, ಸುರೇಶ ಪಾಟೀಲ, ಕರುಣಾ ಗರುಡಕರ, ರಾಮಣ್ಣ ಹುಕ್ಕೇರಿ, ಡಿ ಎಮ್ ದಳವಾಯಿ, ಸುರೇಶ ಕಾಡದವರ, ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ವಿವಿಧ ಗ್ರಾಮಗಳ ಹಿರಿಯರು ಇದ್ದರು. ಪ್ರಕಾಶ ಕರನಿಂಗ ಸ್ವಾಗತಿಸಿದರು. ಎ ಜಿ ಕೊಳಿ ನಿರೂಪಿಸಿ, ವಂದಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

twelve + 10 =