ಭತಗುಣಕಿಯಲ್ಲಿ ಶ್ರೀ ಖಂಡೋಬಾ ದೇವರ ಜಾತ್ರಾ ಮಹೋತ್ಸವ
ಯುವ ಭಾರತ ಸುದ್ದಿ ಇಂಡಿ : ಭತಗುಣಕಿ ಗ್ರಾಮದಲ್ಲಿರುವ ಶ್ರೀ ಖಂಡೋಬಾ ದೇವರ ಜಾತ್ರೆಯ ಅಂಗವಾಗಿ ಸುಮಾರು ಐದು ದೇವರ ಪಲ್ಲಕ್ಕಿ ಮೆರವಣಿಗೆ, ಅಂದು ರಾತ್ರಿ ಮೈಲಾರ ಲಿಂಗನ ಪದಗಳು ನಡೆದವು.
ಮುಂಜಾನೆ ಶ್ರೀ ಬೀರಲಿಂಗೇಶ್ವರ ಡೂಳ್ಳಿನ ಸಂಘ ಹಲಸಂಗಿ, ಶ್ರೀಅಮೋಘಸಿದ್ದೇಶ್ವರ ಡೂಳ್ಳಿನ ಸಂಘ ಮುರಗಾನೂರ ಇವರಿಂದ ನಡೆದವು. ಡೊಳ್ಳಿನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ ಭತಗುಣಕಿ ಗ್ರಾಮದ ನಾಗರಿಕರು ಸರ್ವ ಧರ್ಮದ ಹಾಗೂ ಭಾವೈಕ್ಯತೆಯಿಂದ ಶ್ರೀ ಖಂಡೋಬಾ ದೇವರ ಜಾತ್ರೆಯನ್ನು ಪ್ರತಿವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸೌಹಾರ್ದದ ಸಂಕೇತವಾಗಿ ಖಂಡೋಬಾ ದೇವರ ಜಾತ್ರೆಯನ್ನು ಆಚರಿಸುತ್ತಾರೆ.ನಾಡಿಗೆ ಹಾಗೂ ರೋಗ ರುಜಿನಗಳ ನಿರ್ಮೂಲನೆಗೆ ದೇವರು ಕರುಣಿಸಲಿ, ಉತ್ತಮ ಮಳೆ ಬೆಳೆ ರೈತರ ಬದುಕಿಗೆ ವರದಾನ ನೀಡಲೇಂದು ಶುಭಹಾರೈಸಿದರು.
ಸಿದ್ದು ಡಂಗಾ,ರಾಜು ಬನಗೋಂಡೆ, ಬಸವರಾಜ ನಾವಿ, ಬಸವರಾಜ ಗೋರವ್ವ, ಬಸವರಾಜ ದಶವಂತ,ಚಂದ.ನಾವಿ,ಖಂಡು ಗೋರವ,ಶಿವಾಜಿ ಪವಾರ, ಬಸವರಾಜ ಗೋರವ, ಬಸವರಾಜ ದಶವಂತ,ಪ್ರಶಾಂತ ದಶವಂತ ಮುಂತಾದವರು ಉಪಸ್ಥಿತರಿದ್ದರು.