Breaking News

ರಮೇಶ ಜಾರಕಿಹೊಳಿಯವರು ಮಂತ್ರಿಯಾಗಲಿ:ಅಯ್ಯಪ್ಪ ಸ್ವಾಮಿ ಮಾಲಾಧಾರಿ ಹರಕೆ!

Spread the love

ರಮೇಶ ಜಾರಕಿಹೊಳಿಯವರು ಮಂತ್ರಿಯಾಗಲಿ : ಅಯ್ಯಪ್ಪ ಸ್ವಾಮಿ ಮಾಲಾಧಾರಿ ಹರಕೆ!

 

ಯುವ ಭಾರತ ಸುದ್ದಿ ಗೋಕಾಕ:  ಗೋಕಾಕ ತಾಲೂಕಿನ ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರು ವಿಶಿಷ್ಟ ರೀತಿಯಲ್ಲಿ ಹರಕೆ ಹೊತ್ತಿದ್ದಾರೆ. ಅದರಲ್ಲೂ ತಮ್ಮ ಅಚ್ಚು ಮೆಚ್ಚಿನ ಜಾರಕಿಹೊಳಿ ಮನೆತನದವರ ಏಳಿಗೆಗಾಗಿ ಅವರು ಅಯ್ಯಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಜಾರಕಿಹೊಳಿ ಸಹೋದರರು ಎಲ್ಲಾ ಚುನಾವಣೆಗಳಲ್ಲಿ ಗೆದ್ದು ಬರಲಿ, ಸಚಿವ ಸ್ಥಾನವನ್ನು ಅಲಂಕರಿಸಲಿ ಎಂದು ಪಂದಳಕಂದ ಅಯ್ಯಪ್ಪನಲ್ಲಿ ಮೊರೆ ಇಟ್ಟಿದ್ದಾರೆ.

ಹಲವು ಜನ ಅಭಿಮಾನಿಗಳು ಅವರ ಅವರ ಅಭಿಮಾನಿ ಬಳಗದ ಫೋಟೋಗಳನ್ನು ಹಿಡಿದು ಜಾತ್ರೆಗಳಲ್ಲಿ ಪೂಜೆ ಸಲ್ಲಿಸುವುದು ಹಾಗೂ ಅನೇಕ ಹರಕೆಗಳನ್ನು ಹೊತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ನೀವು ನೋಡಿರ್ತಿರಿ.ಆದರೆ ಇಲ್ಲೊಬ್ಬರು ಗೋಕಾಕ ತಾಲೂಕಿನ ಸಿದ್ದು ಕುಳ್ಳರ ಸ್ವಾಮಿ ಎಂಬ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತ ಜಾರಕಿಹೊಳಿ ಕುಟುಂಬದ ಎಲ್ಲ ಸದಸ್ಯರು ಇರುವ ಫೋಟೋ ಹಿಡಿದುಕೊಂಡು ಶಬರಿಮಲೆ ಯಾತ್ರೆಗೆ ತೆರಳಿದ್ದಾರೆ .

ಸಾಹುಕಾರ ರಮೇಶ ಜಾರಕಿಹೊಳಿ ಮಂತ್ರಿ ಆಗಬೇಕು ಹಾಗೂ ಮುಂಬರುವ ಚುನಾವಣೆಗಳಲ್ಲಿ ಎಲ್ಲರು ವಿಜಯಶಾಲಿ ಆಗಲಿ ಎಂಬುದು ಇವರ ಆಸೆ.ಸಾವಿರಾರು ಕಿಲೋಮೀಟರ್ ದೂರದಲ್ಲಿ ಇರುವ ಶಬರಿಗಿರಿಗೆ ಹೋಗಿರುವ ಈ ಭಕ್ತ ಸಾಹುಕಾರರ ಕುಟುಂಬದ ಮೇಲಿನ ಅಭಿಮಾನವನ್ನು ಎತ್ತಿ ತೋರಿಸುತ್ತಿದೆ.ಒಟ್ಟಾರೆ ಕೋಟ್ಯಂತರ ಭಕ್ತರ ದೇವರಾಗಿರುವ ಅಯ್ಯಪ್ಪ ಸ್ವಾಮಿಯ ಈ ಭಕ್ತನ ಪ್ರಾರ್ಥನೆ ನೆರವೇರಿಸುವಂತಾಗಲಿ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

5 × 1 =