Breaking News

ಭಾವಭೇದ ಅಳಿಯಲಿ ಭಾವೈಕ್ಯತೆ ಉಳಿಯಲಿ – ಸಾವಳಗಿಶ್ರೀ!!

Spread the love

ಬುದುವಾರಂದು  ಶ್ರೀ ಅಡವಿಸಿದ್ದೇಶ್ವರ ಗದ್ದುಗೆಗೆ ತರಕಾರಿ ಅಲಂಕಾರ ಮಾಡಿರುವುದು.

 

ಭಾವಭೇದ ಅಳಿಯಲಿ ಭಾವೈಕ್ಯತೆ ಉಳಿಯಲಿ – ಸಾವಳಗಿಶ್ರೀ!!

ಕಾರ್ಯಕ್ರಮವನ್ನು ಗೋಕಾಕ್ ರಾಜಕೀಯ ಧುರೀಣರಾದ ಅಂಬೀರಾವ್ ಪಾಟೀಲ್ ಉದ್ಘಾಟಿಸಿದರು.

 ಯುವ ಭಾರತ ಸುದ್ದಿ  ಗೋಕಾಕ್: ದೇವನೊಬ್ಬ ನಾಮ ಹಲವು ನಾಮದ ಹೆಸರಿನಲ್ಲಿ ಕಲಹಗಳಾಗದೇ ಪ್ರೀತಿ, ನೀತಿರೀತಿಯಿಂದ ಬಾಳಬೇಕು ಇರುವುದೊಂದೆ ಬದುಕು ಜಾತಿಮತವ ಮರೆತು ಒಂದಾಗಿ ಬಾಳಬೇಕು ಎಂದು ಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಮಠದ ಶ್ರೀಮನ್‌ಮಹಾರಾಜ ನಿರಂಜನ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರ ಮಹೋತ್ಸವದ ಕುಂದರನಾಡೋತ್ಸವ-೨೦೨೨ ಉದ್ಘಾಟನೆ ಹಾಗೂ ಭಾವೈಕ್ಯ ಸಮ್ಮೇಳನ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನು ನಡೆ-ನುಡಿ ಒಂದಾಗಿಬಾಳಿದರೆ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ. ನಡೆನುಡಿ ವ್ಯತ್ಯಾಸವಾದಲ್ಲಿ ಬದುಕು ಭಾರವಾಗುತ್ತೆ. ಯಾವುದೇ ಧಾರ್ಮಿಕ ಆಚರಣೆಗಳು ಆತ್ಮೋದ್ದಾರವಾಗಿರಬೇಕೆ ವಿನಃ ಡಾಂಭಿಕ ಆಚರಣೆಯಾಗಿರಬಾರದು. ಶ್ರೀಮಠದ ಪೂಜ್ಯರು ಕಿರಿಯ ವಯಸ್ಸಿನಲ್ಲಿ ಈ ಭಾಗದಲ್ಲಿ ಹಲವಾರು ಸಾಮಾಜಿಕ-ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯ ರಲ್ಲರಿಗೂ ಮಾದರಿಯಾಗಲಿ ಎಂದರು.


ಗೋಕಾಕ್ ಶೂನ್ಯಸಂಪಾದನಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಸರ್ವ ಧರ್ಮದವರನ್ನು ಏಕತೆಯಿಂದ ಕಾಣುವ ಏಕೈಕ ದೇಶ ನಮ್ಮ ಭಾರತ. ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಸಮಾಜದಲ್ಲಿ ದುಖಃದಲ್ಲಿರುವವರು, ಸಮಸ್ಯೆಯಲ್ಲಿರುವವರನ್ನು ಮೇಲಕ್ಕೆ ಎತ್ತುವುದೇ ನಿಜವಾದ ಧರ್ಮ ಎಂದರು.
ಕಾರ್ಯಕ್ರಮವನ್ನು ಗೋಕಾಕ್ ರಾಜಕೀಯ ಧುರೀಣರಾದ ಅಂಬೀರಾವ್ ಪಾಟೀಲ್ ಉದ್ಘಾಟಿಸಿದರು.
ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಪಾಶ್ಚಾಪುರದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ಚಾಮಿಗಳು, ಮೂಲಗದ್ದೆಯ ಚನ್ನಬಸವ ಮಹಾಸ್ವಾಮಿಗಳು,ವಿಶ್ವನಾಥ ದೇವರು ಚರಂತಿಮಠ ಕುಂದರಿಗಿ,ಮೌಲಾನಾ ಅಲ್ಲಮಖಾನ ದೇಸಾಯಿ, ಸಿಸ್ಟರ್ ಫಾತೀಮಾ ಡೇವಿಡ್, ರಾಜಕೀಯ ಮುಖಂಡರಾದ ಭೀಮನಗೌಡ್ರು ಪೋಲಿಸ್‌ಗೌಡ್ರು, ಭಕ್ತಾಧಿಗಳು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

fourteen − five =