ಗೋಕಾಕ: ದಿ.ಸುರೇಶ ಅಂಗಡಿಯವರ ನಿಧನದ ಹಿನ್ನಲೆ ತೆರವಾದ ಬೆಳಗಾವಿ ಲೋಕಸಭಾ ಉಪಚುನಾವಣೆಯ ಅಖಾಡಕ್ಕೆ ಬಾಲಚಂದ್ರ ಜಾರಕಿಹೊಳಿ ಪ್ರವೇಶಿಸಿದ್ದು, ಕಾಂಗ್ರೇಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ.
ಹೌದು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಕೊಡುವ ನಿಟ್ಟಿನಲ್ಲಿ ಜಾರಕಿಹೊಳಿ ಸಹೋದರರು ಕಾಂಗ್ರೇಸ್ ಪಕ್ಷಕ್ಕೆ ನಡುಕ ಹುಟ್ಟಿಸಿದ್ದರು. ಬೆಂಗಳೂರಿನಿAದ ಗೋಕಾಕಕ್ಕೆ ಆಗಮಿಸಿರುವ ಬಾಲಚಂದ್ರ ಜಾರಕಿಹೊಳಿ ಸೋಮವಾರ ಸಂಜೆ ೫ ಗಂಟೆಗೆ ಗೋಕಾಕ ನಗರದ ಎನ್.ಎಸ್.ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಸಭೆ ಕರೆದಿದ್ದು ಕಾಂಗ್ರೇಸ್ ಪಾಳಯದಲ್ಲಿ ತಲ್ಲಣ ಮೂಢಿಸಿದೆ.
ಬಿಜೆಪಿ ಅಭ್ಯರ್ಥಿ ಮಂಗಲಾ ಅಂಡಿಯವರ ಪರ ಕೆಲಸ ಮಾಡುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿರುವ ಜಾರಕಿಹೊಳಿ ಸಹೋದರರು. ಈಗ ಅಖಾಡಕ್ಕೆ ತಾವೇ ಬರಲು ಸಜ್ಜಾಗಿರುವ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಸದ್ಯ ಮಾಜಿ ಸಚಿವ ರಮೇಶ ಜಾರಕಿಹೊಳಿ ಅನಾರೋಗ್ಯದ ಹಿನ್ನಲೆ ವಿಶ್ರಾಂತಿ ಪಡೆಯುತ್ತಲೆ ಅಳಿಯ ಅಂಬಿರಾವ ಪಾಟೀಲ ಅವರ ಮೂಲಕ ತಮ್ಮ ಕ್ಷೇತ್ರದಲ್ಲಿ ಉಪಚುನಾವಣೆಗೆ ರಣತಂತ್ರ ಹೆಣೆಯುತ್ತಿದ್ದು, ಈಗ ಬಾಲಚಂದ್ರ ಜಾರಕಿಹೊಳಿ ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಕೇಲಸ ಮಾಡಲು ನಗರಕ್ಕೆ ಆಗಮಿಸಿದ್ದಾರೆ.
