Breaking News

ಮನ್ನಿಕೇರಿ : ಮಹಾಂತಲಿಂಗೇಶ್ವರ ಸಭಾ ಭವನ, ಪ್ರಸಾದ ನಿಲಯ, ಅತಿಥಿ ಗೃಹ, ಜಾತ್ಯಾತೀತ ಹಿಂದೂ ಸಮಾವೇಶ ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

Spread the love

ಮನ್ನಿಕೇರಿ : ಮಹಾಂತಲಿಂಗೇಶ್ವರ ಸಭಾ ಭವನ, ಪ್ರಸಾದ ನಿಲಯ, ಅತಿಥಿ ಗೃಹ, ಜಾತ್ಯಾತೀತ ಹಿಂದೂ ಸಮಾವೇಶ ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

ಯುವ ಭಾರತ ಸುದ್ದಿ ಗೋಕಾಕ :
ಮನ್ನಿಕೇರಿ ಭಾಗದ ಪ್ರಸಿದ್ಧ ಆರಾಧ್ಯ ದೈವ ಮಹಾಂತಲಿಂಗೇಶ್ವರ ಮಠದಲ್ಲಿ ಸುಸಜ್ಜಿತವಾದ ಸಭಾ ಭವನವನ್ನು ನಿರ್ಮಿಸಲಾಗಿದ್ದು, ಮನ್ನಿಕೇರಿ ಮತ್ತು ಸುತ್ತಲಿನ ಸದ್ಭಕ್ತರು ಈ ಸಭಾ ಭವನವನ್ನು ಮದುವೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಸದ್ಭಳಕೆ ಮಾಡಿಕೊಳ್ಳುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಗುರುವಾರದಂದು ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಮಹಾಂತಲಿಂಗೇಶ್ವರ ಮಠದಲ್ಲಿ ೭೫ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಮಹಾಂತಲಿಂಗೇಶ್ವರ ಸಭಾ ಭವನ, ಪ್ರಸಾದ ನಿಲಯ, ಅತಿಥಿ ಗೃಹಗಳ ಉದ್ಘಾಟನೆ ಹಾಗೂ ಜಾತ್ಯಾತೀತ ಹಿಂದೂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನ್ನಿಕೇರಿ ಮಠ ಈ ಭಾಗದಲ್ಲಿ ಧಾರ್ಮಿಕವಾಗಿ ಬೆಳೆದಿದ್ದು, ಮಠದ ಅಭಿವೃದ್ಧಿಗೆ ಸಾಕಷ್ಟು ಕಾಮಗಾರಿಗಳನ್ನು ನೆರವೇರಿಸಲಾಗಿದೆ ಎಂದು ಹೇಳಿದರು.

ಮನ್ನಿಕೇರಿ ಹಾಗೂ ಸುತ್ತಲಿನ ಗ್ರಾಮಗಳು ಕಳೆದ ೧೫ ವರ್ಷಗಳ ಹಿಂದೆ ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದ್ದವು. ನಾನು ಈ ಭಾಗದ ಶಾಸಕನಾಗಿ ಆಯ್ಕೆಯಾದ ನಂತರ ಈ ಭಾಗಕ್ಕೆ ಸಂಪೂರ್ಣ ನೀರಾವರಿ ಸೌಲಭ್ಯವನ್ನು ದೊರಕಿಸಿಕೊಟ್ಟಿದ್ದೇನೆ. ಹಸಿರುಮಯ ಪ್ರದೇಶವಾಗಿ ರೈತರ ಬಾಳಿಗೆ ಬೆಳಕಾಗಿ ಸುಂದರ ಪ್ರದೇಶವಾಗಿದೆ. ನೀರಾವರಿ ಸೌಲಭ್ಯದಿಂದಾಗಿ ರೈತನ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಿ ಆಯ್ಕೆಯಾದ ನಂತರ ನಮ್ಮ ದೇಶದ ಚಿತ್ರಣವೇ ಬದಲಾಗಿದೆ. ವಿಶ್ವದ ಬಲಾಢ್ಯ ರಾಷ್ಟಗಳ ನಾಯಕರು ನಮ್ಮ ಪ್ರಧಾನಿಗಳತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಭವ್ಯ ಭಾರತದ ಉಜ್ವಲ ಭವಿಷ್ಯಕ್ಕೆ ನೂರಾರು ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಹೇಳಿದ ಅವರು, ಸಮಾಜದ ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಗಣನೀಯವಾಗಿದೆ. ಜ.2 ರಂದು ಅಗಲಿದ ಈ ಶತಮಾನದ ಮಹಾನ್ ಸಂತ ಸಿದ್ಧೇಶ್ವರ ಸ್ವಾಮೀಜಿಗಳ ನಿಧನದಿಂದ ಇಡೀ ಕರುನಾಡೇ ಬಡವಾಗಿದೆ. ದೇವರನ್ನು ನಾವು ಅಂತಹ ಸ್ವಾಮೀಜಿಗಳ ಮೂಲಕ ನೋಡುತ್ತಿದ್ದೇವು. ಅವರ ದಿವ್ಯಾತ್ಮಕ್ಕೆ ಭಗವಂತನು ಶಾಂತಿಯನ್ನು ಪ್ರಾಪ್ತಿ ಮಾಡಲಿ ಎಂದು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಿದ್ಧೇಶ್ವರ ಸ್ವಾಮೀಜಿಗಳನ್ನು ಸ್ಮರಿಸಿಕೊಂಡು ಕಂಬನಿ ಮಿಡಿದರು.

ಸ್ಥಳೀಯ ಮಠಾಧೀಶ ಮತ್ತು ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘದ ಅಧ್ಯಕ್ಷ ವಿಜಯಸಿದ್ಧೇಶ್ವರ ಸ್ವಾಮಿಗಳು ಮಾತನಾಡಿ, ಶ್ರೀಮಠದ ಅಭಿವೃದ್ಧಿಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋಟ್ಯಾಂತರ ರೂಪಾಯಿ ಅನುದಾನ ಕಲ್ಪಿಸಿಕೊಟ್ಟಿದ್ದಾರೆ. ಸಭಾ ಭವನ ನಿರ್ಮಾಣಕ್ಕೆ ೫೦ ಲಕ್ಷ ರೂ.ಗಳ ಜೊತೆಗೆ ಮತ್ತೇ ೨೫ ಲಕ್ಷ ರೂ.ಗಳ ಅನುದಾನವನ್ನು ನೀಡಿದ್ದಾರೆ. ಪ್ರಸಾದ ನಿಲಯದ ಕಟ್ಟಡಕ್ಕೂ ಸಹಾಯ ಮಾಡಿದ್ದಾರೆ. ಜೊತೆಗೆ ಗೋ ಶಾಲೆಗೆ ೫ ಎಕರೆ ಜಮೀನು ದಾನವಾಗಿ ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿರಸಂಗಿ ಲಿಂಗರಾಜರಂತೆ ದಾನಶೂರರಾಗಿ ಈ ಭಾಗದಲ್ಲಿ ಜನಪ್ರಿಯಗೊಂಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಡಾ.ಆರೂಢ ಭಾರತಿ ಸ್ವಾಮಿಗಳು, ಮುಗಳಿಹಾಳದ ಸೋಮಲಿಂಗ ಶಾಸ್ತ್ರಿಗಳು, ಕನಕನಾಳದ ಗಿರೀಶಾನಂದ ಮಹಾರಾಜರು, ಇಂಡಿಯ ಸ್ವರೂಪಾನಂದ ಸ್ವಾಮಿಗಳು, ಹಿಪ್ಪರಗಿಯ ಪ್ರಭುಜೀ ಮಹಾರಾಜರು, ಶಿರೋಳದ ಶಂಕರಾರೂಢ ಮಹಾಸ್ವಾಮಿಗಳು ವಹಿಸಿದ್ದರು.
ಬೆಂಗಳೂರಿನ ವಾಗ್ಮಿ ಹಾರಿಕಾ ಮಂಜುನಾಥ ಅವರು ಹಿಂದೂ ಧರ್ಮದ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಿ ನಿಲ್ಲೋಣ. ಸಮೃದ್ಧ ಭಾರತ ಕಟ್ಟೋಣ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನ್ನಿಕೇರಿ ಗ್ರಾಮದಲ್ಲಿ ೧.೪೦ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಸರ್ಕಾರಿ ಪ್ರೌಢ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದರು.

ಮನ್ನಿಕೇರಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಗೌಡರ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕ ಎಂ.ಆರ್. ಭೋವಿ, ಕಳ್ಳಿಗುದ್ದಿ ಗ್ರಾಪಂ ಮಾಜಿ ಅಧ್ಯಕ್ಷ ಮುದಕಪ್ಪ ಗೋಡಿ, ಸತ್ತೆಪ್ಪ ಗಡಾದ, ಪುಂಡಲೀಕ ದಳವಾಯಿ, ಮಹಾಂತೇಶ ಮೆಟ್ಟಿನ, ಮುತ್ತೆಪ್ಪ ನಾವಿ, ಲಕ್ಷ್ಮಣ ಗಡಾದ, ಮಹಾದೇವ ನಾಡಗೌಡ, ಸದಾಶಿವ ಒಳಗಿನವರ, ಮಾರುತಿ ಮುರಗಜ್ಜಗೋಳ, ಯಲ್ಲಪ್ಪ ಪಾಟೀಲ, ಕೌಜಲಗಿ ಗ್ರಾಪಂ ಮಾಜಿ ಅಧ್ಯಕ್ಷ ರಾಯಪ್ಪ ಬಲೋಲದಾರ, ನೀಲಪ್ಪ ಕೇವಟಿ, ಮೂಡಲಗಿಯ ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ, ರಡ್ಡೇರಹಟ್ಟಿ ಪಿಕೆಪಿಎಸ್ ಅಧ್ಯಕ್ಷ ಕರೆಪ್ಪ ಬಿಸಗುಪ್ಪಿ, ಲಕ್ಷ್ಮಣ ಚನ್ನಾಳ, ಭರಮಪ್ಪ ಪಾಶ್ಚಾಪೂರ, ಮಹಾಂತಯ್ಯಾ ಹಿರೇಮಠ, ರವಿ ಪರುಶೆಟ್ಟಿ, ಸುಭಾಸ ಕೌಜಲಗಿ, ಲಕ್ಷ್ಮಣ ಸಂಕ್ರಿ, ಶ್ರೀಶೈಲ ಗಡಾದ, ಏಕನಾಥ ಬಡಿಗೇರ, ಬಿಸಿಯೂಟದ ಸಹಾಯಕ ನಿರ್ದೇಶಕ ಎ.ಬಿ. ಮಲಬನ್ನವರ, ನೀರಾವರಿ ಇಲಾಖೆಯ ಇಇ ಕೆ.ಕೆ. ಜಾಲಿಬೇರಿ, ಹಾಸೀಮಸಾಬ ನಗಾರ್ಚಿ ಮುಂತಾದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

fifteen + twenty =