Breaking News

ಮೂಡಲಗಿ ತಾಲೂಕಾ ಪತ್ರಕರ್ತರ ಪತ್ರಿಭಟನೆ | ಸರ್ಕಾರದ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಸರ್ಕಾರದಿಂದ ಮಾಧ್ಯಮ ಕ್ಷೇತ್ರದ ಕಗ್ಗೊಲೆ ಖಂಡನೀಯ

Spread the love


ಮೂಡಲಗಿ : ಸಿಎಂ ಪುತ್ರನ ಬಂಡವಾಳ ಬಯಲು ಮಾಡಿದ ಹಿನ್ನಲೆ ಮುಖ್ಯಮಂತ್ರಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಪವರ ಟಿವಿ ಚಾನಲ್ ಬಂದ್ ಮಾಡಿದ ಘಟನೆ ಖಂಡಿಸಿ ಬುಧುವಾರದಂದು ಮೂಡಲಗಿ ತಾಲೂಕಾ ಪತ್ರಕರ್ತರ ಬಳಗದಿಂದ ಪಟ್ಟಣದ ಕಲ್ಮೇಶ್ವರ ಸರ್ಕಲ್‌ನಲ್ಲಿ ಸರ್ಕಾರದ ವಿರುದ್ದ ಪ್ರತಿಭಟಿಸಿ, ಕೆಲ ಸಮಯಗಳ ಕಾಲ ರಸ್ತೆ ಬಂದ್ ಮಾಡಿ ಸ್ಥಳೀಯ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಹಾಗೂ ಸಿಸಿಬಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆಯಲ್ಲಿ ಹಿರಿಯ ಪತ್ರಕರ್ತ ವಾಯ್ ವಾಯ್ ಸುಲ್ತಾನಪೂರ ಮಾತನಾಡಿ, ಸಿಸಿಬಿ ಅಧಿಕಾರಿಗಳು ಪರಿಶೀಲನೆ ನೆಪಹೇಳಿ ಚಾನಲ್ ಕಚೇರಿಗೆ ಹೋಗಿ ಚಾನಲ್ ಬಂದ್ ಮಾಡಿ ಮಾಧ್ಯಮ ಕ್ಷೇತ್ರದ ಕಗ್ಗೊಲೆ ಮಾಡಿರುವುದು ಖಂಡನೀಯ. ಅಕ್ಟೋಬರ 2ರಂದು ಪ್ರಸಾರಕ್ಕೆ ಅನುಮತಿ ನೀಡಿದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪತ್ರಕರ್ತ ಹಾಗೂ ಸಾಹಿತಿ ಉಮೇಶ ಬೆಳಕೂಡ ಮಾತನಾಡಿ, ಪತ್ರಕರ್ತರು ಸಮಾಜದ ಅಂಕುಡೊAಕುಗಳನ್ನು ತಿದ್ದುವ ಕಾರ್ಯ ಮಾಡುತ್ತಿರುವ ಮಾಧ್ಯಮಗಳು ಹಾಗೂ ಪತ್ರಿಕೆಗಳು ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತವೆ, ಇಂತಹ ಸಂಧರ್ಭದಲ್ಲಿ ಒಂದು ಚಾನಲ್ ಬಂದ್ ಮಾಡಿರುವ ಘಟನೆ ಇಂದು ಮಾಧ್ಯಮ ಕ್ಷೇತ್ರವನೇ ಹೊಸಕಿ ಹಾಕುವಂತ ಘಟನೆ ನಡೆದಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಪತ್ರಕರ್ತ ಮಲ್ಲು ಬೋಳನವರ ಮಾತನಾಡಿ, ಯಾವುದೇ ಮಾಧ್ಯಮವಾಗಲಿ ಪತ್ರಿಕೆಯಾಗಲಿ ಸಾರ್ವಜನಿಕರ ತೊಂದರೆಗಳನ್ನು ಸರ್ಕಾರದ ಗಮನ ಸೆಳೆಯುವ ಮೂಲಕ ಪರಿಹಾರಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತವೆ. ಆದರೆ ರಾಜ್ಯದ ಸಿಎಂ ಪರಿವಾರದ ಅಕ್ರಮ ಪ್ರಶ್ನಿಸಿದ್ರೆ ಮಾಧ್ಯಮ ಸಂಸ್ಥೆಯ ಮೇಲೆ ಕೇಸ್, ಕೇಬಲ್ ಕಟ್ ಮಾಡಿರುವುದು ಎಷ್ಟೊಂದು ಸರಿ ? ತಮ್ಮ ಪ್ರಚಾರಕ್ಕೆ ಮಾಧ್ಯಮ ಪತ್ರಿಕೆಗಳು ಬೇಕು ಅದೇ ತಾವು ಮಾಡಿದ ಅಕ್ರಮಗಳ ಬಗ್ಗೆ ವರದಿ ಮಾಡಿದರೇ ಈ ರೀತಿಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಇಡೀ ಮಾಧ್ಯಮ ಕ್ಷೇತ್ರವನ್ನೇ ನಾಶ ಮಾಡಲು ಹೊರಟಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲೇಬೇಕೆಂದರು.

ಇನ್ನೂ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಪತ್ರಕರ್ತರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತ ಕೆಲಸ ಮಾಡಿದರು ಸಹ ಸರ್ಕಾರ ಮಾತ್ರ ಯಾವುದೇ ರೀತಿಯಲ್ಲಿ ಪತ್ರಕರ್ತರಿಗೆ ಸಹಾಯ ಹಸ್ತ ಮಾಡಿಲ್ಲಾ, ಸರ್ಕಾರ ಸಾರ್ವನಿಕರಿಗೆ ಮಾಡಿರುವ ಸಹಾಯ ಹಸ್ತದ ಬಗ್ಗೆ ವರದಿ ಮಾಡಲು ಮಾತ್ರ ಪತ್ರಕರ್ತರು ಬೇಕೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಉಪ ತಹಶೀಲ್ದಾರ ಎಸ್ ಎ ಬಬಲಿ ಮನವಿ ಸ್ವೀಕರಿಸಿ ಮಾತನಾಡಿ, ಪತ್ರಕರ್ತರ ಮನವಿಯನ್ನು ಶೀಘ್ರವಾಗಿ ಮೇಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ತಲುಪಿಸುವುದಾಗಿ ಹೇಳಿದರು. ಸ್ಥಳೀಯ ಪೋಲಿಸ್ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿ ಸಹಕಾರ ನೀಡಿದರು.
ಈ ಸಂzರ್ಭದಲ್ಲಿ ಪತ್ರಕರ್ತರಾದ ಸುಧಾಕರ ಉಂದ್ರಿ, ಎಸ್ ಎಮ್ ಚಂದ್ರಶೇಖರ, ಅಲ್ತಾಫ್ ಹವಾಲ್ದಾರ್, ಕೆ.ಬಿ ಗಿರೆನ್ನವರ, ಭೀಮಶಿ ತಳವಾರ, ಸುಭಾಷ ಗೋಡ್ಯಾಗೊಳ, ಸುಭಾಷ ಕಡಾಡಿ, ಪ್ರವೀಣ ಮಾವರಕರ, ಹಣಮಂತ ಕಂಕಣವಾಡಿ, ಭಗವಂತ ಉಪ್ಪಾರ, ಶಿವಬಸು ಮೋರೆ, ಅಕ್ಬರ್ ಪೀರಜಾದೆ, ಶಿವಾನಂದ ಹಿರೇಮಠ, ಹಣಮಂತ ಸತರಡ್ಡಿ, ಮಲ್ಲಿಕ್ ಬಾಗವಾನ್, ಸಚೀನ್ ಪತ್ತಾರ, ಸಾಗರ ಸಾಲಿಮಠ, ಯಾಕೂಬ್ ಸಣ್ಣಕ್ಕಿ, ಶಂಕರ ಭಜಂತ್ರಿ ಹಾಗೂ ಅನೇಕರು ಉಪಸ್ಥಿತರಿದರು.

 


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

4 × 4 =