Breaking News

ಬಿಜೆಪಿ ಶಕ್ತಿ ಕೇಂದ್ರ ಗೋಕಾಕ ಕೇಸರಿಮಯ.! ಇಂದು ಕರದಂಟು ನಗರಿಯಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ.!

Spread the love

ಬಿಜೆಪಿ ಶಕ್ತಿ ಕೇಂದ್ರ ಗೋಕಾಕ ಕೇಸರಿಮಯ.!

ಇಂದು ಕರದಂಟು ನಗರಿಯಲ್ಲಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ.!

ಗೋಕಾಕ: ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದಿಡುವ ಜನಸ್ಪಂದನ ಕಾರ್ಯಕ್ರಮಕ್ಕೆ ಬಿಜೆಪಿ ಶಕ್ತಿ ಕೇಂದ್ರ ಕರದಂಟು ನಗರಿ ಗೋಕಾಕ ಮಧುವಣಗಿತ್ತಿಯಂತೆ ಸಿಂಗಾರಗೊAಡಿದ್ದು, ಇಡೀ ನಗರ ಜನಸ್ಪಂದನಕ್ಕೆ ಬಿಜೆಪಿಮಯವಾಗಿ ಸಜ್ಜುಗೊಂಡಿದೆ.
ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ಸೆ. ೨೮ರಂದು ಮಧ್ಯಾಹ್ನ ೩ ಗಂಟೆಗೆ ನಡೆಯಲಿರುವ ಬಿಜೆಪಿ ಜನಸ್ಪಂದನೆ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಿದ್ಧಗೊಂಡಿದೆ. ೨೦೨೩ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಹಾಗೂ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ನೆತೃತ್ವದಲ್ಲಿ ಸ್ಥಳೀಯ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮುಂದಾಳತ್ವದಲ್ಲಿ ರಾಜ್ಯದ ಘಟನಾನುಘಟಿ ನಾಯಕರು ಕರದಂಟು ನಗರಿಗೆ ಆಗಮಿಸುತ್ತಿದ್ದಾರೆ.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಯಾವುದೇ ಅಡಚಣೆ ಆಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮದೇ ಆದ ಬೆಂಬಲಿಗರ ತಂಡ ಕಟ್ಟಿಕೊಂಡು ಬಿಜೆಪಿ ಕಾರ್ಯಕ್ರಮಕ್ಕೆ ಅಗತ್ಯ ಇರುವ ಎಲ್ಲ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ.
ನಗರದಲ್ಲಿ ಈಗಾಗಲೇ ಬಿಜೆಪಿ ಹವಾ ಶುರುವಗಿದ್ದು, ನಗರದ ಎಲ್ಲ ಬೀದಿಗಳಲ್ಲಿಯೂ ಬಿಜೆಪಿ ಬ್ಯಾನರ್, ಫ್ಲೆಕ್ಸ್, ಧ್ವಜಗಳು ರಾರಾಜಿಸುತ್ತಿವೆ. ರಾಜ್ಯದ ನಾಯಕರನ್ನು ಸ್ವಾಗತಿಸಲು ಕಟೌಟ್‌ಗಳನ್ನು ರಾರಾಜಿಸುತ್ತಿವೆ. ರಾಜ್ಯದ ನಾಯಕರು ಗೋಕಾಕಕ್ಕೆ ಆಗಮಿಸುತ್ತಿರುವುದರಿಂದ ಗೋಕಾಕದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಡೀ ನಗರ ಕೇಸರಿಮಯವಾಗಿದ್ದು, ರಾಜ್ಯ ಅಧ್ಯಕ್ಷ ನಳಿನಕುಮಾರ ಕಟೀಲ ಸೇರಿದಂತೆ ಅನೇಕ ನಾಯಕರನ್ನು ಕೈಬೀಸಿ ಕರೆಯುತ್ತಿದೆ.


ನ್ಯೂ ಇಂಗ್ಲಿಷ್ ಮೈದಾನದಲ್ಲಿ ನಡೆಯಲಿರುವ ಭವ್ಯ ವೇದಿಕೆ ಹಾಕಲಾಗಿದ್ದು, ೧೦ ಸಾವಿರ ಆಸನಗಳನ್ನು ಅಳವಡಿಸಲಾಗಿದೆ. ಯಾವುದೇ ಅಡಚಣ ಆಗದಂತೆ ಸುತ್ತಮುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇಡೀ ಮೈದಾನದ ತುಂಬೆಲ್ಲ ಕಮಲ ಧ್ವಜಗಳು ಹಾರಾಡುತ್ತಿವೆ. ಗೋಕಾಕ ನಗರ ಸಂಪೂರ್ಣ ಕೇಸರಿಮಯವಾಗಿದ್ದು, ಗೋಕಾಕ ಸೇರಿದಂತೆ ಜಿಲ್ಲೆಯ ಎಲ್ಲ ೧೮ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಗಳಿಸಲು ಗೋಕಾಕನ ಈ ಜನಸ್ಪಂದನ ಕಾರ್ಯಕ್ರಮ ದಿಕ್ಸೂಚಿಯಾಗಲಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ರಾಜ್ಯದ ನಾಯಕರು, ಬಿಜೆಪಿ ಜಿಲ್ಲಾ, ತಾಲೂಕು ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವಧಿಯ ಎರಡು ವರ್ಷಗಳ ಹಾಗೂ ಬಸವರಾಜ ಬೊಮ್ಮಾಯಿ ಅವರ ಒಂದು ವರ್ಷಗಳ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳು ಹಾಗೂ ಪ್ರಮುಖ ನಿರ್ಧಾರಗಳನ್ನು ಜನರ ಮುಂದಿಡುವ ಉದ್ದೇಶ ಹೊಂದಿದೆ. ಜತೆಗೆ ಗೋಕಾಕ ಕ್ಷೇತ್ರದಲ್ಲಿ ಶಾಸಕ ರಮೇಶ ಜಾರಕಿಹೊಳಿ ಕೈಗೊಂಡ ಅಭಿವರದ್ಧಿ ಕಾರ್ಯಕ್ರಮಗಳೂ ಜನರಿಗೆ ತಿಳಿಸುವ ಉದ್ದೇಶ ಹೊಂದಲಾಗಿದೆ.
——–ಬಾಕ್ಸ್——


ರಮೇಶ ಜಾರಕಿಹೊಳಿಗೆ ಸಿಗಲಿ ಶುಭ ಸುದ್ದಿ: ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯಾಗಿರುವ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿ ಜನಸ್ಪಂದನ ಕಾರ್ಯಕ್ರಮ ವಿಶೇಷ ಮತ್ತು ಪ್ರಮುಖವಾಗಿದೆ. ಬಿಜೆಪಿ ಸಕಾರವನ್ನು ಅಧಿಕಾರಕ್ಕೆ ತಂದಿರುವ ರಮೇಶ ಜಾರಕಿಹೊಳಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಪಕ್ಕಾ ಆಗಿದೆ. ದಿ.ಉಮೇಶ ಕತ್ತಿ ನಿಧನಾನಂತರ ಜಿಲ್ಲೆಯಲ್ಲಿ ಸದ್ಯ ಒಬ್ಬರೇ ಸಚಿವರಾಗಿದ್ದಾರೆ. ಹೀಗಾಗಿ ಪ್ರಭಾವಿ ಮತ್ತು ಬಲಿಷ್ಠ ರಾಜಕಾರಣಿ ರಮೇಶ ಜಾರಕಿಹೊಳಿ ಈ ಜನಸ್ಪಂದನ ಮೂಲಕ ಹೊಸ ಸುದ್ದಿ ಸಿಗುವ ಸಾಧ್ಯತೆಯೂ ಇದೆ. ಈ ಕಾರ್ಯಕ್ರಮದ ಮೂಲಕ ನಳಿನಕುಮಾರ ಕಟೀಲ್ ಕ್ಷೇತ್ರದ ಜನರಿಗೆ ನವರಾತ್ರಿಯ ಶುಭಸಂದರ್ಭದಲ್ಲಿ ಶುಭ ಸುದ್ದಿ ನೀಡಬೇಕು ಎಂದು ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

fifteen + 20 =