Breaking News

ಉಪ್ಪಾರ ಸಮಾಜದ 5೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.!

Spread the love

ಉಪ್ಪಾರ ಸಮಾಜದ 5೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.!

ಗೋಕಾಕ: ಮಕ್ಕಳೆ ಸಮಾಜದ ಆಸ್ತಿಯಾಗಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ಶ್ರೀ ಭಗೀರಥ ಉಪ್ಪಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ ಮಟ್ಟದ ಉಪ್ಪಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲಾ ಸಮುದಾಯದ ಮಕ್ಕಳು ಉತ್ತಮ ಸಾಧಕರಾಗುತ್ತಿದ್ದು, ಅವರ ಮುಂದಿನ ಭವಿಷ್ಯದ ಚಿಂತನೆ ಆಗಬೇಕು ಸಮಾಜದ ಮುಖಂಡರು ಉನ್ನತ ಹುದ್ದೆಯಲ್ಲಿರುವವರು ಅವರ ಭವಿಷ್ಯಕ್ಕೆ ಸಹಕಾರ ನೀಡಬೇಕು. ಸ್ವಾಮೀಜಿ ಅವರ ಹೋರಾಟದಿಂದ ಇಂದು ಸಮಾಜ ಜಾಗೃತವಾಗಿ ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತಿದೆ ಸಮಾಜ ಭಾಂಧವರು ಸಂಘಟಿತರಾಗಿ ಅವರನ್ನು ಬೆಂಬಲಿಸಬೇಕು ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಪ್ರಯತ್ನಶೀಲರಾಗಿ ಅದರೊಂದಿಗೆ ಕೃಷಿ ಹಾಗೂ ಉದ್ಯೋಗಗಳಿಗೂ ಹೆಚ್ಚಿನ ಮಹತ್ವ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದರು.
ಇತಿಹಾಸ ಬಲ್ಲವರು ಇತಿಹಾಸ ನಿರ್ಮಿಸುತ್ತಾರೆ. ಆ ನಿಟ್ಟಿನಲ್ಲಿ ಎಲ್ಲರೂ ಇತಿಹಾಸವನ್ನು ತಿಳಿದುಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಎಲ್ಲಾ ಸಮಾಜದವರಿಗೆ ಮೀಸಲಾತಿ ಒಂದು ದೊಡ್ಡ ಗೊಂದಲ ಆಗಿ ಬಿಟ್ಟಿದೆ. ಬಾಬಾಸಾಹೇಬ ಅಂಬೇಡ್ಕರ್ ಅವರು ಮೀಸಲಾತಿಯನ್ನು ಕೆವಲ ಹತ್ತು ವರ್ಷಕ್ಕೆ ಅಷ್ಟೇ ಮಾಡಿದ್ದರು ಆದರೆ ಇದು ಇನ್ನುವರೆಗೆ ಪೂರೈಸಿಲ್ಲಾ. ಅಂಬೇಡ್ಕರ್ ಅವರನ್ನು ದೂರ ವಿಟ್ಟುವರೇ ಇಂದು ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಹೋರಾಟ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ತತ್ವಗಳನ್ನು ಬಿಟ್ಟರೆ ಏನು ಸಾಧಿಸಲು ಸಾಧ್ಯವಿಲ್ಲ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ ಉಪ್ಪಾರ ರಾಜ್ಯದಲ್ಲಿ ಒಟ್ಟು ೩೬ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜದ ಪ್ರಾಬಲ್ಯವಿದೆ. ಬೆಳಗಾವಿ ಜಿಲ್ಲೆಯ ೯ ಕ್ಷೇತ್ರಗಳಲ್ಲಿ ಸಮಾಜದ ಮತಗಳು ನಿರ್ಣಾಯಕವಾಗಿವೆ. ಬರುವ ಚುನಾವಣೆಯಲ್ಲಿ ಕನಿಷ್ಟ ೪ ರಿಂದ ೫ ಕ್ಷೇತ್ರಗಳಲ್ಲಿಯಾದರೂ ಗೆಲ್ಲಲೇಬೇಕು ಎನ್ನುವ ಹಠದಿಂದ ಎಲ್ಲ ಕಡೆ ಸಂಘಟನೆಯನ್ನು ಮಾಡುತ್ತಿದ್ದೇವೆ. ಉಳಿದ ಕ್ಷೇತ್ರಗಳಲ್ಲಿ ನಾವು ಗೆಲ್ಲದಿದ್ದರೂ ಅಲ್ಲಿಯ ಅಭ್ಯರ್ಥಿಯನ್ನು ಸೋಲಿಸುವಷ್ಟು ಶಕ್ತಿ ಹೊಂದಿದ್ದೇವೆ ಪೂಜ್ಯರ ನೇತೃತ್ವದಲ್ಲಿ ನಾವೆಲ್ಲ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಸಾಧನೆ ಸಾಧಕರ ಸ್ವತ್ತು, ಸಾಧನೆಗೆ ಬಡತನ ಅಡ್ಡಿಯಾಗುವದಿಲ್ಲ ವಿದ್ಯಾರ್ಥಿಗಳು ಭಗೀರಥ ಮಹರ್ಷಿಗಳ ಪ್ರಯತ್ನದಂತೆ ತಾವು ಪ್ರಯತ್ನಶೀಲರಾಗಿ ಸಾಧನೆ ಮಾಡಿ ಸಾಧಕರಾಗಿ ತಮ್ಮ ಭವಿಷ್ಯದೊಂದಿಗೆ ಸಮಾಜವನ್ನು ಅಭಿವೃದ್ಧಿ ಪಡಿಸಿ. ಸಮಾಜದ ಜಾಗೃತಿಗಾಗಿ ಬಿದರ ನಿಂದ ಚಾಮರಾಜನಗರ ವರೆಗೂ ಭಗೀರಥ ಜ್ಯೋತಿ ಯಾತ್ರೆಯನ್ನು ನಡೆಸಲಾಗುವುದು ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದ ಸಮಾವೇಶ ನಡೆಸಿ ರಾಷ್ಟ್ರದ್ಯಂತ ಇರುವ ಉಪ್ಪಾರ ಸಮಾಜ ಭಾಂಧವರನ್ನು ಸಂಘಟಿಸಲಾಗುವದು ಈ ಕಾರ್ಯಕ್ಕೆ ಸಮಾಜ ಭಾಂಧವರು ಸಹಕಾರ ನೀಡುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಉಪ್ಪಾರ ಸಮಾಜದ ೫೦೦ ವಿದ್ಯಾರ್ಥಿ, ವಿದ್ಯಾರ್ಥಿನೀಯರನ್ನು, ಉನ್ನತ ಹುದ್ದೆಯಲ್ಲಿರುವ ಸಮಾಜದ ಅಧಿಕಾರಿಗಳನ್ನು ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಕಟಕಭಾಂವಿಯ ಶ್ರೀ ಅಭಿನವ ಧರೇಶ್ವರ ಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಕರ್ನಾಟಕ ಲೋಕಸೆವಾ ಆಯೋಗದ ಮಾಜಿ ಸದಸ್ಯ ಶ್ರೀಕಾಂತರಾವ, ಹಿಂದುಳಿದ ಆಯೋಗದ ಮಾಜಿ ಸದಸ್ಯ ಎಸ್.ಎಂ ಹತ್ತಿಕಟಗಿ, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು. ವೆಂಕೋಬಾ ಕಾರ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ಮಾಜಿ ಅಧ್ಯಕ್ಷ ಬಿ.ಆರ್.ಕೋಪ್ಪ, ಜಿಲ್ಲಾಧ್ಯಕ್ಷ ಜಿ.ಎಸ್. ಉಪ್ಪಾರ, ಯುವಕ ಸಂಘಧ ಗೌರವಾಧ್ಯಕ್ಷ ಭರಮಣ್ಣ ಉಪ್ಪಾರ, ಮಹಿಳಾ ಸಂಘದ ಅಧ್ಯಕ್ಷ ಕಮಲಾ ಜೇಡರ, ಯುವಕ ಸಂಘ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಾಶಿ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷರುಗಳಾದ ಶಿವಪುತ್ರ ಜಕಬಾಳ, ರಾಮಣ್ಣ ಹಂದಿಗುAದ, ಪದಾಧಿಕಾರಿಗಳಾದ ಕುಶಾಲ ಗುಡ್ಡೇನವರ, ಅಡಿವೆಪ್ಪಾ ಕಿತ್ತೂರ, ವಿಠಲ ಮೆಳವಂಕಿ, ಯಲ್ಲಪ್ಪ ದುರದುಂಡಿ, ವಿಠಲ ಸವದತ್ತಿ, ಪರಸಪ್ಪ ಚೂನನ್ನವರ, ಯಮನಪ್ಪ ಕೌಜಲಗಿ, ನಗರಸಭೆ ಸದಸ್ಯ ಭಗವಂತ ಹುಳಿ, ಗಣ್ಯರಾದ ಸತೀಶ ಕಡಾಡಿ, ಶಾಮಾನಂದ ಪೂಜೆರಿ, ಸದಾಶಿವ ಗುದಗಗೋಳ, ಭೀಮಶಿ ಭರಮನ್ನವರ, ಹನಮಂತ ದುರ್ಗನ್ನವರ, ಬಿಇಒಗಳಾದ ಅಜೀತ ಮನ್ನಿಕೇರಿ, ಜಿ.ಬಿ.ಬಳಗಾರ, ಅಧಿಕಾರಿಗಳಾದ ಡಾ.ವಿಜಯಕುಮಾರ್ ತೋರಗಲ್, ಲಕ್ಕಪ್ಪ ಹಣುಮನ್ನವರ, ಜಗದೀಶ್ ಗಂಗಣ್ಣವರ, ಲಕ್ಷ್ಮಣ ಬಬಲಿ, ಡಾ.ಸಂದೀಪ್ ದಂಡಿನ, ಲಕ್ಷ್ಮಣ ಉಪ್ಪಾರ, ಬಸವರಾಜ ಮೆಳವಂಕಿ, ಆರ್.ಕೆ ಬಿಸಿರೊಟ್ಟಿ, ಎಂ.ಆರ್.ಮುAಜಿ, ಯಲ್ಲಪ್ಪ ಗದಾಡಿ, ಅಡಿವೇಶ ಗುದಿಗೋಪ್ಪ, ಶಂಕರ ಅಂತಗಟ್ಟಿ, ನಾಗರಾಜ್ ಕಿಲಾರಿ, ಶಿವಾನಂದ ಬಬಲಿ, ಕೃಷ್ಣಾ ಕುಳ್ಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

2 × two =