Breaking News

51 ಟನ್ ಕಟಾವು ಮಾಡಿದ ಕಬ್ಬು ಹೇರುವ ಮೂಲಕ ಸಾಹಸ ಪ್ರದರ್ಶನ ತೋರಿದ ಯುವಕ

Spread the love

51 ಟನ್ ಕಟಾವು ಮಾಡಿದ ಕಬ್ಬು ಹೇರುವ ಮೂಲಕ ಸಾಹಸ ಪ್ರದರ್ಶನ ತೋರಿದ ಯುವಕ.!

ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನ ಕೆಮ್ಮನಕೂಲ ಗ್ರಾಮದ ಯುವಕ ಸತತ 9 ಗಂಟೆ ವರೆಗೆ ಸುಮಾರು 51 ಟನ್ ಕಟಾವು ಮಾಡಿದ ಕಬ್ಬು ಹೇರುವ ಮೂಲಕ ಸಾಹಸ ಪ್ರದರ್ಶನ ತೋರಿದ್ದಾನೆ.
ಕೆಮ್ಮನಕೂಲ ಗ್ರಾಮದ ಯುವಕ ದುಂಡಪ್ಪಾ ತಿಪ್ಪಣ್ಣ ಭರಮನ್ನವರ ಅದೇ ಗ್ರಾಮದ ಜಮೀನಿನಲ್ಲಿ ಬೆಳೆದ ಕಬ್ಬನ್ನು ಸತತ ೯ಗಂಟೆಯ ವರೆಗೆ ಸುಮಾರು 51ಟನ್ ಕಟಾವು ಮಾಡಿದ ಕಬ್ಬನ್ನು ಟ್ರಾಕ್ಟರ್‌ನ 5 ಟ್ರಾö್ಯಲಿಗೆ ಹೇರಿದ್ದು, ಸತೀಶ ಶುರ‍್ಸ್ ಕಾರ್ಖಾನೆ ಅಧಿಕಾರಿ ಪ್ರಕಾಶ ಪಾಟೀಲ ಸೇರಿದಂತೆ ಅನೇಕರು ಯುವಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಯುವಕ ದುಂಡಪ್ಪನನ್ನು ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹನಮಂತ ಮಲ್ದೂರ, ಶಂಕರ ಭರಮನ್ನವರ, ಕಬ್ಬು ಕಟಾವ್ ಗ್ಯಾಂಗನ ಸದಸ್ಯರಾದ ಹನಮಂತ ಭರಮನ್ನವರ, ಯಲ್ಲಪ್ಪ ಭರಮನ್ನವರ, ಬಸವರಾಜ, ಸಿದ್ಧಾರೂಡ ನಾಗನೂರ, ಸಿದ್ದಪ್ಪ ಒಡೆಯರ, ರಮೇಶ ಕೊಪ್ಪದ, ಮಲ್ಲಿಕಾರ್ಜುನ ಕೊಪ್ಪದ, ಮಂಜು ಕೊಪ್ಪದ, ಸಿದ್ದಪ್ಪ ಮಾಯಗೌಡ್ರ, ಪರಸಪ್ಪ ಕುರೇರ, ಗೋಪಾಲ ಪರಸನ್ನವರ, ಕೆಂಪಣ್ಣ ನಾಯ್ಕ, ಬಸು ನಾಯ್ಕ, ವಿಠ್ಠಲ ಭರಮನ್ನವರ, ಗೋಪಾಲ ಭರಮನ್ನವರ ಸೇರಿದಂತೆ ಗ್ರಾಪಂ ಸದಸ್ಯರು ಗ್ರಾಮಸ್ಥರು ಇತರರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

4 × 2 =