Breaking News

ವಿವಿಧ ಸಮುದಾಯಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷ ಸನ್ಮಾನ

Spread the love

ವಿವಿಧ ಸಮುದಾಯಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷ ಸನ್ಮಾನ

ಯುವ ಭಾರತ ಸುದ್ದಿ ಬೆಳಗಾವಿ ಸುವರ್ಣಸೌಧ : ನೇಕಾರರ ಬಹುದಿನಗಳ ಬೇಡಿಕೆ ಈಡೇರಿಸಿ ಐತಿಹಾಸಿಕ ನಿರ್ಣಯ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಳಗಾವಿಯ ಸುವರ್ಣಸೌಧದ ಸಭಾಂಗಣದಲ್ಲಿ ಡಿ.19ರಂದು ವಿಶೇಷ ಅಭಿನಂದನಾ ಸಮಾರಂಭ ನಡೆಯಿತು.
ಬೆಳಗಾವಿ ನಗರ ಸೇರಿದಂತೆ ಸುತ್ತಲಿನ ತಾಲೂಕುಗಳ
ನೇಕಾರ, ಕುರುವಿನಶೆಟ್ಟಿ, ದೇವಾಂಗ, ಹಟಗರ ದೇವಾಂಗ ಸಮಾಜ, ಸಕ್ಕುಸಾಯಿ ಸಮಾಜ, ನಾಮದೇವ ಸಿಂಪಿ, ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಮುಖ್ಯಮಂತ್ರಿಗಳಿಗೆ ಶಾಲುಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು.

ಮುಜರಾಯಿ ಹಜ್ ಮತ್ತು ವಕ್ಪ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಬಿ.ಎಸ್.ಯಡಿಯೂರಪ್ಪ ಅವರ ನಂತರ ಬಸವರಾಜ ಬೊಮ್ಮಾಯಿ ಅವರು ನಾಡಿನ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಮಾತನಾಡಿ, ನೇಕಾರರು ಜನರ ಮಾನ ಕಾಪಾಡುವ ಮಹತ್ವದ ಕಾರ್ಯ ಮಾಡುತ್ತಾರೆ. ರೈತ ಮತ್ತು ನೇಕಾರ ಇಬ್ಬರು ರಾಜ್ಯದ ಎರಡು ಕಣ್ಣುಗಳಿದ್ದಂತೆ. ಇದನ್ನರಿತು ರಾಜ್ಯ ಸರ್ಕಾರವು
ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ, ವಿದ್ಯುತ್ ಸೌಕರ್ಯ, ನೇಕಾರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ, ನೇಕಾರರು ಸೇರಿದಂತೆ 60 ವರ್ಷ ಮೇಲ್ಪಟ್ಟವರಿಗೆ
ಸಂಧ್ಯಾಸುರಕ್ಷಾ ಸೇರಿದಂತೆ ಇನ್ನೂ ನಾನಾ ಯೋಜನೆಗಳನ್ನು ಜಾರಿ ಮಾಡಿದೆ. ನೇಕಾರ ಸಮುದಾಯದವರು ಮುಂದಿಟ್ಟಂತೆ
ಶೇ.95.09ರಷ್ಟು ಬೇಡಿಕೆಗಳನ್ನು ರಾಜ್ಯ ಸರ್ಕಾರ
ಈಡೇರಿಸಿದೆ ಎಂದು ತಿಳಿಸಿದರು.
ರಾಮದುರ್ಗ ಮತಕ್ಷೇತ್ರದ ಶಾಸಕ ಮಹಾದೇವಪ್ಪ ಅವರು ಮಾತನಾಡಿ, ಕೋರೊನಾ ಬಂದ ಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಕಾರರ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದಾರೆ ಎಂದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ,ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡ, ಶಾಸಕ ದೊಡ್ಡನಗೌಡ ಪಾಟೀಲ ಅವರು ಮಾತನಾಡಿದರು.

ಜಲ ಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಅರಗ ಜ್ಞಾನೇಂದ್ರ, ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟೀಲ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ಜವಳಿ ನಿಗಮದ ಉಪಾಧ್ಯಕ್ಷ ಸುರೇಶ ಕಿತ್ತೂರ, ನೇಕಾರ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರಾದ
ದುಂಡಪ್ಪ ಮಾಚಕನೂರ ಬನಹಟ್ಟಿ, ಶಂಕರ ಟೀರಕಿ, ಪ್ರಭು ಕರಲಟ್ಟಿ, ಗಂಗಪ್ಪ ಮಲಜಗಿ, ಆನಂದ ಕಂಪು, ಮಲ್ಲಪ್ಪ ಸಂಗಾನಟ್ಟಿ, ಜಿ.ಎಸ್.ಗೊಂಬಿ, ಎಂ.ಪಿ.ಬಂಗೋಳಿ, ಚಂದ್ರಕಾಂತ ಹಾಸಿಲಕರ, ಮೋಹನ ಹಾಗೂ ಇತರರು ಇದ್ದರು.

ಬೆಳಗಾವಿ, ನಿಪ್ಪಾಣಿ, ತೇರದಾಳ, ಇಲಕಲ್, ಕಿತ್ತೂರ ಕ್ಷೇತ್ರಗಳ ನೇಕಾರ ಸಮದಾಯದ ಹಿರಿಯರು, ಮಹಿಳೆಯರು, ಯುವಕರು ಮತ್ತು ಇನ್ನಿತರರು ಇದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

eighteen − three =