Breaking News

ಇತಿಹಾಸ ತಿರುಚಿದ ಪಠ್ಯ ಪುಸ್ತಕವನ್ನು ಹಿಂಪಡೆಯಲು ಆಗ್ರಹ.!

Spread the love

ಇತಿಹಾಸ ತಿರುಚಿದ ಪಠ್ಯ ಪುಸ್ತಕವನ್ನು ಹಿಂಪಡೆಯಲು ಆಗ್ರಹ.!


ಗೋಕಾಕ: ಬಸವಣ್ಣನವರ ಇತಿಹಾಸ ತಿರುಚಿದ ೯ನೇ ತರಗತಿಯ ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದಲ್ಲಿ ಶನಿವಾರದಂದು ಸಮಾಜದ ವಿವಿಧ ಸಂಘಟನೆಗಳಿAದ ಪ್ರತಿಭಟನೆ ನಡೆಸಲಾಯಿತು.
ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಅಲ್ಲಿಂದ ತಹಶೀಲ್ದಾರ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ ಸಲ್ಲಿಸಿದರು.
ಸಮಾಜ ವಿಜ್ಞಾನದ ಪಾಠದಲ್ಲಿ ಬಸವಣ್ಣನವರ ಇತಿಹಾಸವನ್ನು ತಪ್ಪು-ತಪ್ಪಾಗಿ ಬಿಂಬಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮುರುಘರಾಜೇಂದ್ರ ಶ್ರೀಗಳು ಬಸವಣ್ಣನವರ ಅನೇಕ ಮಹತ್ವದ ವಿಷಯಗಳನ್ನು ಕೈಬಿಟ್ಟು, ಮನಬಂದAತೆ ಪಠ್ಯ ಸಿದ್ದಪಡಿಸಲಾಗಿದೆ. ಲೇಖಕ ಬಸವಣ್ಣನವರ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ. ಮಕ್ಕಳಿಗೆ ಬಸವಣ್ಣನವರ ತಪ್ಪು ಇತಿಹಾಸ ಪ್ರಕಟಿಸುವುದು ಅಕ್ಷಮ್ಯ ಅಪರಾಧ ಮಾಡಿದಂತೆ ಎಂದು ಕಿಡಿಕಾರಿದರು. ೯ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರ ಬಗ್ಗೆ ಉಲ್ಲೇಖಿಸಲಾಗಿದೆ. ಬಸವಣ್ಣನವರಿಗೆ ಉಪನಯನವಾದ ಬಳಿಕ ಕೂಡಲಸಂಗಮಕ್ಕೆ ನಡೆದರು ಎಂದು ತಪ್ಪಾಗಿ ಬರೆಯಲಾಗಿದೆ. ಶೈವ ಗುರು ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಬಸವಣ್ಣ ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ನಮೂದು ಮಾಡಲಾಗಿದೆ. ಆಗಿರುವ ತಪ್ಪನ್ನು ಕೂಡಲೇ ಸರಿಪಡಿಸಿ ಹೊಸ ಪಠ್ಯ ಮುದ್ರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರಲ್ಲದೆ
ಕೂಡಲೇ ಪರಿಷ್ಕೃತ ಪಠ್ಯವನ್ನು ತಡೆ ಹಿಡಿಯಬೇಕು. ಬಸವಣ್ಣನವರ ಕುರಿತು ಅಧ್ಯಯನ ನಡೆಸಿ, ಹೊಸ ಪಠ್ಯ ಸೇರಿಸಬೇಕು ಎಂದು ಶ್ರೀಗಳು ಸರಕಾರವನ್ನು ಆಗ್ರಹಿಸಿದರು.
ಮುಖಂಡರಾದ ಅಶೋಕ ಪೂಜಾರಿ, ಡಾ.ಸಿ.ಕೆ ನಾವಲಗಿ ಹಾಗೂ ಸೋಮಶೇಖರ್ ಮಗದುಮ್ಮ ಮಾತನಾಡಿದ ಸರಕಾರದ ಕ್ರಮವನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಬಟಕುರ್ಕಿ ಚೌಕಿ ಮಠದ ಬಸವಲಿಂಗ ಮಹಾಸ್ವಾಮಿಗಳು, ಲೋಕಾಪುರದ ಮಹಾಂತ ದೇವರು, ವಡೆಯರಹಟ್ಟಿಯ ನಾರಾಯಣ ಶರಣರು, ಕಪರಟ್ಟಿಯ ಬಸವರಾಜ ಸ್ವಾಮೀಜಿಗಳು, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಮುಖಂಡರುಗಳಾದ ವಿವೇಕ ಜತ್ತಿ, ಮಲ್ಲಿಕಾರ್ಜುನ ಈಟಿ, ಬಸನಗೌಡ ಪಾಟೀಲ, ಶಶಿಧರ ದೇಮಶೆಟ್ಟಿ, ಮಹಾತೇಶ ತಾವಂಶಿ,ಶAಕರ ಗೋರೋಶಿ, ಬಸವರಾಜ ಖಾನಪ್ಪನವರ, ಭೀಮಶಿ ಭರಮನ್ನವರ, ಬಸವರಾಜ ಕಡಾಡಿ, ಬಸವರಾಜ ಹೂಳೇದ, ಶ್ರೀಮತಿ ಸುಮೀತ್ರಾ ಗುರಾಣಿ, ಶ್ರೀಮತಿ ಅನುಸುಯಾ ಪಾಟೀಲ, ಶ್ರೀಮತಿ ವೀಣಾ ಹಿರೇಮಠ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

4 × 5 =