Breaking News

ಪಂಚಮಸಾಲಿ ೨ಎ ಮೀಸಲಾತಿಯ ಸೇಮಿಪೈನಲ್ ಸಮಾವೇಶ ದಿ.೧೩ರಂದು ಗೋಕಾಕ ನಗರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮಿಜಿ.!

Spread the love

ಪಂಚಮಸಾಲಿ ೨ಎ ಮೀಸಲಾತಿಯ ಸೇಮಿಪೈನಲ್ ಸಮಾವೇಶ ದಿ.೧೩ರಂದು ಗೋಕಾಕ ನಗರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮಿಜಿ.!


ಗೋಕಾಕ: ಗೋಕಾಕ ಚಳುವಳಿ, ಕರದಂಟು ಹಾಗೂ ರಾಜಕೀಯಕ್ಕೆ ಹೆಸರುವಾಸಿಯಾದ ನಗರದ. ಈ ನಗರದಲ್ಲಿ ಪಂಚಮಸಾಲಿ ೨ಎ ಮೀಸಲಾತಿಯ ಸೇಮಿಪೈನಲ್ ಸಮಾವೇಶ ದಿ.೧೩ರಂದು ನಡೆಯಲಿದ್ದು ಪೈನಲ್ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಅವರು, ನಗರದ ಕೆಎಲ್‌ಇ ಶಾಲೆಯ ಆವರಣದಲ್ಲಿ ಶುಕ್ರವಾರದಂದು ಸುದ್ದಿಗೊಷ್ಠಿ ನಡೆಸಿ ಮಾತನಾಡಿ, ಗೋಕಾಕನಗರದಲ್ಲಿ ಸೇಮಿಪೈನಲ್ ನಂತರ ಡಿ.೧೨ರಂದು ೨೫ಲಕ್ಷ ಪಂಚಮಸಾಲಿ ಸಮಾಜ ಭಾಂದವರೊAದಿಗೆ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಫೈನಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಶ್ರೀಗಳು ಎಲ್ಲ ಜಿಲ್ಲೆಗಳ ಹಾಗೂ ತಾಲೂಕುಗಳಲ್ಲಿಯ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಪಂಚಮಸಾಲಿ ಸಮಾಜವನ್ನು ೨ಎ ಮೀಸಲಾತಿ ನೀಡುವಂತೆ ಕಳೆದ ೨ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದೆವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಸಮಾಜಕ್ಕೆ ೨ಎ ಮೀಸಲಾತಿ ನೀಡಲು ಶಕ್ತರಿದ್ದು, ಕೂಡಲೇ ಮೀಸಲಾತಿಯನ್ನು ಘೋಷಿಸಬೇಕು ಎಂದು ಸಿಎಮ್‌ಗೆ ಶ್ರೀಗಳು ಮನವಿ ಮಾಡಿದರು.
ಗೋಕಾಕ ನಗರದಲ್ಲಿ ರವಿವಾರಂದು ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ಮಧ್ಯಾಹ್ನ ೩ಗಂಟೆಗೆ ನಡೆಯಲಿದ್ದು, ಇದಕ್ಕೂ ಮುಂಚೆ ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಬಸವರಾಜ ಯತ್ನಾಳ ಅವರು ಸತೀಶ ಜಾರಕಿಹೊಳಿ ಹೇಳಿಕೆಗೆ ಗೋಕಾಕಕ್ಕೆ ಬಂದು ಉತ್ತರ ನೀಡುತ್ತೇನೆ ಎಂದಿದ್ದಾರೆ, ಯತ್ನಾಳ ಅವರು ಸಮುದಾಯದ ಹೋರಾಟಕ್ಕೆ ಬರುತ್ತಿದ್ದಾರೋ ಅಥವಾ ಸತೀಶ ಜಾರಕಿಹೊಳಿ ಅವರಿಗೆ ಉತ್ತರ ನೀಡಲು ಬರುವರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಸವಜಯ ಮೃತ್ಯುಂಜಯ ಶ್ರೀಗಳು ಯತ್ನಾಳ ಮಾತನಾಡಿದ್ದು ನನ್ನ ಗಮನಕ್ಕೆ ಬಂದಿಲ್ಲಾ ಈಗಾಗಲೇ ಸತೀಶ ಅವರು ತಮ್ಮ ಹೇಳಿಕೆ ವಿಷಾದ ವ್ಯಕ್ತಪಡಿಸಿ ಹೇಳಿಕೆ ಹಿಂದೆ ಪಡೆದಿದ್ದಾರೆ ಹಾಗಾಗಿ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ತಮ್ಮ ಸಮುದಾಯದ ನಾಯಕರು ಹೋರಾಟದ ವೇದಿಕೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಸವರಾಜ ಯತ್ನಾಳ ಅವರ ವಿಜಯಪುರದ ಜವಾರಿ ಭಾಷೆಯಲ್ಲಿ ಮಾತನಾಡುವದರಿಂದ ಅವರ ಮಾತುಗಳು ಎಲ್ಲರಿಗೂ ಖಾರ ವೆನಿಸುತ್ತವೆ ಎಂದು ನಯವಾಗಿ ಜಾರಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರುಗಳಾದ ಎಂ.ಸಿ ಮಾಸ್ತಿಹೋಳಿ, ಡಾ. ರಮೇಶ ಪಟಗುಂಡಿ, ಸೋಮಶೇಖರ್ ಮಗದುಮ್ಮ, ಬಸವರಾಜ ಹುಳ್ಳೇರ, ಶಿವಲಿಂಗಪ್ಪ ಸವದಿ, ಶಂಕರ ಗಿಡನ್ನವರ, ಆನಂದ ಮೂಡಲಗಿ, ಈಶ್ವರ ಬಾಗೋಜಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

4 + 17 =