Breaking News

ಕಿತ್ತೂರು ಕ್ಲಸ್ಟರ್ ನ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿದ ಬಿಇಒ ಆರ್.ಟಿ.ಬಳಿಗಾರ

Spread the love

ಕಿತ್ತೂರು ಕ್ಲಸ್ಟರ್ ನ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿದ ಬಿಇಒ ಆರ್.ಟಿ.ಬಳಿಗಾರ

ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು :  ಬಣ್ಣ ಬಣ್ಣದ ವೇಷಭೂಷಣ, ವಿದ್ಯಾರ್ಥಿಗಳಲ್ಲಿ ಸಂತಸ, ಸಂಭ್ರಮ, ವಿವಿಧ ಹಾಡುಗಳಗೆ ನರ್ತನ, ದಾರಿಯೂದ್ದಕ್ಕೂ ಹಬ್ಬದ ವಾತಾವರಣ ಕಂಡು ಬಂದಿದ್ದು ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಹಬ್ಬದಲ್ಲಿ.

ಹೌದು ! ಕಳೆದೆರೆಡು ವರ್ಷಗಳ ಹಿಂದೆ ಕೊರೊನಾ ಮಹಾಮಾರಿಯ ಹೊಡೆತಕ್ಕೆ ಶೈಕ್ಷಣಕ ರಂಗದಲ್ಲಿಯೂ ಸಾಕಷ್ಟು ಏರುಪೇರಾಗಿವೆ, ಮಕ್ಕಳ ಮನದಲ್ಲಿ ಕಲಿಕಾ ಉತ್ಸಾಹ ಮೂಡಿಸಲು ಹಾಗೂ ಸರ್ಕಾರಿ ಶಾಲೆಯತ್ತ ಆಕರ್ಷಿತರನ್ನಾಗಿಸಲು, ಮಕ್ಕಳ ಮನದಲ್ಲಿರುವ ಕಲಿಕಾ ಭೀತಿಯನ್ನು ಹೋಗಲಾಡಿಸಲು ಎಲ್ಲಡೆಯೂ ಈ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಕಿತ್ತೂರು ಕ್ಲಸ್ಟರ್ ನಲ್ಲಿ ಬರುವ 14 ಶಾಲೆಗಳ ಒಟ್ಟು 120 ವಿದ್ಯಾರ್ಥಿಗಳು ಈ ಕಲಿಕಾ ಹಬ್ಬದಲ್ಲಿ ಸೋಮವಾರ ಪಾಲ್ಗೋಂಡು ಕಿತ್ತೂರು ಉತ್ಸವದ ಮೆರಗನ್ನು ಮತ್ತೊಮ್ಮೆ ತಂದಂತೆ ಮೆರವಣಿಗೆ ನಡಿಸಿದರು, ಬೆಳಿಗ್ಗೆ 9 ಕ್ಕೆ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದ ಮುಂದೆ ಈ ಕಲಿಕಾ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಮಾಡು ಆಡು, ಹಾಡು ಆಡು, ಕಾಗದ ಕತ್ತರಿ, ಊರು ಸುತ್ತೊಣ ಎಂಬ ನಾಲ್ಕು ಮೂಲೆಗಳನ್ನಾಗಿ ವಿಂಗಡಿಸಿ ಮಕ್ಕಳು ತಯಾರಿಸಿದ ಅಥವಾ ಮಕ್ಕಳಲ್ಲಿ ಅಡಗಿರುವ ಕೌಶಲ್ಯವನ್ನು ಹೊರತರುವ ಕಾರ್ಯ ಈ ಕಲಿಕಾ ಹಬ್ಬದಿಂದ ನಡೆಯುತ್ತಿದೆ ಅಲ್ಲದೆ ಮಕ್ಕಳಲ್ಲಿರುವ ಕಲಿಕಾ ಭೀತಿ, ಮುಜುಗರ, ಹಿಂಜರಿತವನ್ನು ಹೋಗಲಾಡಿಸುವ ಉದ್ದೇಶ ಈ ಹಬ್ಬಕ್ಕಿದೆ.

2 ದಿನಗಳ ಕಾಲ ನಡೆಯುವ ಈ ಹಬ್ಬಕ್ಕೆ ಚಾಲನೆ ದೊರೆಯುತ್ತಿದ್ದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವೇಷ ಭೂಷಣದ ಹಾಗೂ ರಂಗು ರಂಗಿನ ವಸ್ತ್ರದಾರಿ ಮಕ್ಕಳು ವಿವಿಧ ಚಟುವಟಿಕೆಯಲ್ಲಿ ಪಾಲ್ಗೋಂಡು ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಣ ಹಾಗೂ ಇನ್ನಿತರ ಚಟುವಟಿಕೆಗಳನ್ನು ಸಾರ್ವಜನಿಕರ ಮುಂದೆ ಪ್ರಸ್ತುತ ಪಡಿಸುತ್ತಾ ಸಾಗಿದರು.

ಲೇಜಿಮ್, ಗ್ರಾಮೀಣ ಸೊಗಡಿನ ಜಗ್ಗಲಗಿ, ಸಾಧಕರ ವೇಷ ಭೂಷಣ, ಹುತಾತ್ಮ ಮಹನೀಯರ ವೇಷ ಭೂಷಣ ಸೇರಿದಂತೆ ಹತ್ತು ಹಲವಾರು ಬಗೆ ಬಗೆಯ ಚಟುವಟಿಕೆಗಳು ಈ ಹಬ್ಬದಲ್ಲಿ ನೋಡುಗರ ಮಂತ್ರಮುಗ್ದರನ್ನಾಗಿಸಿತು, ಶಾಲಾ ಮಕ್ಕಳ ಜೊತೆ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಾಗೂ ಶಿಕ್ಷಕ, ಶಿಕ್ಷಕಿಯರು ದೇಶ ಭಕ್ತಿ ಸಾರುವ ಹಾಡಿಗೆ ಹೆಜ್ಜೆ ಹಾಕಿದ್ದು ಮಕ್ಕಳ ಮನಸನ್ನು ಇನ್ನಷ್ಟು ಪ್ರಪುಲ್ಲಗೊಳಿಸಿತು.

ಕ್ಲಸ್ಟರನ್ 14 ಶಾಲೆಗಳಲ್ಲಿ ಕೌಶಲ್ಯವಿರುವ ಮಕ್ಕಳನ್ನು ಆಯ್ಕೆ ಮಾಡಿ ಈ ಕಲಿಕಾ ಹಬ್ಬದಲ್ಲಿ ಸೇರ್ಪಡೆಗೊಳಿಸಲಾಗುತ್ತದೆ, ಈ ಕಲಿಕಾ ಹಬ್ಬದಲ್ಲಿ ಕಲಿತ ವಿವಿಧ ಚಟುವಟಿಕೆಗಳನ್ನು ಈ ಆಯ್ದ ಮಕ್ಕಳು ತಮ್ಮ ಶಾಲೆಗೆ ತೆರಳಿ ಅಲ್ಲಿರುವ ಮಕ್ಕಳಿಗೂ ಕಲಿಸುತ್ತಾರೆ, ಅಲ್ಲದೆ ಶನಿವಾರ ನಡೆಯುವ ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಈ ಎಲ್ಲ ಚಟುವಟಿಕೆಗಳು ಅಲ್ಲಿ ಕಾಣ ಸಿಗುತ್ತದೆ, ಮಕ್ಕಳಿಗೆ ಮನೋರಂಜನೆಯ ಜೊತೆಗೆ ವಿಶಿಷ್ಟ ಚಟುವಟಿಕೆಗಳಿಗೂ ಈ ಕಲಿಕಾ ಹಬ್ಬ ಸಹಕಾರಿಯಾಗುತ್ತದೆ ಎಂದು ಈ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ತಿಳಿಸಿದರು.

ಇದಕ್ಕೂ ಮೊದಲು ಓದಿನ ಕುರಿತು ತಾಯಿ ಚನ್ನಮ್ಮಾಜಿಯ ಹೆಸರಿನ ಮೇಲೆ ಬಿಇಒ ಆರ್.ಟಿ.ಬಳಿಗಾರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹುತಾತ್ಮ ದಿನಾಚರಣೆಯ ನಿಮಿತ್ತ ಎಲ್ಲ ವೀರ ಹುತಾತ್ಮರಿಗೆ ಮೌನಾಚರಣೆ ಸಲ್ಲಿಸಲಾಯಿತು.

ಈ ಕಲಿಕಾ ಹಬ್ಬದಲ್ಲಿ ಜಿಲ್ಲಾ ಉಪಯೋಜನಾ ಸಮನ್ವಯ ಅಧಿಕಾರಿ ಬಸವರಾಜ ಮಿಲ್ಲಾನಟ್ಟಿ, ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನವರ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ ಶಂಕ್ರಯ್ಯಾ ಶಹಪೂರಮಠ, ಕಾರ್ಯಕ್ರಮದ ಅಧ್ಯಕ್ಷ ಆರ್. ಪ್ರಮೋದಸ್ವಾಮಿ, ಎಸಡಿಎಂಸಿ ಅಧ್ಯಕ್ಷ ಕುಮಾರ ಪರದೇಶಿ, ಡಿ.ಎಚ್.ಪಾಟೀಲ, ಗುರುರಾಜ ಶೆಟ್ಟರ, ಸೇರಿದಂತೆ ಕ್ಷೇತ್ರ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಇದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

19 − 9 =