Breaking News

ಬೆಳಗಾವಿಯಲ್ಲಿ ಇನ್ನೂ ಇಬ್ಬರು ಮನೆಗಳ್ಳರ ಬಂಧನ ; 3 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು ವಶಕ್ಕೆ

Spread the love

ಬೆಳಗಾವಿಯಲ್ಲಿ ಇನ್ನೂ ಇಬ್ಬರು ಮನೆಗಳ್ಳರ ಬಂಧನ ; 3 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು ವಶಕ್ಕೆ

 

ಯುವ ಭಾರತ ಸುದ್ದಿ ಬೆಳಗಾವಿ: 2-11-2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಹದ್ದಿಯ ಮಚ್ಚೆ ಗ್ರಾಮದ ಲಕ್ಷ್ಮೀನಗರದಲ್ಲಿ ಮನೆ ಮತ್ತು ಕಾರು ಕಳ್ಳತನವಾದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿದ್ದರು.

ಹಿರಿಯ ಪೊಲೀಸ್ ಅಧಿಕಾರಗಳ ಆದೇಶದಂತೆ ಎಸ್.ವಿ.ಗಿರೀಶ , ಎಸಿಪಿ , ಬೆಳಗಾವಿ ಗ್ರಾಮೀಣ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ ಮತ್ತು ಶ್ರೀನಿವಾಸ ಹಾಂಡ , ಪೊಲೀಸ್ ನಿರೀಕ್ಷಕರು , ಬೆಳಗಾವಿ ಗ್ರಾಮೀಣ ಠಾಣೆ ಹಾಗೂ ಅವರ ತಂಡ ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿತರಾದ 1 ) ಕೃಷ್ಣಾ , ರಾಜು ತಂದೆ ಆಶೋಕ ರಾಮನ್ನವರ , 2 ) ನಾಗರಾಜ@ ಅಪ್ಪು ತಂದೆ ಸಂಗಪ್ಪ ಬುದ್ಲಿ ಇವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜಪಡಿಸಲಾಗಿತ್ತು . ಅವರ ಹೇಳಿಕೆಯನ್ನಾಧರಿಸಿ ಈ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿತರಾದ 1 ) ಶಿವನಾಗಯ್ಯಾ ಮುತ್ತಯ್ಯಾ ಉಮಚಗಿಮಠ ‘( 26 ) ಸಾ || ಇಂಡಸ್ಟ್ರಿಯಲ್ ಎರಿಯಾ, ಮಚ್ಛೆ, 2 ) ಆಕಾಶ ಮಧು @ಮಧುಕರ ಗಾಂವಕರ ( 22 ) ಸಾ || ಕುರುಬರಗಲ್ಲಿ , ಮಚ್ಛೆ ತಾ.ಬೆಳಗಾವಿ , ಇವರನ್ನು ದಿನಾಂಕ : 29/01/2023 ರಂದು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಇವರು ಬೆಳಗಾವಿ ಗ್ರಾಮೀಣ ಠಾಣೆಯ ಮೂರು ಮನೆಗಳ್ಳತನ ಮತ್ತು ಒಂದು ಸುಲಿಗೆ ಪ್ರಕರಣ ಹಾಗೂ ಎಪಿಎಂಸಿ ಮತ್ತು ಉದ್ಯಮಬಾಗದಲ್ಲಿ ತಲಾ ಒಂದು ಸುಲಿಗೆ ಪ್ರಕರಣಗಳು ಹೀಗೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿವುದಾಗಿ ಒಪ್ಪಿಕೊಂಡಿರುತ್ತಾರೆ . ಆರೋಪಿತರು ಸುಲಿಗೆ ಮತ್ತು ಕಳ್ಳತನ ಮಾಡಿ ತಮ್ಮ ಬಳಿ ಇಟ್ಟುಕೊಂಡಿದ್ದು , ಒಟ್ಟು 3,00,000 / – ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು , ಎಲ್ . ಜಿ . ಕಂಪನಿಯ ಮೊನಿಟರ್ ಹಾಗೂ ಟಿವಿ ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ
ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

4 × 4 =