Breaking News

ಮಾರ್ಚ್ 10 ರಿಂದ 12 ರವರೆಗೆ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

Spread the love

ಮಾರ್ಚ್ 10 ರಿಂದ 12 ರವರೆಗೆ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

ಯುವ ಭಾರತ ಸುದ್ದಿ ಬೆಳಗಾವಿ:
ನಗರದ ಕೆ ಎಲ್ ಎಸ್ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಎಂ.ಕೆ.ನಂಬಿಯಾರ್ ಸ್ಮರಣಾರ್ಥ 13 ನೇ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆ ಏರ್ಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ ಎಲ್ ಎಸ್ ಸದಸ್ಯ ಆರ್‌. ಎಸ್. ಮುತಾಲಿಕ್ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆ ಮಾರ್ಚ್ 10 ರಂದು ಸಂಜೆ 5:00 ಗಂಟೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಸ್. ಎನ್. ಪಾಶ್ಚಾಪುರೆ ಮುಖ್ಯ ಅತಿಥಿಗಳಾಗಿ ಮತ್ತು ಪಿ. ಜಿ. ಕುಲಕರ್ಣಿ ಹಾಗೂ ಎಸ್. ವಿ. ಗಣಾಚಾರಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಎಂ. ಆರ್. ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಗುಜರಾತ್, ಉತ್ತರ ಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ, ಉತ್ತರಾಖಂಡ, ತಮಿಳುನಾಡು, ಗೋವಾ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ 16 ತಂಡಗಳು ಹಾಗೂ ಕರ್ನಾಟಕದ 4 ರಾಷ್ಟ್ರೀಯ ಕಾನೂನು ಶಾಲೆಗಳನ್ನು ಒಳಗೊಂಡಂತೆ 14 ತಂಡಗಳು ಸ್ಪರ್ಧೆಗೆ ನೋಂದಾಯಿಸಿದ್ದಾರೆ. ಒಟ್ಟು 30 ತಂಡಗಳು ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ಪರ್ಧೆಯ ಅಂತಿಮ ಸುತ್ತು ಮಾರ್ಚ್ 12 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದ್ದು, ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅನಿಲ್. ಬಿ. ಕಟ್ಟಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ಸ್ಪರ್ಧೆಯ ಬಹುಮಾನ ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದ್ದು, ಉತ್ತಮ ವಾದಮಂಡಕ ಹಾಗೂ ವಾದ ಮಂಡಕ ತಲಾ 10,000/- ನಗದು ಹಾಗೂ ಟ್ರೋಫಿ ಪಡೆಯಲಿದ್ದು, ಉತ್ತಮ ಜ್ಞಾಪಕ ಪತ್ರ 10,000/- ನಗದು ಮತ್ತು ಟ್ರೋಫಿಯನ್ನು ಪಡೆಯಲಿದೆ. ಇನ್ನುಳಿದಂತೆ ರನ್ನರ್ ಅಪ್ ತಂಡ 20,000/- ನಗದಿನೊಂದಿಗೆ ಟ್ರೋಫಿ ಹಾಗೂ ವಿಜೇತ ತಂಡ 30,000/- ನಗದಿನೊಂದಿಗೆ ಟ್ರೋಫಿಯನ್ನು ಗೆಲ್ಲಲಿದೆ ಎಂದು ಕೆ ಎಲ್, ಎಸ್ ಸೊಸೈಟಿಯ ಕಾರ್ಯದರ್ಶಿ ಎಸ್‌.ವಿ. ಗಣಾಚಾರಿ ಮಾಹಿತಿ ನೀಡಿದರು.

ಧಾರವಾಡ ಪೀಠ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅನಿಲ್. ಬಿ. ಕಟ್ಟಿ ಸಂಜೆ 4:30 ಕ್ಕೆ ನಡೆಯುವ ಕೆ.ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಸಮಾರೋಪದ ಮುಖ್ಯ ಅತಿಥಿಗಳಾಗಿಯೂ ಸಹ ಉಪಸ್ಥಿತರಿರುವರು. ಎಂ. ಆರ್. ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿಯನ್ನಿತ್ತರು.

ಭಾರತದ ನಿವೃತ್ತ ಅಟಾರ್ನಿ ಜನರಲ್ ಹಾಗೂ ಸ್ಪರ್ಧೆಯ ಪ್ರಾಯೋಜಕ ಕೆ.ಕೆ. ವೇಣುಗೋಪಾಲ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಕಾನೂನು ಅಧ್ಯಯನ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿರುವುದು ಶ್ಲಾಘನೀಯ. ಮುಂಬರುವ ಸ್ಪರ್ಧೆಯು ಯಶಸ್ವಿಗೊಳ್ಳಲಿ ಎಂದು ಶುಭಾಶಯ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಎ.ಎಚ್. ಹವಾಲ್ದಾರ್, ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಅಶ್ವಿನಿ ಪರಬ್, ಹಾಗೂ ವಿದ್ಯಾರ್ಥಿನಿ ಕಾರ್ಯದರ್ಶಿ ಸೌಮ್ಯಶೆಟ್ಟಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

eighteen + 4 =