Breaking News

21 ರಂದು ಪುಣೆಯ ಭೋಸರಿಯಲ್ಲಿ ಅತ್ಯಾಧುನಿಕ ಕೆಎಲ್‌ಇ ಮೆಡಿಕವರ್ ಆಸ್ಪತ್ರೆ ಉದ್ಘಾಟನೆ

Spread the love

21 ರಂದು ಪುಣೆಯ ಭೋಸರಿಯಲ್ಲಿ ಅತ್ಯಾಧುನಿಕ
ಕೆಎಲ್‌ಇ ಮೆಡಿಕವರ್ ಆಸ್ಪತ್ರೆ ಉದ್ಘಾಟನೆ

ಯುವ ಭಾರತ ಸುದ್ದಿ ಬೆಳಗಾವಿ :
107 ವರ್ಷಗಳ ಸುದೀಘ ಇತಿಹಾಸವನ್ನು ಹೊಂದಿರುವ ಕೆಎಲ್‌ಇ ಸಂಸ್ಥೆ
ಜ.21 ರಂದು ಪುಣೆಯ ಭೋಸರಿಯಲ್ಲಿ ನೂತನ ಕೆಎಲ್‌ಇ ಮೆಡಿಕವರ್ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ಆ ಮೂಲಕ ರಾಜ್ಯದ ಆಚೆಗೂ ಕೆಎಲ್‌ಇ ಸಂಸ್ಥೆಯ ಮೊಟ್ಟಮೊದಲ ಆರೋಗ್ಯ ಸೇವೆಗಳು ತೆರೆದುಕೊಳ್ಳಲಿವೆ.

ದೇಶದಲ್ಲಿಯೇ ಖಾಸಗಿ ವಲಯದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಈಗಾಗಲೇ 4,500 ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯ ಆರೋಗ್ಯ ಸೇವೆಗಳು ಈಗ ಪುಣೆಯ ಬೋಸರಿಯಲ್ಲಿ ನೂತನ ಆಸ್ಪತ್ರೆಗೆ ಚಾಲನೆ ನೀಡುವ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಿದೆ. ಈ ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು 250 ಹಾಸಿಗೆಗಳನ್ನು ಹೊಂದಿದ್ದು, ನ್ಯೂರಾಲಜಿ, ನ್ಯೂರೋ-ಸರ್ಜರಿ, ಕಾರ್ಡಿಯಾಲಜಿ, ಯುರಾಲಜಿ ಮುಂತಾದ ಸೂಪರ್-ಸ್ಪೆಷಾಲಿಟಿ ಸೇರಿದಂತೆ ತೀವ್ರ ನಿಗಾ ಘಟಕಗಳು, ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಹೊಂದಿದೆ. ಕೆಎಲ್‌ಇ ಸಂಸ್ಥೆ ಬಹು-ರಾಷ್ಟ್ರೀಯ ಸಂಸ್ಥೆಯಾದ ಮೆಡಿಕವರ್ ಗ್ರೂಪ್ ಆಫ್ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೆಡಿಕವರ್ ಗ್ರೂಪ್ ಮುಖ್ಯವಾಗಿ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭಾರತದಾದ್ಯಂತ 27 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಹೊಂದಿದೆ.

ಉದ್ಘಾಟನೆ:
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಜರುಗಲಿರುವ ಮಲ್ಟಿಸ್ಪೆಷಾಲಿಟಿ ಕೆಎಲ್‌ಇ ಮೆಡಿಕವರ್ ಆಸ್ಪತ್ರೆಯನ್ನು ಪದ್ಮವಿಭೂಷಣ ಶರದ್ ಪವಾರ್ ಉದ್ಘಾಟಿಸಲಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ವಹಿಸಲಿದ್ದಾರೆ.
ಶಿರೂರ ಲೋಕಸಭಾ ಸದಸ್ಯ ಡಾ.ಅಮೋಲ್ ಕೋಲ್ಹೆ, ಮಾವಲ ಲೋಕಸಭಾ ಸದಸ್ಯ ಶ್ರೀರಂಗ ಬರಣೆ, ಭೋಸರಿಯ ಶಾಸಕ ಮಹೇಶ ಲಾಂಡಗೆ, ಅಹಮದನಗರ ಲೋಕಸಭಾ ಸದಸ್ಯ ಡಾ.ಸುಜಯ ರಾಧಾಕೃಷ್ಣ ವಿಖೆಪಾಟೀಲ, ಮೆಡಿಕವರ್ ಗ್ರುಪನ್ ಚೇರಮನ್‌ ಫ್ರೆಡ್ರಿಕ್ ಸ್ಟೆನಮೋ, ಭಾರತದ ಮೆಡಿಕವರ್ ಆಸ್ಪತ್ರೆಗಳ ಚೇರಮನ್‌ ಅನಿಲ ಕೃಷ್ಣಾ, ಪುಣೆಯ ಭಾರತೀಯ ವಿದ್ಯಾಪೀಠದ ಉಪಕುಲಪತಿ ಡಾ.ವಿಶ್ವಜಿತ ಕದಮ ಆಗಮಿಸಲಿದ್ದು, ವಿಶೇಷ ಆಮಂತ್ರಿತರಾಗಿ ಭಾರತದ ಮೆಡಿಕವರ್ ಆಸ್ಪತ್ರೆಗಳ ಕಾರ್ಯಕಾರಿ ನಿರ್ದೇಶಕ ಪಿ. ಹರಿ ಕೃಷ್ಣ, ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆಯ ಕಾರ್ಪೋರೇಟರ್‌ಗಳಾದ ವಿಲಾಸ ಮಡಿಗೇರಿ, ನಮ್ರತಾ ಲೋಂಧೆ ಮತ್ತು ವಿಕ್ರಾಂತ ಲಾಂಡೆ ಉಪಸ್ಥಿತರಿರುವರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

two + two =