Breaking News

ಸೇವಾ ನಿವೃತ್ತರಾದ ಇಂಡಿ ಆರ್‌ಡಿಈ ಸಂಸ್ಥೆಯ ಆದರ್ಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಐ.ಸಿ.ಪೂಜಾರ ಸನ್ಮಾನ

Spread the love

ಸೇವಾ ನಿವೃತ್ತರಾದ ಇಂಡಿ ಆರ್‌ಡಿಈ ಸಂಸ್ಥೆಯ ಆದರ್ಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಐ.ಸಿ.ಪೂಜಾರ ಸನ್ಮಾನ

ಯುವ ಭಾರತ ಸುದ್ದಿ ಇಂಡಿ:
ಆರ್‌ಡಿಈ ಸಂಸ್ಥೆ ಒಂದು ಆಲದ ಮರವಿದ್ದಂತೆ,ಒಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರ ಜವಾಬ್ದಾರಿಯನ್ನು ಐ.ಸಿ.ಪೂಜಾರರವರು ಸಮರ್ಥವಾಗಿ ನಿಭಾಯಿಸಿದ್ದಾರೆ.ತಮ್ಮ ಬಹುಪಾಲು ಸಮಯವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ,ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ಆರ್‌ಡಿಈ ಸಂಸ್ಥೆಯ ಅಧ್ಯಕ್ಷೆ ಡಿ.ಶಿರೋಮಣಿ ಹೇಳಿದರು.
ಅವರು ಪಟ್ಟಣದ ಆರ್‌ಡಿಈ ಸಂಸ್ಥೆಯ ಆದರ್ಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಐ.ಸಿ.ಪೂಜಾರ ನಿವೃತ್ತಿ ಹೊಂದಿದ ನಿಮಿತ್ಯ ಕ್ರೈಸ್ತ ಕನ್ನಡ ಹಾಗೂ ಎಂಜೆಲ್ಸ್ ಆಂಗ್ಲಮಾದ್ಯಮ ಹಾಗೂ ಆದರ್ಶ ಚಿತ್ರಕಲಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದ ವತಿಯಿಂದ ಹಮ್ಮಿಕೊಂಡ ಸನ್ಮಾನ ಹಾಗೂ ಬಿಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿದವರಿಗೆ ಮಾತ್ರ ಇಂತಹ ಬದ್ಧತೆ ಬರಲು ಸಾಧ್ಯ.ಸುಮಾರು 25 ವರ್ಷಗಳ ಅವರ ಸೇವಾ ಅವಧಿಯಲ್ಲಿ ಒಂದೇ,ಒಂದು ಕಪ್ಪುಚುಕ್ಕೆಯೂ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದು,ಸಾಮರಸ್ಯದೊಂದಿಗೆ ನಿಷ್ಕಳಂಕ ಸೇವೆ ಸಲ್ಲಿಸಿ ನಿರಾಳವಾಗಿ ನಿವೃತ್ತಿ ಹೊಂದಿದ ಅವರ ನಿವೃತ್ತಿ ಜೀವನ ಸುಖ,ಶಾಂತಿಯಿಂದ ತುಂಬಿರಲಿ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸ್ಟೀಫನ್ ಶಿರೋಮಣಿ,ಸನ್ಮಾನ ಸ್ವೀಕರಿಸಿ ನಿವೃತರಾದ ಐ.ಸಿ.ಪೂಜಾರ ಮಾತನಾಡಿದರು.ಸಂಗಮ್ಮ ಪೂಜಾರ,ಬಿ.ಎನ್.ಮಾರ್ಕಪನಹಳ್ಳಿ,ಮಂಜುನಾಥ ನಾಯ್ಕೋಡಿ,ಆರ್.ಎಸ್.ಮಂಗಳೂರ,ಎಸ್.ಬಿ.ಗದ್ಯಾಳ,ಎಂ.ಎನ್.ಕೊರಣ್ಣವರ,ಲ ಗೌರಿಶ,ಲಕ್ಷ್ಮೀ ನಿವರಗಿ,ಯಲ್ಲಾಲಿಂಗ ಬಾಗೇವಾಡಿ,ಅರವಿಂದ ಕಾಂಬಳೆ,ಮಹ್ಮದಗೌಸ ಬಗಲಿ,ಸ್ವಾತಿ ಸುರಪೂರ,ಉಮ್ರಾನ ಮುಜಾವರ,ಆನಂದ ಚವ್ಹಾಣ,ಎಸ್.ಬಿ.ಮಾರ್ಕಪನಹಳ್ಳಿ,ಗೀತಾ ಯಾದವ,ರೇಖಾ ಪಾಟೀಲ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

thirteen + eighteen =