ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ
ಯುವ ಭಾರತ ಸುದ್ದಿ ಬಸವನಬಾಗೇವಾಡಿ :
ಭಾರತೀಯ ಜನತಾ ಪಕ್ಷದ ಬೂತ್ ಅಭಿಯಾನದ ಅಂಗವಾಗಿ ಬಸವನ ಬಾಗೇವಾಡಿ ಪಟ್ಟಣದಲ್ಲಿ ಮನೆ ಮನೆ ಚಿತ್ರ ಬಿಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಈ ಬಾರಿ ರಾಜ್ಯದಲ್ಲಿ ಮತೊಮ್ಮೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ಎಲ್ಲಾ ಕಾರ್ಯಕರ್ತರು ಹಾಗೂ ಎಲ್ಲ ಪದಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಬೂತ್ ಗಳಲ್ಲಿ ಪಕ್ಷ ಹಮ್ಮಿ ಕೊಂಡಿರುವ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಬೇಕೆಂದರು.
ಮಂಡಲ ಉಸ್ತುವಾರಿ ಎಂ ಡಿ ಕುಂಬಾರ್, ರವಿ ಪಟ್ಟಣಶೆಟ್ಟಿ, ಸತೀಶ್ ಕ್ವಾಟಿ, ವಿನೂತ್ ಕಲ್ಲೂರ್, ಬಾಬು ನಿಡಗುಂದಿ, ಅಶೋಕ್ ಗುಳೇದ್, ನೀಲಪ್ಪ ನಾಯಕ್, ಶ್ರೀಧರ್ ಕುಂಬಾರ್, ಸಂಜು ಬಿರಾದಾರ್, ವಿನೋದ್ ಗಬ್ಬುರ್, ಅಮರೇಶ್ ಪುರಾಣಿಕಮಠ, ಆನಂದ್ ಸುಂಕದ್, ರಾಜು ಸಂಗಮ್, ಬಸವರಾಜ್ ಮಸಬಿನಾಳ್, ಆನಂದ್ ನಾಲತ್ವಾಡ, ಸುರೇಶ ನಾಯಕ್, ಸಿದ್ದಲಿಂಗಯ್ಯ ಹಿರೇಮಠ, ಅಮರಯ್ಯ ಹಿರೇಮಠ ಉಪಸ್ಥತರಿದ್ದರು.