ಪ್ರತಿಯೊಬ್ಬ ಪ್ರಜೆಯು ಸಂವಿಧಾನವನ್ನು ಗೌರವಿಸಬೇಕು:ಶಂಕರಗೌಡ ಬಿರಾದಾರ
ಯುವ ಭಾರತ ಸುದ್ದಿ ಬಸವನಬಾಗೇವಾಡಿ :
ಜನರಿಂದ ಜನರಿಗಾಗಿ ನಿರ್ಮಾಣಗೊಂಡ ವಿಶ್ವದ ಅತ್ಯುತ್ತಮ ಪುಸ್ತಕವೆಂದರೆ ಅದು ನಮ್ಮ ದೇಶದ ಸಂವಿಧಾನ ಎಂದು ರಾಷ್ಟ್ರೀಯ ಬಸಬ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಅವರು ಹೇಳಿದರು
ಪಟ್ಟಣದ ಬಸವ ಜನ್ಮ ಸ್ಮಾರಕದ ಮುಂದೆ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಏರ್ಪಡಿಸಿದ್ದ 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಜನವರಿ 26ರಂದು ನಮ್ಮ ಸಂವಿಧಾನ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದೇವೆ ರಾಜಕೀಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದ ಮೂಲಕ ಸಮಾನತೆ ನಮಗೆ ಸಿಕ್ಕಿದೆ ದೂರದೃಷ್ಟಿ ನಾಯಕರಿಂದಾಗಿ ಉತ್ಕರ್ಷ ಸಂವಿಧಾನ ನಮ್ಮದಾಗಿದೆ ಎಂದರು
12ನೇ ಶತಮಾನದಲ್ಲಿ ವಿಶ್ವವೇ ಅಚ್ಚರಿಪಡುವ ಅನುಭವ ಮಂಟಪ ನಾವು ಹೊಂದಿದವರು ವಸುದೈವ ಕುಟುಂಬ ಅಳವಡಿಸಿಕೊಂಡು ನಾವು ಈಗ ಜಗತ್ತಿನ ನಾಯಕತ್ವ ಹಿಡಿಯುವ ಮುಂಚೂಣಿಯಲ್ಲಿದ್ದೇವೆ ಭಾರತ ಅಭಿವೃದ್ಧಿ ಕಡೆ ಯೋಗದ ಪತ ಸಂಚಲನ ಮಾಡುತ್ತಿದೆ ಹನಿಹನಿ ಕೂಡಿದರೆ ಹಳ್ಳ ಎಂಬಂತೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ದೇಶಕ್ಕೆ ಕೊಡುಗೆ ನೀಡಬೇಕು ಎಂದರು
ಹಿರಿಯ ಸಾಹಿತಿಗಳಾದ.ಲ.ರೂ,ಗೋಳಸಂಗಿ ಅವರು ಮಾತನಾಡಿ ಹಲವಾರು ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನದಿಂದ ಸಿಕ್ಕಂತ ಈ ಸ್ವಾತಂತ್ರ್ಯವನ್ನು ಸರಿಯಾದ ಮಾರ್ಗದಲ್ಲಿ ನಮ್ಮ ಯುವಕರು ಉಳಿಸಿಕೊಳ್ಳಬೇಕು ಎಂದು ಹೇಳಿದರು ವೇದಿಕೆ ಮೇಲೆ ರಾಷ್ಟ್ರೀಯ ಸಂಚಾಲಕರಾದ ಶ್ರೀಕಾಂತ್ ಕೊಟ್ರಶೆಟ್ಟಿ.ಸಿದ್ದಲಿಂಗ ಒಡೆಯರ್ ಸುನಿಲ್ ಚಿಕ್ಕೋಂಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ರಾಷ್ಟ್ರೀಯ ಬಸವ ಸೈನ್ಯದ ತಾಲೂಕ ಅಧ್ಯಕ್ಷರಾದ ಸಂಜು ಬಿರಾದಾರ್ ಸ್ವಾಗತಿಸಿ ವಂದಿಸಿದರು