ವಿವೇಕ ಯುವ ಬ್ರಿಗೇಡ್ ವತಿಯಿಂದ ಗಣರಾಜ್ಯೋತ್ಸವ
ಯುವ ಭಾರತ ಸುದ್ದಿ ಬಸವನ ಬಾಗೇವಾಡಿ :
ಇಂದು 76ನೇಗಣರಾಜ್ಯೋತ್ಸವ ಪ್ರಯುಕ್ತ ವಿವೇಕ್ ಬ್ರಿಗೇಡ್ ಸಂಸ್ಥೆಯಿಂದ ಆಚರಣೆಯೊಂದಿಗೆ ಇದೇ ತಿಂಗಳಲ್ಲಿ ಭಾರತದ ಅಗಾಧ ಶಕ್ತಿಗಳಾಗಿದ್ದ ಭಾರತಕ್ಕೆ ತಮ್ಮದೇ ಕೊಡಗೆ ನೀಡಿದ ಬೆಂಕಿಯ ಚೆಂಡು ಭಾರತದ ಹಿಂದುತ್ವ ಸಂಸ್ಕೃತಿಯ ಬಗ್ಗೆ ವಿಶ್ವಕ್ಕೆ ಸಾರಿ ಹೇಳಿದ ಶ್ರೀ ಸ್ವಾಮಿ ವಿವೇಕಾನಂದರು ಮತ್ತು ಸ್ವತಂತ್ರಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ಬಿಟ್ಟ ಸಂಗೊಳ್ಳಿ ರಾಯಣ್ಣ ರವರ ಪುಣ್ಯತಿಥಿ ಇದ್ದು ಇವರೆಲ್ಲರ ಸ್ಮರಣಾರ್ಥವಾಗಿ ಬಸವನಬಾಗೇವಾಡಿಯಲ್ಲಿ ಬೀದಿ ಬದಿ ಕರ್ಮಚಾರಿ ಮತ್ತು ವ್ಯಾಪಾರಸ್ಥರಿಗೆ ನೆರಳಾಗಲೆಂದು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಛತ್ರಿ ಕೊಡೆಗಳನ್ನು ಹಂಚಲಾಯಿತು ಈ ಸಂದರ್ಭದಲ್ಲಿ ಸ್ವತಹ ಸ್ವಾಮೀಜಿಯವರೇ ಕರ್ಮಚಾರಿ ಇರುವ ಸ್ಥಳಕ್ಕೆ ಹೋಗಿ ಸ್ವಾಮೀಜಿಯವರು ಅವರಿಗೆ ಕೊಡೆಗಳನ್ನು ಹಸ್ತಾಂತರಿಸಿ ಮತ್ತು ಸಿಹಿಯನ್ನು ಹಂಚಿದು ವಿಶೇಷವಾಗಿತ್ತು.
ವಿನೋದ್ ಕಲ್ಲೂರ್ .ರವಿ ಚಿಕ್ಕೊಂಡ್. ದಾದಾ ಗೌಡ ಬಿರಾದರ್. ವಿಜಯ್ ಬಿರಾದರ ಮಹೇಶ್ ಅವಟಿ. ಪ್ರಶಾಂತ್ ಕೆಂಭಾವಿ. ಸಂಗಣ್ಣ ಹುಜರತಿ. ಸಂಗಮೇಶ್ ಪೂಜಾರಿ. ರಫೀಕ್ ಸಾಟಿ. ಕಾಶಿನಾಥ್ ಅವಟಿ. ಶ್ರೀಧರ್ ಕುಂಬಾರ್. ಸಂಗಮೇಶ್ ಜಾಲಗೇರಿ. ವಿಜಯ್ ಮದ್ರಾಸ್. ಸುರೇಶ್ ಹೂಗಾರ್. ಪೃಥ್ವಿರಾಜ್ ನಾಯ್ಕೋಡಿ. ಪರಶುರಾಮ್ ಹಂಜಗಿ.
ಶಿವಾನಂದ ಉಪಸ್ಥಿತರಿದ್ದರು.