ಅಸಾಧ್ಯ! ———– ಕೊಳ್ಳಬಹುದು ಬೆಲೆ ಬಾಳುವ ಗಡಿಯಾರ, ಸಮಯವನ್ನಲ್ಲ; ಖರೀದಿಸಬಹುದು ಮೆತ್ತನೆ ಹಾಸಿಗೆ, ನಿದ್ದೆಯನ್ನಲ್ಲ; ಗೆಲ್ಲಬಹುದು ಹಣಸುರಿದು ಚುನಾವಣೆಯನ್ನು, ಮರ್ಯಾದೆಯ ಬದುಕನ್ನಲ್ಲ! ಡಾ. ಬಸವರಾಜ ಸಾದರ
Read More »ಬೃಹದ್ವೃಕ್ಷ
ಬೃಹದ್ವೃಕ್ಷ ————— ‘ಸಣ್ಣದನ್ನು ಯೋಚಿಸಬೇಡ, ಬರೆಯಬೇಡ’- ಉಪದೇಶಿಸುತ್ತಲೇ ಬಂದಿದ್ದಾಳೆ ಮಗಳು; ಈಗ ನೋಡುತ್ತೇನೆ ಅಚ್ಚರಿ! ಬೃಹತ್ ವೃಕ್ಷವಾಗಿ ಬೆಳೆದು ನಿಂತಿದ್ದಾಳೆ ನನ್ನೆದುರೇ ಅವಳು!! ಡಾ. ಬಸವರಾಜ ಸಾದರ. — + —
Read More »ಕಾಣದ್ದಕ್ಕೆ ಕನ್ನಡಿ
ಕಾಣದ್ದಕ್ಕೆ ಕನ್ನಡಿ ———————– ಜಗತ್ತನ್ನೇ ನೋಡಬಲ್ಲ ಕಣ್ಣಿಗೆ ಕಾಣದು, ತನ್ನೊಳಗೆ ಬಿದ್ದ ಕಸರು; ಬೇಕೇ ಬೇಕು ಕನ್ನಡಿಯೊಂದು ಎದುರು, ನೋಡಲದರ ಕೆಟ್ಟ ಕದರು. ಡಾ. ಬಸವರಾಜ ಸಾದರ.
Read More »ಪಿಚ್ಚರ್ ಅಭಿ ಬಾಕೀ ಹೈ…!!
ಪಿಚ್ಚರ್ ಅಭಿ ಬಾಕೀ ಹೈ…!! —————————- ಕ್ಷಮಯಾಧರಿತ್ರಿಯೂ ಕ್ಷಮಿಸಲಿಲ್ಲ ಈ ಬಾರಿ ಟರ್ಕಿ-ಸಿರಿಯಾದಲಿ ಮೈ-ಕೊಡವಿ ಕಂಪಿಸಿದಳು! ಗೊತ್ತಿಲ್ಲ ಮತ್ತೆಲ್ಲಿ, ಯಾವಾಗ ಭೂತಾಯಿ ಬಾಯ್ಬಿರಿವಳೋ? ತನ್ನ ಮಕ್ಕಳನೇ ತಾ ಮರೆವಳೋ|| ಇಲ್ಲೂ ಲಾತೂರ್, ಕಛನಲ್ಲಿ ಆಗೊಮ್ಮೆ ಆಗಿತ್ತು ಭೂಕಂಪನ ಮಣ್ಣುಪಾಲಾಗಿತ್ತು ಜೀವನ! ಈಗಲೂ ಆಗೊಮ್ಮೆ, ಈಗೊಮ್ಮೆ ಅಲ್ಲಲ್ಲಿ ಕಂಪಿಸುತ್ತಿದೆ ಭೂಮಿ ಕುಸಿಯುತ್ತಿವೆ ಬೆಟ್ಟ-ಗುಡ್ಡ|| ಹಿಮಾಲಯ, ಉತ್ತರ-ಭಾರತ ಭೂತಾಯಿಯ ತೊಟ್ಟಿಲಂತೆ! ಅದ್ಯಾವಾಗ ತೂಗುವುದೋ? ಕೋಟಿ ವರ್ಷಗಳ ಹಿಂದೊಮ್ಮೆ ಭೂಮಿ ಬುಡಮೇಲಾಗಿತ್ತಂತೆ! ಕಡಲು-ಪರ್ವತ ಹುಟ್ಟಿದ್ದವಂತೆ|| …
Read More »ಯಕ್ಷಗಾನ ರಾಜ್ಯ ಸಮ್ಮೇಳನದ ನಂತರ……
ಯಕ್ಷಗಾನ ರಾಜ್ಯ ಸಮ್ಮೇಳನದ ನಂತರ…… ರಾಜ್ಯ ಸರಕಾರದಿಂದಲೇ ಪ್ರಾಯೋಜಿತವಾದ ಯಕ್ಷಗಾನ ರಾಜ್ಯ ಸಮ್ಮೇಳನ ಮುಗಿದಿದೆ. ನಾನು ಆ ಸಮ್ಮೇಳನಕ್ಕೆ ಹೋಗಿಲ್ಲವಾದ್ದರಿಂದ ಅದರ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತ ಪಡಿಸಲಾರೆ. ಸಮ್ಮೇಳನಕ್ಕೆ 15 ದಿವಸ ಇರುವಾಗಲೇ ನನ್ನ ಕೆಲವು ವಿಚಾರಗಳನ್ನು ಬರೆದಿದ್ದೆ ಅಷ್ಟೇ. ಅದನ್ನು ಸಮ್ಮೇಳನಾಧ್ಯಕ್ಷರಿಗೂ , ಕಾರ್ಯಾಧ್ಯಕ್ಷರಿಗೂ, ಇತರ ಹಲವು ಆಸಕ್ತರಿಗೂ ಕಳಿಸಿದ್ದೆ. ಕೆಲವರು ಪ್ರತಿಕ್ರಿಯೆಗಳನ್ನೂ ಕಳಿಸಿದ್ದಾರೆ. ಸಮ್ಮೇಳನದ ಬಗ್ಗೆ ಅಲ್ಲಿಗೆ ಹೋದ ಕೆಲವರು ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿ ಒಟ್ಟಾರೆ …
Read More »ಧರ್ಮಮತ
ಧರ್ಮಮತ ————— ಗಟ್ಟಿ ಬಾಳು ಒಡೆದು ನುಚ್ಚಾಗಿಸುವುದು ಕೆಟ್ಟ ಮತ, ಒಡೆದುದನ್ನು ಒಂದಾಗಿಸಿ ಬೆಸೆವುದು ಮಹಾಧರ್ಮ; ಎರಡೂ ಒಂದೇ ಎನ್ನುವುದು ಮನುಷ್ಯನ ಸ್ವಾರ್ಥದ ಕರ್ಮ ಡಾ. ಬಸವರಾಜ ಸಾದರ. — + —
Read More »ಆಧಾರ್ ನವೀಕರಣ:ಸ್ಪಷ್ಟತೆಯಿರಲಿ
ಆಧಾರ್ ನವೀಕರಣ:ಸ್ಪಷ್ಟತೆಯಿರಲಿ ಇತ್ತೀಚೆಗೆ ಮಾಧ್ಯಮಗಳಲ್ಲಿ, ಹತ್ತು ವರ್ಷಗಳ ಹಿಂದೆ ಮಾಡಿಸಿದ ಆಧಾರ್ ಕಾರ್ಡ್‌ಗಳನ್ನು ನವೀಕರಣ ಮಾಡಬೇಕೆಂದು ಸೂಚಿಸಿರುವ ವರದಿಗಳು ಬರುತ್ತಿವೆ. ತುಂಬಾ ಹಳೆಯ ಫೊಟೋ, ವಿಳಾಸ ಮತ್ತಿತರ ವಿವರಗಳನ್ನು ನವೀಕರಿಸುವ ಉದ್ದೇಶದಿಂದ ಇದನ್ನು ಮಾಡುತ್ತಿರಬಹುದು, ಆದರೆ ಈ ವಿಷಯದಲ್ಲಿ ಬಹಳಷ್ಟು ಗೊಂದಲಗಳಿವೆ. ಮೊದಲನೇಯದಾಗಿ ಮೂಲ ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷ ಮೀರಿದ ಪ್ರಕರಣಗಳಲ್ಲಿ ಮಾತ್ರ ನವೀಕರಣ ಮಾಡಬೇಕೇ ಅಥವಾ ಯಾವುದಾದರೂ ಕಾರಣದಿಂದ ಆಧಾರ್‌ನಲ್ಲಿ ಬದಲಾವಣೆ ಮಾಡಿದ್ದರೆ ಆ ದಿನದಿಂದ …
Read More »ರೈತೋದ್ಧಾರ
ರೈತೋದ್ಧಾರ —————– ಬೇಕಿಲ್ಲ ರೈತನಿಗೆ ಯಾರಿಂದಲೂ ಕರುಣೆ-ಆಶ್ವಾಸನೆ, ಧನ-ದಾನ; ಸಿಕ್ಕರೆ ಸಾಕು ಬೆವರಿಂದ ಬೆಳೆದುಕೊಡುವ ಅವನ ಅನ್ನಫಲಕ್ಕೆ ಯೋಗ್ಯ ಬೆಲೆ-ಮಾನ. ಡಾ. ಬಸವರಾಜ ಸಾದರ. — + —
Read More »ಮನಮೈಲಿಗೆ
ಮನಮೈಲಿಗೆ —————– ಮುಟ್ಟಲ್ಲೆ ಹುಟ್ಟಿ, ಮುಟ್ಟೇ ಮೈಲಿಗೆಯೆಂದರೆ, ಹುಟ್ಟಿದವ ಹೇಗಾದಾನು ಶುದ್ಧ? ಮನಸ್ಸು ಕ್ರಿಯೆಗಳಲ್ಲೇ ಇರದಿದ್ದರೆ ಸುಸಂಬದ್ಧತೆ, ಮಾಡುವುದೆಲ್ಲವೂ ಅಶುದ್ಧ. ಡಾ. ಬಸವರಾಜ ಸಾದರ. — + —
Read More »ಸಂಬಂಧ
ಸಂಬಂಧ ————- ಇರದಿದ್ದರೆ, ನೆನಪಿಗೆ ಮರೆವು, ಮರೆವಿಗೆ ನೆನಪು, ಹುಚ್ಚನಾಗುತ್ತಿದ್ದ ಮನುಷ್ಯ; ಎರಡೂ ಕೂಡಿಯೆ ರೂಪಿಸುತ್ತವೆ ಅವನ ಮುಂಭವಿಷ್ಯ. ಡಾ. ಬಸವರಾಜ ಸಾದರ.
Read More »